ನಾನು ಪ್ರೆಗ್ನೆಂಟ್ ಅಂದ್ರೆ ಮಾತ್ರ ಬ್ರೇಕ್, ಇಲ್ಲ ಅಂದ್ರೆ ಇಲ್ಲ; ತ್ರಿಶಾ ಆ ನಿರ್ಧಾರಕ್ಕೆ ಇದೇ ಕಾರಣ

ತಮಿಳು ನಟ ವಿಜಯ್‌ ಪತ್ನಿ ಸಂಗೀತಾ ಡಿವೋರ್ಸ್ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಲು ನಟಿಯೊಬ್ಬಳು ಕಾರಣ ಎಂದು ತಿಳಿಸಿದ್ದಾರೆ. ಆ ನಟಿ ಯಾರು ಎಂದು ಬಹಿರಂಗಪಡಿಸಿಲ್ಲ. ಆದರೆ ನಟ ವಿಜಯ್ ಹಾಗೂ ನಟಿ ತ್ರಿಶಾ ನಡುವೆ ಆತ್ಮೀಯ ಒಡನಾಟವಿದ್ದು ಆಕೆಯ ಬಗ್ಗೆ ಭಾರೀ ಆರೋಪ ಕೇಳಿಬರ್ತಿದೆ.

ತ್ರಿಶಾ ಕಾರಣಕ್ಕೆ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎಂದು ಸುದ್ದಿ ಆಗ್ತಿದೆ. ಇತ್ತೀಚೆಗೆ ವಿಜಯ್ ಹಾಗೂ ತ್ರಿಶಾ ಜೋಡಿಯಾಗಿ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಇದರಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿತ್ತು. ಅಂದಹಾಗೆ ವಯಸ್ಸು 40 ದಾಟಿದ್ರು ತ್ರಿಶಾ ಇನ್ನು ಮದುವೆ ಆಗಿಲ್ಲ. 2015ರಲ್ಲಿ ಉದ್ಯಮಿ ಒಬ್ಬರ ಜೊತೆ ಎಂಗೇಜ್‌ಮೆಂಟ್ ನಡೆದಿತ್ತು. ಆದರೆ ಬಳಿಕ ಮದುವೆಗೆ ತ್ರಿಶಾ ಒಲ್ಲೆ ಎಂದಿದ್ದರು.

Amid Vijay Sangeeta Divorce Buzz Trisha s Past Engagement Breakup Over Films Resurfaces

ಸದ್ಯ ವಿಜಯ್- ಸಂಗೀತಾ ಡಿವೋರ್ಸ್ ವಿವಾದದಲ್ಲಿ ತ್ರಿಶಾ ಹೆಸರು ಕೇಳಿಬರ್ತಿದ್ದಂತೆ ಆಕೆಯ ಹಿಂದಿನ ಎಂಗೇಜ್‌ಮೆಂಟ್ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಅಷ್ಟಕ್ಕೂ ತ್ರಿಶಾ ಅಂದು ಮದುವೆ ಬೇಡ ಎಂದು ಪಟ್ಟು ಹಿಡಿದಿದ್ದು ಯಾಕೆ ಎನ್ನುವ ಬಗ್ಗೆಯೂ ಕೆಲವರು ಹುಡುಕಾಟ ನಡೆದಿದ್ದಾರೆ. 11 ವರ್ಷಗಳ ಹಿಂದೆ ಉದ್ಯಮಿ ವರುಣ್ ಮಣಿಯನ್ ಎಂಬುವವರ ಜೊತೆ ಮದುವೆಗೆ ಮುಂದಾಗಿದ್ದರು. ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಬಳಿಕ ಬ್ರೇಕಪ್ ಆಗಿತ್ತು. ಟ್ವೀಟ್ ಮಾಡಿ ಈ ಬಗ್ಗೆ ತ್ರಿಶಾ ಮಾಹಿತಿ ನೀಡಿದ್ದರು. ಸಿಂಗಲ್ ಆಗಿ ಇರುವುದು ಖುಷಿಯಾಗಿದೆ ಎಂದು ಬರೆದುಕೊಂಡಿದ್ದರು.

ಬಳಿಕ ಸಂದರ್ಶನವೊಂದರಲ್ಲಿ ಬ್ರೇಕಪ್ ಬಗ್ಗೆ ನಟಿ ತ್ರಿಶಾ ಪ್ರತಿಕ್ರಿಯಿಸಿದ್ದರು. ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಬೇಕು ಎಂದರು. ಅದು ನನಗೆ ಒಪ್ಪಿಗೆ ಆಗಲಿಲ್ಲ. ಅದಕ್ಕೆ ಈ ನಿರ್ಧಾರ ಎಂದಿದ್ದರು. ನಟನೆಯ ಬಗ್ಗೆ ತಮ್ಮ ಆಸಕ್ತಿಯಲ್ಲಿ ತ್ರಿಶಾ ಈ ವೇಳೆ ಬಹಿರಂಗಪಡಿಸಿದ್ದರು. ಸಾಯುವವರೆಗೂ ನಟಿಸಬೇಕು ಎನ್ನುವುದು ನನ್ನ ಆಸೆ ಎಂದು ತಿಳಿಸಿದ್ದರು.

Amid Vijay Sangeeta Divorce Buzz Trisha s Past Engagement Breakup Over Films Resurfaces

ತ್ರಿಶಾ ಮಾತನಾಡಿ "ನಟನೆ ಬಿಡಬೇಕು ಎಂದು ಹೇಳಿದ್ದಕ್ಕೆ ಮದುವೆ ಕ್ಯಾನ್ಸಲ್ ಆಗಿದ್ದು. ನಾನು ಮದುವೆ ಆಗಬೇಕಿದ್ದ ವ್ಯಕ್ತಿ ನಟನೆ ಮಾಡುವುದು ನಿಲ್ಲಿಸಲು ಹೇಳಿದ್ರು. ಅದಕ್ಕೆ ನಾನು ಎಂಗೇಜ್‌ಮೆಂಟ್‌ಗೆ ಫುಲ್‌ ಸ್ಟಾರ್ ಇಡಲು ತೀರ್ಮಾನಿಸಿದೆ. ನಾನು ಪ್ರಗ್ನೆಂಟ್ ಆದಾಗ ಮಾತ್ರ ನಟನೆಯಿಂದ ಬ್ರೇಕ್ ಪಡೆಯುತ್ತೇನೆ. ನಾಯಕಿಯಾಗಿ ಅವಕಾಶಗಳು ಸಿಗದೇ ಇದ್ದರೂ ಪೋಷಕ ಪಾತ್ರಗಳಲ್ಲಿ ನಟಿಸುತ್ತೇನೆ. ಯಾವುದೇ ಕಾರಣಕ್ಕೂ ಸಿನಿಮಾ ಬಿಡಲ್ಲ. ನನ್ನ ಕೊನೆ ಉಸಿರಿರುವ ತನಕ ನಟಿಸಬೇಕು ಎನ್ನುವುದು ನನ್ನ ಬಯಕೆ" ಎಂದಿದ್ದರು.

27 ವರ್ಷಗಳಿಂದ ತ್ರಿಶಾ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. 1999ರಲ್ಲಿ 'ಜೋಡಿ' ಎಂಬ ಚಿತ್ರದಲ್ಲಿ ಮೊದಲಬಾರಿಗೆ ನಟಿಸಿದ್ದರು. 2004ರಲ್ಲಿ 'ಗಿಲ್ಲಿ' ಎಂಬ ಚಿತ್ರದಲ್ಲಿ ವಿಜಯ್ ಜೊತೆ ನಟಿಸುವ ಅವಕಾಶ ಪಡೆದಿದ್ದರು. ಬಳಿಕ 'ತಿರುಪಾಚ್ಚಿ', 'ಆಥಿ', 'ಕುರುವಿ', 'ಲಿಯೋ' ಹೀಗೆ ನಾಲ್ಕೈದು ಸಿನಿಮಾಗಳಲ್ಲಿ ಇಬ್ಬರ ಕಾಂಬಿನೇಷನ್ ಹಿಟ್ ಆಗಿತ್ತು.

ಇಂದಿಗೂ ತ್ರಿಶಾ ನಾಯಕಿಯಾಗಿಯೇ ನಟಿಸುತ್ತಿದ್ದಾರೆ. ಈ ವರ್ಷ ತ್ರಿಶಾ ನಟನೆಯ 3 ಸಿನಿಮಾಗಳು ಬಿಡುಗಡೆ ಆಗಬೇಕಿದೆ. ತಮಿಳಿನಲ್ಲಿ ಸೂರ್ಯ ಜೊತೆ ನಟಿಸಿರುವ 'ಕರುಪು', ತೆಲುಗಿನಲ್ಲಿ ಚಿರಂಜೀವಿ ಜೋಡಿಯಾಗಿ 'ವಿಶ್ವಂಭರ' ಹಾಗೂ ಮಲಯಾಳಂನಲ್ಲಿ ಮೋಹನ್ ಲಾಲ್ ಜೊತೆ 'ರಾಮ್' ಎಂಬ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಟಿ ತ್ರಿಶಾ ಬಗ್ಗೆ ತಮಿಳು ನಟ, ನಿರ್ದೇಶಕ ಪಾರ್ತಿಬನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಆಕೆ ಪ್ರತಿಕ್ರಿಯಿಸುತ್ತಿದ್ದಂತೆ ಪಾರ್ತಿಬನ್ ಕ್ಷಮೆ ಕೇಳಿದ್ದಾರೆ.

More from Filmibeat

Read more about: vijay kollywood trisha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X