For Quick Alerts
  ALLOW NOTIFICATIONS  
  For Daily Alerts

  ವಿಜಯ್ ಗೆ ಇಲ್ಲ ಕೊರೊನಾ ಭಯ: 'ರಾಬರ್ಟ್' ರಿಲೀಸ್ ದಿನವೇ 'ಮಾಸ್ಟರ್' ಎಂಟ್ರಿ?

  |

  ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಇಳಯದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಕೂಡ ಒಂದು. ಈಗಾಗಲೆ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ಮಾಸ್ಟರ್ ಇದೆ ಏಪ್ರಿಲ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ.

  ಆದರೆ ಕೊರೊನಾ ವೈರಸ್ ಹಾವಳಿಯಿಂದ ಇಡೀ ಚಿತ್ರರಂಗದ ಲೆಕ್ಕಾಚಾರ ತಲೆಕೆಳಗಾಗಿದೆ. ಹಾಗಾಗಿ ಮಾಸ್ಟರ್ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಮೂಲಗಳ ಪ್ರಕಾರ ಮಾಸ್ಟರ್ ಸಿನಿಮಾ ಏಪ್ರಿಲ್ ಗೆ ತೆರೆಗೆ ಬರುವುದು ಪಕ್ಕಾ ಎಂದು ಹೇಳುತ್ತಿದ್ದಾರೆ. ಇತ್ತ ಸ್ಯಾಂಡಲ್ ವುಡ್ ನಲ್ಲಿಯೂ ಬಹುನಿರೀಕ್ಷೆಯ ರಾಬರ್ಟ್ ಏಪ್ರಿಲ್ ಗೆ ಬರಲು ಸಜ್ಜಾಗಿದೆ. ಮುಂದೆ ಓದಿ..

  ವಿಜಯ್ ಸೇತುಪತಿ 'ಮಾಸ್ಟರ್' ಸಿನಿಮಾ ಒಪ್ಪಿಕೊಂಡ ಕಾರಣ ಬಹಿರಂಗ ಪಡಿಸಿದ ದಳಪತಿವಿಜಯ್ ಸೇತುಪತಿ 'ಮಾಸ್ಟರ್' ಸಿನಿಮಾ ಒಪ್ಪಿಕೊಂಡ ಕಾರಣ ಬಹಿರಂಗ ಪಡಿಸಿದ ದಳಪತಿ

  ಭಾರತದಲ್ಲಿ ಸಂಪೂರ್ಣ ಚಿತ್ರರಂಗ ಬಂದ್

  ಭಾರತದಲ್ಲಿ ಸಂಪೂರ್ಣ ಚಿತ್ರರಂಗ ಬಂದ್

  ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಏಪ್ರಿಲ್ ಗೆ ಬರುವುದು ಖಚಿತ ಎಂದು ಹೇಳಲಾಗುತ್ತಿದೆ. ವಿಶ್ವದಾದ್ಯಂತ ಕೊರೊನಾ ವೈರಸ್ ಹಾವಳಿಯ ಪರಿಣಾಮ ಇಡೀ ಭಾರತೀಯ ಚಿತ್ರರಂಗ ಸಂಪೂರ್ಣ ಬಂದ್ ಆಗಿದೆ. ಸಿನಿಮಾ ಚಿತ್ರೀಕರಣ, ಪ್ರದರ್ಶನ ಸೇರಿದಂತೆ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದೆ. ಹಾಗಾಗಿ ಬಹುನಿರೀಕ್ಷೆಯ, ಬಿಗ್ ಬಜೆಟ್ ಚಿತ್ರಗಳ ರಿಲೀಸ್ ದಿನಾಂಕ ಮುಂದಕ್ಕೆ ಹೋಗುತ್ತೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

  'ಮಾಸ್ಟರ್' ಆಡಿಯೋ ಬಿಡುಗಡೆಯಲ್ಲಿ ತಲಾ ಅಜಿತ್ ಬಗ್ಗೆ ವಿಜಯ್ ಹೇಳಿದ್ದೇನು?'ಮಾಸ್ಟರ್' ಆಡಿಯೋ ಬಿಡುಗಡೆಯಲ್ಲಿ ತಲಾ ಅಜಿತ್ ಬಗ್ಗೆ ವಿಜಯ್ ಹೇಳಿದ್ದೇನು?

  ಏಪ್ರಿಲ್ ಗೆ ಮಾಸ್ಟರ್ ಪಕ್ಕಾ

  ಏಪ್ರಿಲ್ ಗೆ ಮಾಸ್ಟರ್ ಪಕ್ಕಾ

  ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಏಪ್ರಿಲ್ ಗೆ ತೆರೆಗೆ ಬರುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಈ ಮೊದಲೆ ಅಂದುಕೊಂಡ ದಿನಾಂಕದಂತೆ ಮಾಸ್ಟರ್ ಸಿನಿಮಾ ತೆರೆಗೆ ಬರುತ್ತಿದೆಯಂತೆ. ಈ ಮೊದಲು ಅಂದರೆ ಏಪ್ರಿಲ್ 9ಕ್ಕೆ ಸಿನಿಮಾ ಮಾಸ್ಟರ್ ಸಿನಿಮಾ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿತ್ತು. ಕೊರೊನಾಗೆ ಭಯ ಪಡದೆ ಅಂದುಕೊಂಡ ದಿನಾಂಕದಂತೆ ವಿಜಯ್ ಅಭಿಮಾನಿಗಳ ಮುಂದೆ ಬರಲಿದ್ದಾರೆ.

  ಏಪ್ರಿಲ್ 9ಕ್ಕೆ ಬರ್ತಿದೆ ರಾಬರ್ಟ್

  ಏಪ್ರಿಲ್ 9ಕ್ಕೆ ಬರ್ತಿದೆ ರಾಬರ್ಟ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬುಹು ನಿರೀಕ್ಷೆಯ ರಾಬರ್ಚ್ ಸಿನಿಮಾ ಕೂಡ ಏಪ್ರಿಲ್ 9ಕ್ಕೆ ಬರಲು ಸಜ್ಜಾಗಿದೆ. ಕೊರೊನಾ ಹಾವಳಿಯ ಇದ್ದರು, ಭಯ ಪಡದೆ ರಾಬರ್ಟ್ ಏಪ್ರಿಲ್ ಗೆ ಬರುವುದು ಖಚಿತ ಎಂದು ಚಿತ್ರತಂಡ ಹೇಳಿದೆ. ಹಾಗಾಗಿ ಏಪ್ರಿಲ್ 9ಕ್ಕೆ ದಕ್ಷಿಣ ಭಾರತದ ಎರಡು ದೊಡ್ಡ ಸಿನಿಮಾಗಳು ಒಂದೇ ದಿನಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ. ಕೊರೊನಾ ಪರಿಣಾಮದ ನಂತರ, ಮೊದಲ ಬಾರಿಗೆ ಎರಡು ದೊಡ್ಡ ಸಿನಿಮಾಗಳು ಎಂಟ್ರಿ ಕೊಡುತ್ತಿವೆ. ಹಾಗಾಗಿ ಪ್ರೇಕ್ಷಕರಿಂದ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎನ್ನುವುದನ್ನು ಕಾದು ನೋಡಬೇಕು.

  ದರ್ಶನ್ ಗಿಲ್ಲ ಕೊರೊನಾ ಭಯ: ಹೇಳಿದ್ದ ಸಮಯಕ್ಕೆ ಅಭಿಮಾನಿಗಳ ಮುಂದೆ ಆಗಲಿದ್ದಾರೆ ಹಾಜರ್ದರ್ಶನ್ ಗಿಲ್ಲ ಕೊರೊನಾ ಭಯ: ಹೇಳಿದ್ದ ಸಮಯಕ್ಕೆ ಅಭಿಮಾನಿಗಳ ಮುಂದೆ ಆಗಲಿದ್ದಾರೆ ಹಾಜರ್

  ಮಾಸ್ಟರ್ ಆಡಿಯೋ ರಿಲೀಸ್ ಆಗಿದೆ

  ಮಾಸ್ಟರ್ ಆಡಿಯೋ ರಿಲೀಸ್ ಆಗಿದೆ

  ಕೊರೊನಾ ವೈರಸ್ ಹಾವಳಿಯ ನಡುವೆಯು ಮಾಸ್ಟರ್ ಸಿನಿಮಾದ ಆಡಿಯೋವನ್ನು ರಿಲೀಸ್ ಮಾಡಲಾಗಿದೆ. ಅಭಿಮಾನಿಗಳ ಮಧ್ಯ ಆಡಿಯೋ ರಿಲೀಸ್ ಮಾಡಬೇಕು ಎಂದುಕೊಂಡಿದ್ದ ಚಿತ್ರತಂಡ ಚಿತ್ರರಂಗದ ಗಣ್ಯರನ್ನು ಮಾತ್ರ ಆಹ್ವಾನಿಸಿ ಆಡಿಯೋ ಬಿಡುಗಡೆ ಮಾಡಿದೆ.

  ರಾಬರ್ಟ್ ಆಡಿಯೋ ರಿಲೀಸ್ ಕಾರ್ಯಕ್ರಮ ರದ್ದುಟ

  ರಾಬರ್ಟ್ ಆಡಿಯೋ ರಿಲೀಸ್ ಕಾರ್ಯಕ್ರಮ ರದ್ದುಟ

  ರಾಬರ್ಟ್ ಚಿತ್ರದ ಆಡಿಯೋವನ್ನು ಅದ್ದೂರಿಯಾಗಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿತ್ತು ಆದರೆ. ಉತ್ತರ ಕರ್ನಾಟಕದಲ್ಲಿ ಆಡಿಯೋ ಬಿಡುಗಡೆ ಮಾಡಬೇಕೆಂದು ನಿರ್ಧಾರ ಮಾಡಲಾಗಿತ್ತು ಎಂದು ಹೇಳಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಪರಿಣಾಮ ಅದ್ದೂರಿ ಕಾರ್ಯಕ್ರಮಕ್ಕೆ ಬ್ರೇಕ್ ಬಾಕಿ ಸರಳವಾಗಿ ಆಡಿಯೋ ರಿಲೀಸ್ ಮಾಡುವ ಸಾಧ್ಯತೆ ಇದೆ. ಆದರೆ ಯಾವಾಗ ಆಡಿಯೋ ರಿಲೀಸ್ ಆಗುತ್ತೆ ಎನ್ನುವುದು ಇನ್ನು ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.

  English summary
  Amid corona scare Tamil Actor Vijay starrer Master release on april. Darshan starrer Roberrt will also release on April.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X