ತ್ರಿಶಾ ಜೊತೆ ವಿಜಯ್ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೆ ಕೋರ್ಟ್ ಮೆಟ್ಟಿಲೇರಿ ಶಾಕ್ ಕೊಟ್ಟ ಸಂಗೀತಾ

ತಮಿಳು ನಟ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ವಿವಾದ ತಾರಕಕ್ಕೇರಿದೆ. ಈಗಾಗಲೇ ಸಂಗೀತಾ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಪತಿ ವಿಜಯ್ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ತಮಿಳು ಚಿತ್ರರಂಗ ಹಾಗೂ ತಮಿಳುನಾಡು ರಾಜಕೀಯರಂಗದಲ್ಲಿ ಈ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ.

ವಿಜಯ್ ಹಾಗೂ ತ್ರಿಶಾ ನಡುವಿನ ಸಂಬಂಧವೇ ಇದಕ್ಕೆಲ್ಲಾ ಕಾರಣ ಎನ್ನುವ ಚರ್ಚೆ ಜೋರಾಗಿದೆ. ಇದೆಲ್ಲದರ ನಡುವೆ ನಟಿ ತ್ರಿಶಾ ಜೊತೆ ವಿಜಯ್ ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿತ್ತು. ಇಬ್ಬರೂ ಒಂದೇ ಕಾರಿನಲ್ಲಿ ಒಟ್ಟಿಗೆ ಬಂದು ಮದುವೆ ಸಮಾರಂಭದಲ್ಲಿ ನವ ವಧು,ವರರಿಗೆ ಶುಭ ಹಾರೈಸಿ ಮತ್ತೆ ಒಂದೇ ಕಾರ್ ಏರಿ ಹೊರಟರು. ಸದ್ಯ ವಿಜಯ್ ಪತ್ನಿ ಸಂಗೀತಾ ಮತ್ತೊಂದು ಶಾಕ್ ಕೊಟ್ಟಿದ್ದಾರೆ.

Amid the divorce dispute Sangeeta has sought the right to stay in Vijay s matrimonial home

ಜೀವನಾಂಶ ಮತ್ತು ವಸತಿ ಹಕ್ಕುಗಳನ್ನು ಕೋರಿ ಇದೀಗ ಮತ್ತೆ ವಿಜಯ್ ಪತ್ನಿ ಸಂಗೀತಾ ನ್ಯಾಯಾಲಯದಲ್ಲಿ ಹೊಸ ಅರ್ಜಿ ಸಲ್ಲಿಸಿದ್ದಾರೆ. ಸಂಗೀತಾ ಸಂಗೀತಾ ಯುನೈಟೆಡ್ ಕಿಂಗ್ಡಮ್‌ನ ಪ್ರಜೆಯಾಗಿದ್ದು ಲಂಡನ್‌ನಲ್ಲಿ ಓದಿ ಬೆಳೆದವರು. ವಿಜಯ್ ಅವರನ್ನು ಪ್ರೀತಿಸಿ ಆಗಸ್ಟ್ 25, 1999 ರಂದು ಮದುವೆ ಆಗಿದ್ದರು. ದಂಪತಿಗೆ ಸಂಜಯ್ ಎಂಬ ಮಗ ಮತ್ತು ದಿವ್ಯ ಎಂಬ ಮಗಳು ಇದ್ದಾರೆ.

ಕಾನೂನಾತ್ಮಕವಾಗಿ ಡಿವೋರ್ಸ್ ಪಡೆದು ದೂರಾಗಲು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಒಂದೇ ಮನೆಯಲ್ಲಿ ವಾಸಿಸಲು ಅವಕಾಶ ನೀಡುವುದಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ ಎಂದು ಸಂಗೀತಾ ಹೊಸ ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಕಾನೂನು ಪ್ರಕ್ರಿಯೆಗಳ ಸಮಯದಲ್ಲಿ ತಾವು ಚೆನ್ನೈನಲ್ಲಿ ಉಳಿಯಲು ವಸತಿ ಬೇಕು ಎಂದು ಸಂಗೀತಾ ಮಧ್ಯಂತರ ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ತನಗೆ ಸೂಕ್ತವಾದ ಪರ್ಯಾಯ ವಸತಿ ಸೌಕರ್ಯ ಒದಗಿಸುವವರೆಗೆ ಈಗ ಒಟ್ಟಿಗೆ ಇರುವ ಮನೆಯಲ್ಲಿ ವಾಸಿಸಲು ಅವಕಾಶ ನೀಡಬೇಕೆಂದು ಸಂಗೀತಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸದ್ಯಕ್ಕೆ ತಮಗೆ ಭಾರತದಲ್ಲಿ ನೆಲೆಸಲು ಸ್ವಂತ ನಿವಾಸ ಇಲ್ಲದ ಕಾರಣ ನ್ಯಾಯಾಲಯದಲ್ಲಿ ಮನವಿ ಮಾಡುತ್ತಿರುವುದಾಗಿ ವಾದಿಸಿದ್ದಾರೆ.

ಡಿವೋರ್ಸ್ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿರುವ ಸಂಗೀತಾ ಹೊಸ ಅರ್ಜಿಯಲ್ಲಿ ಕೂಡ "ನ್ಯಾಯಯುತ ಮತ್ತು ಸಮಂಜಸವಾದ ಶಾಶ್ವತ ಜೀವನಾಂಶ ಪಾವತಿ" ಮಾಡುವಂತೆ ನ್ಯಾಯಾಲಯದ ಮೂಲಕ ವಿಜಯ್ ಅವರಲ್ಲಿ ಮನವಿ ಮಾಡಿದ್ದಾರೆ. ವಾರದ ಹಿಂದೆ ಸಂಗೀತಾ ಡಿವೋರ್ಸ್ ಕೋರಿ ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಟಿಯ ಜೊತೆಗಿನ ಅನೈತಿಕ ಸಂಬಂಧವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದರು.

ನಟಿಯ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರೂ, ಅದು ಮುಂದುವರೆದಿದೆ. ಇದೇ ಕಾರಣಕ್ಕೆ ತಮ್ಮನ್ನು ಸಾಮಾಜಿಕ ಮತ್ತು ವೃತ್ತಿಪರ ಜೀವನದಿಂದ ಹೊರಗಿಡಲು ಪ್ರಾರಂಭಿಸಿದರು ಎಂದು ಸಂಗೀತಾ ಅರ್ಜಿಯಲ್ಲಿ ತಿಳಿಸಿದ್ದರು. ಆ ನಟಿಯ ಜೊತೆ ವಿದೇಶ ಪ್ರವಾಸ ಕೈಗೊಳ್ಳುವುದು, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ಗಳು ತಮಗೂ ಮತ್ತು ಮಕ್ಕಳಿಗೆ ಅವಮಾನವನ್ನುಂಟುಮಾಡಿವೆ ಎಂದು ಸಂಗೀತಾ ಅಳಲು ತೋಡಿಕೊಂಡಿದ್ದರು.

'ಗಿಲ್ಲಿ' ಹಾಗೂ 'ಲಿಯೊ' ಸೇರಿ ನಾಲ್ಕೈದು ಸಿನಿಮಾಗಳಲ್ಲಿ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ನಟಿಸಿದ್ದಾರೆ. ಇಬ್ಬರೂ ಆತ್ಮೀಯ ಸ್ನೇಹಿತರು ಕೂಡ. ಈ ಹಿಂದೆ ಕೂವ ವಿಜಯ್ ಹಾಗೂ ಸಂಗೀತಾ ಡಿವೋರ್ಸ್ ವದಂತಿ ಹರಿದಾಡಿತ್ತು. ಆಗ ಕೂಡ ತ್ರಿಶಾ ಹೆಸರು ತಳಕು ಹಾಕಲಾಗಿತ್ತು.

More from Filmibeat

Read more about: vijay trisha kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X