ಕೊರೊನಾ ಸೋಂಕಿಗೆ ಸಿಲುಕಿದ ಜನಪ್ರಿಯ ಬಹುಭಾಷಾ ನಟಿ, ಗಾಯಕಿ
ಕೊವಿಡ್ 19 ಸೋಂಕಿಗೆ ಸಿಲುಕಿದ ಸೆಲೆಬ್ರಿಟಿಗಳ ಸಾಲಿಗೆ ಜನಪ್ರಿಯ ನಟಿ, ಗಾಯಕಿ ಸೇರ್ಪಡೆಯಾಗಿದ್ದಾರೆ. ಬಹುಭಾಷಾ ನಟಿ ಆಂಡ್ರಿಯಾ ಜೆರೆಮಿಯಾ ಅವರು ಕೊವಿಡ್ 19 ಪಾಸಿಟಿವ್ ವರದಿ ಬಂದ ಬಳಿಕ ವೈದ್ಯದ ಸಲಹೆಯಂತೆ ಕಳೆದ ಒಂದು ವಾರದಿಂದ ಕ್ವಾರಂಟೈನ್‌ನಲ್ಲಿದ್ದಾರೆ.
ಸೋಂಕು ತಗುಲುತ್ತಿದ್ದಂತೆ ಸಾಮಾಜಿಕ ಜಾಲತಾಣದಿಂದ ಕೆಲ ಕಾಲ ದೂರ ಉಳಿದಿದ್ದೆ. ಕ್ವಾರಂಟೈನ್ ಸಮಯದಲ್ಲಿ ನಿಯಮಿತವಾಗಿ ವರ್ಕೌಟ್ ಮಾಡುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.
ನನ್ನ ಸ್ನೇಹಿತರು ಹಾಗೂ ಕುಟುಂಬಸ್ಥರು ಸರಿಯಾದ ಸಮಯದಲ್ಲಿ ನೆರವಿಗೆ ಬಂದರು. ಈಗಲೂ ನಾನು ಕ್ವಾರಂಟೈನ್ ನಲ್ಲಿದ್ದೇನೆ. ಕೋವಿಡ್ ಸಂಕಷ್ಟದಲ್ಲಿ ದೇಶ ಸಿಲುಕಿರುವಾಗ ಏನು ಮಾಡುವುದೆಂದು ತೋಚುತ್ತಿಲ್ಲ, ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡು ಸೊಗಸಾದ ಹಾಡೊಂದನ್ನು ಪಿಯೋನೋ ನುಡಿಸುತ್ತಾ ಹಾಡಿದ್ದಾರೆ.

If This world were Mine ಎಂಬ ಹಾಡಿರುವ ವಿಡಿಯೋ ಹಾಕಿಕೊಂಡಿದ್ದಾರೆ. ವಿಜಯ್ ನಟನೆಯ ಮಾಸ್ಟರ್ ಚಿತ್ರದಲ್ಲಿ ಆಂಡ್ರಿಯಾ ಕಾಣಿಸಿಕೊಂಡಿದ್ದರು. ಸುಂದರ್ ಸಿ ನಿರ್ದೇಶನದ ಅರಂಮನೈ 3ನಲ್ಲಿ ನಟಿಸಿದ್ದು, ಇನ್ನೂ ತೆರೆ ಕಾಣಬೇಕಿದೆ. ಇದಲ್ಲದೆ ನೋ ಎಂಟ್ರಿ, ವಟ್ಟಾಂ, ಮಾಲಿಗೈ, ಕಾ, ಪಿಸಾಸು 2 ಮುಂತಾದ ಚಿತ್ರಗಳು ವಿವಿಧ ಹಂತಗಳಲ್ಲಿವೆ.


Click it and Unblock the Notifications











