ಸಂಬಂಧ ಮುರಿದು ಬಿದ್ದು ಇನ್ನೂ ಒಂದು ತಿಂಗಳಾಗಿಲ್ಲ,ಆಗಲೇ ಮತ್ತೊಂದು ಮದ್ವೆಯಾದರಾ ಜಯಂ ರವಿ..?
ನಮ್ಮ ಅಕ್ಕ-ಪಕ್ಕ ಆಗಬಹುದಾದ ಸಡನ್ ಸುದ್ದಿಗಳಿಗೆ ಜನಸಾಮಾನ್ಯರು ಟಿವಿ, ನ್ಯೂಸ್ ಪೇಪರ್ ಗಳನ್ನು ನಂಬುವ ಕಾಲ ಮರೆಯಾಯ್ತು. ಅಂಗೈಲ್ಲಿರುವ ಮೊಬೈಲ್ ನಲ್ಲಿಯೇ ಎಲ್ಲ ಸುದ್ದಿಗಳು ಘಟಿಸಿದ ಕೆಲವೇ ಸೆಕೆಂಡುಗಳಲ್ಲಿ ತಲುಪಿಬಿಡುತ್ತದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆದು, ನೋಡುಗರೇ ನಿಬ್ಬೆರಗಾಗುವಂತೆ ಮಾಡುತ್ತಿದೆ.
ಇನ್ನು ಸೋಶಿಯಲ್ ಮೀಡಿಯಾವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಬಂಧ ಬಾಹುವಿನಿಂದ ಆಕ್ರಮಿಸಿಕೊಂಡುಬಿಟ್ಟಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ಸುದ್ದಿಗಳು, ವಿಚಾರಗಳು ಸತ್ಯವೋ, ಸುಳ್ಳೋ ಎಂಬುದನ್ನು ಅರಿಯುವಷ್ಟರಲ್ಲಿ ಎಲ್ಲರಿಗೂ ಸುದ್ದಿಗಳು ಹರಡಿ ಮತ್ತಾವುದೋ ಪ್ರಮಾದವನ್ನು ಸೃಷ್ಟಿಸಿ ಬಿಟ್ಟಿರುತ್ತದೆ. ಇದಕ್ಕೆ ಜಯಂ ರವಿ ಎರಡನೇ ಮದುವೆ ವಿಚಾರ ಸದ್ಯದ ಉದಾಹರಣೆ.

ಹೌದು, ಮೊನ್ನೆ.. ಮೊನ್ನೆಯಷ್ಟೇ ಜಯಂ ರವಿ ಮತ್ತು ಆರತಿ ಅವರ ಹದಿನೈದು ವರ್ಷದ ದಾಂಪತ್ಯ ಮುರಿದು ಬಿದ್ದಿದೆ. ಯಾರದ್ದು ಸರಿ, ಯಾರದ್ದು ತಪ್ಪು ಎನ್ನುವ ಚರ್ಚೆ ನಡೆಯುತ್ತಿದೆ. ಉಸಿರಿಗೆ ಉಸಿರು ತಾಕುವಷ್ಟು ಹತ್ತಿರವಾಗಿದ್ದ ಈ ಇಬ್ಬರು ಈಗ ಬದ್ಧ ವೈರಿಗಳಂತೆ ಹಲ್ಲಲ್ಲು ಕಡಿಯುತ್ತಿದ್ದಾರೆ. ಪರಸ್ಪರ ಆರೋಪ-ಪ್ರತ್ಯಾರೋಪವನ್ನು ಮಾಡುವುದರ ಮೂಲಕ ಖಾಸಗಿ ಬದುಕನ್ನೇ ಗಲೀಜು ಮಾಡಿಕೊಂಡಿದ್ದಾರೆ. ಇದರ ನಡುವೆ ತೆಲುಗು ನಟಿ ಪ್ರಿಯಾಂಕ ಮೋಹನ್ ಜೊತೆ ಜಯಂ ರವಿ ಸದ್ದು ಗದ್ದಲ ಇಲ್ಲದೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಗುಲ್ಲಾಗಿದೆ. ಇಬ್ಬರ ಮದುವೆಯ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ, ಸತ್ಯಾಂಶವೇ ಬೇರೆ. ಅಸಲಿಗೆ ಜಯಂ ರವಿ ಮತ್ತು ಪ್ರಿಯಾಂಕ ಮೋಹನ್ ಬ್ರದರ್ ಎಂಬ ಚಿತ್ರದಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. ಇನ್ನೇನು ಈ ಅಕ್ಟೋಬರ್ 31ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಇಬ್ಬರ ಮದುವೆಯ ದೃಶ್ಯ ಇದೆ. ಆ ದೃಶ್ಯದ ಕೆಲ ಭಾವ ಚಿತ್ರಗಳನ್ನು ಈಗ ಹರಿಬಿಡಲಾಗಿದೆ. ವೈರಲ್ ಮಾಡಲಾಗಿದೆ. ಚಿತ್ರದ ಪ್ರಚಾರಕ್ಕೆ ಅನುಕೂಲವಾಗುತ್ತೆ ಎನ್ನುವ ದೃಷ್ಟಿಯಿಂದ ಈ ಫೋಟೋವನ್ನು ಚಿತ್ರತಂಡದವರೇ ಹೊರ ಬಿಟ್ಟಿದ್ದಾರಾ ಗೊತ್ತಿಲ್ಲ. ಆದರೆ, ಈ ಫೋಟೋಗಳನ್ನು ನೋಡಿ ಅನೇಕರು ಜಯಂ ರವಿ ಮತ್ತು ಪ್ರಿಯಾಂಕ ಮೋಹನ್ ನಿಜವಾಗಿಯೂ ಮದುವೆಯಾಗಿದ್ದಾರೆ ಎಂದೇ ಅಂದುಕೊಂಡಿದ್ದಾರೆ. ಆರತಿ ಅವರ ಜೊತೆ ಸಂಬಂಧ ಮುರಿದು ಬಿದ್ದು ಇನ್ನೂ ಒಂದು ತಿಂಗಳಾಗಿಲ್ಲ. ಆಗಲೇ ವಯಸ್ಸಿನಲ್ಲಿ ತಮಗಿಂತ 15 ವರ್ಷ ಚಿಕ್ಕವಳಾಗಿರುವ ಪ್ರಿಯಾಂಕ ಮೋಹನ್ ಜೊತೆ ಜಯಂ ರವಿ ಮತ್ತೊಂದು ಮದುವೆಯಾದ್ರಾ ಎಂದು ಚರ್ಚೆಯನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿದ್ದಾರೆ.
ಉಳಿದಂತೆ ತಮಗೆ ಹೇಳದೆ ಜಯಂ ರವಿ ವಿಚ್ಛೇದನ ಘೋಷಿಸಿದ್ದಾರೆ ಎಂದು ಆರತಿ ಈ ಹಿಂದೆ ಹೇಳಿದ್ದರು. ಆರತಿ ಅವರಿಂದ ಮಾನಸಿಕ ಕಿರುಕುಳವಾಗುತ್ತಿದೆ ಎಂದು ಜಯಂ ರವಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ಎನ್ನುವ ಸುದ್ದಿ ಇದೆ. ಆರತಿ ಮನೆಯಲ್ಲಿ ಇರುವ ತಮ್ಮ ಚಿನ್ನಾಭರಣ, ಪಾಸ್‌ಪೋರ್ಟ್, ಕಾರ್ ಕೀ ಸೇರಿದಂತೆ ಒಂದಷ್ಟು ವಸ್ತುಗಳನ್ನು ವಾಪಸ್ ಕೊಡಿಸಿ ಎಂದು ಜಯಂ ರವಿ ತಮ್ಮ ದೂರಿನಲ್ಲಿ ಕೇಳಿಕೊಂಡಿದ್ದಾರೆ ಎಂದು ತಮಿಳು ಮಾಧ್ಯಮಗಳು ಕೂಡ ವರದಿ ಮಾಡಿವೆ. ಇನ್ನೂ ಜಯಂ ರವಿ ಮತ್ತು ಆರತಿ ದಾಂಪತ್ಯ ಮುರಿದು ಬಿದ್ದ ನಂತರ ಬೆಂಗಳೂರು ಮೂಲದ ಗಾಯಕಿ ಕೆನಿಶಾ ಫ್ರಾನ್ಸಿಸ್ ಹೆಸರು ಕೇಳಿ ಬಂದಿತ್ತು. ಕೆನಿಶಾ ಜೊತೆ ಜಯಂ ರವಿ ಗೋವಾದಲ್ಲಿ ಆರತಿ ಸಿಕ್ಕಿ ಬಿದ್ದಿದ್ದರು ಎಂಬ ಸುದ್ದಿಯೂ ಹೊರ ಬಂದಿತ್ತು. ಇದಕ್ಕೆ ಕೆಂಡ ಕಾರಿದ್ದ ಕೆನಿಶಾ ನನ್ನನ್ನೂ ಬಿಟ್ಟು ಬಿಡಿ ಎಂದಿದ್ದರು. ಜಯಂ ರವಿ ಕೂಡ ಕೆನಿಶಾ ಅವರ ಹೆಸರನ್ನ ಎಳೆದು ತರಬೇಡಿ ಎಂದು ಹೇಳಿದ್ದರು.


Click it and Unblock the Notifications











