'ಟಾಕ್ಸಿಕ್' ಮಿಸ್ ಆದ್ರೆ ಏನು, ಅನಿರುದ್ಧ್ ರವಿಚಂದರ್ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ
ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿ ಕಾಲಿವುಡ್ ರಾಕ್‌ಸ್ಟಾರ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೂ ಮ್ಯೂಸಿಕ್ ಮಾಡ್ತಾರೆ ಎನ್ನುವ ವದಂತಿ ಹರಿದಾಡಿತ್ತು. ಆದರೆ ಕೊನೆ ಕ್ಷಣದಲ್ಲಿ ರವಿಬಸ್ರೂರು ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದರು.
ತಮ್ಮ ವಿಭಿನ್ನ ಮ್ಯೂಸಿಕ್ ಶೈಲಿಯಿಂದ ಅನಿರುದ್ಧ್ ರವಿಚಂದರ್ ಪದೇ ಪದೆ ಸಿನಿರಸಿಕರ ಗಮನ ಸೆಳೆಯುತ್ತಿದ್ದಾರೆ. ಹೈ ಬಜೆಟ್ ಸಿನಿಮಾಗಳಿಗೆ ಇವರ ಮ್ಯೂಸಿಕ್ ಬೇಕು ಎಂದು ಫಿಲ್ಮ್ ಮೇಕರ್ಸ್ ಪಟ್ಟು ಹಿಡಿಯುತ್ತಿದ್ದಾರೆ. ಕೇಳಿದಷ್ಟು ಸಂಭಾವನೆ ಕೊಟ್ಟು ಬುಕ್ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಕ್ರೇಜ್‌ಗೆ ತಕ್ಕಂತೆ ಟ್ಯೂನ್ ಹಾಕಿ ಅನಿರುದ್ಧ್ ಜಾದೂ ಮಾಡುತ್ತಾ ಬರ್ತಿದ್ದಾರೆ. ಸದ್ಯ ಬಿಡುಗಡೆ ಆಗಿರುವ 'ಜೈಲರ್'-2 ಚಿತ್ರದ ಸಣ್ಣ ಟೀಸರ್ ಬಿಜಿಎಂ ಮೂಲಕ ಮತ್ತೊಮ್ಮೆ ಅನಿರುದ್ಧ್ ಸುದ್ದಿಯಾಗಿದ್ದಾರೆ.

'ಜೈಲರ್'-2 ಸಣ್ಣ ಝಲಕ್ ವೈರಲ್ ಆಗ್ತಿದೆ. ಹಂಟಿಂಗ್ ಬಿಜಿಎಂ ಅದರಲ್ಲಿ ಹೈಲೆಟ್ ಆಗಿದೆ. ಸೂಪರ್ ಸ್ಟಾರ್ ಹಾಗೂ ಅನಿರುದ್ಧ್ ಕಾಂಬೋ ಮತ್ತೆ ಹಿಟ್ ಆಗುತ್ತದೆ ಎನ್ನುವ ಟಾಕ್ ಶುರುವಾಗಿದೆ. 3 ವರ್ಷಗಳ ಹಿಂದೆ 'ಜೈಲರ್' ಸಿನಿಮಾ ಗೆಲುವಿನಲ್ಲಿ ಕೂಡ ರಾಕ್‌ಸ್ಟಾರ್ ಪಾಲು ಇತ್ತು. ತಮ್ಮ ಬಿಜಿಎಂ ಮೂಲಕವೇ ಸಾಕಷ್ಟು ಸನ್ನಿವೇಶಗಳನ್ನು ಗೆಲ್ಲಿಸಿಬಿಟ್ಟಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ನರಸಿಂಹ ಆಗಿ ಶಿವಣ್ಣದ ಆರ್ಭಟಕ್ಕೂ ಅನಿ ಮ್ಯೂಸಿಕ್ ಬಲ ಸಿಕ್ಕಿತ್ತು. ಸದ್ಯ ಚಿತ್ರವೊಂದಕ್ಕೆ ಅನಿರುದ್ಧ್ 25 ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂದು ಗುಲ್ಲಾಗಿದೆ.
ಸ್ಟಾರ್ ನಟರು 20 ಕೋಟಿ, 50 ಕೋಟಿ ರೂ, 100 ಕೋಟಿ ರೂ. ಸಂಭಾವನೆ ಪಡೆಯುವುದು ಕೇಳಿದ್ದೇವೆ. ನಟಿಯರು 15ರಿಂದ 20 ಕೋಟಿ ರೂ, ಕೇಳುವುದೇ ಹೆಚ್ಚು ಎನ್ನುವಂತಾಗಿದೆ. ಆದರೆ ಸಂಗೀತ ನಿರ್ದೇಶಕನಿಗೆ 25 ಕೋಟಿ ರೂ. ಸಂಭಾವನೆ ಕೊಡ್ತಾರಾ? ಎಂದು ಕೆಲವರು ಹುಬ್ಬೇರಿಸಿದ್ದಾರೆ. ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ 15 ಕೋಟಿ ರೂ. ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಗುಲ್ಲಾಗಿತ್ತು. ಎ. ಆರ್ ರಹಮಾನ್ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕ ಎನಿಸಿಕೊಂಡಿದ್ದಾರೆ. ಆ ದಾಖಲೆಯನ್ನು ಅನಿರುದ್ಧ್ ಮುರಿದಿದ್ದಾರೆ ಎನ್ನಲಾಗ್ತಿದೆ.

'ಪೆದ್ದಿ' ಚಿತ್ರಕ್ಕೆ ರಹಮಾನ್ 12ರಿಂದ 15 ಕೋಟಿ ರೂ. ಸಂಭಾವನೆ ಪಡೆದಿದ್ದರು ಎಂದು ಹೇಳಲಾಗಿತ್ತು. 'ರಾಮಾಯಣ' ಚಿತ್ರಕ್ಕಾಗಿ ದಾಖಲೆಯ 30 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ರಾಮಾಯಣ ಹೊರತು ಪಡಿದು ಇನ್ನಿತರೆ ಚಿತ್ರಗಳಿಗೆ 15ರಿಂದ 20 ಕೋಟಿ ರೂ. ಚಾರ್ಚ್ ಮಾಡುತ್ತಾರೆ ಎನ್ನಲಾಗ್ತಿದೆ. ಅದನ್ನೆಲ್ಲಾ ಮೀರಿ ಅನಿರುದ್ಧ್ ಈಗ ಸದ್ದು ಮಾಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಲೋಕೇಶ್ ಕನಕರಾಜ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಚಿತ್ರಕ್ಕೆ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡುವುದು ಪಕ್ಕಾ ಆಗಿದೆ. ಇದೇ ಚಿತ್ರಕ್ಕೆ 25 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ ಚಿತ್ರಕ್ಕೂ ಅನಿರುದ್ಧ್ ಟ್ಯೂನ್ ಹಾಕುವುದು ಪಕ್ಕಾ ಆಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಒಂದೆರಡು ಹಾಡು ಹಿಟ್ ಆಗಬೇಕು. ಅದರಲ್ಲೂ ಜೆನ್‌ಝೀ ಪ್ರೇಕ್ಷಕರನ್ನು ಸೆಳೆಯಲು, ರೀಲ್ಸ್‌ಗಳಲ್ಲಿ ವೈರಲ್ ಆಗಲು ಕ್ಯಾಚಿ ಟ್ಯೂನ್ ಬೇಕು. ಅಂತಹ ಜೆನ್‌ಝೀ ನಾಡಿಮಿಡಿತ ಅನಿಗೆ ಗೊತ್ತು ಎಂದು ಕೆಲವರು ಭಾವಿಸಿದ್ದಾರೆ.
ನಾನಿ ನಟನೆಯ 'ಪ್ಯಾರಡೈಸ್', ವಿಜಯ್ ನಟನೆಯ ಕೊನೆಯ ಸಿನಿಮಾ 'ಜನನಾಯಗನ್', 'ಜೈಲರ್- 2' ಜೊತೆಗೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ಜೋಡಿಯ ಚಿತ್ರಕ್ಕೂ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಮಾಡುತ್ತಿದ್ದಾರೆ. ಹೀಗೆ ದೊಡ್ಡ ದೊಡ್ಡ ಸಿನಿಮಾಗಳು ಕೈಯಲ್ಲಿ ಇರುವುದರಿಂದ ಯಾರೇ ಹೊಸದಾಗಿ ಕೇಳಿದ್ರು 25 ಕೋಟಿ ರೂ. ಕೊಡಿ ನೋಡೋಣ ಎನ್ನುತ್ತಿದ್ದಾರಂತೆ. ಒಟ್ಟಾರೆ ಭಾರತೀಯ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಅನಿರುದ್ಧ್ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಇದೆಲ್ಲದರ ನಡುವೆ ಕಾವ್ಯಾ ಮಾರನ್ ಜೊತೆ ಅನಿ ಮದುವೆ ನಡೆಯುತ್ತದೆ ಎನ್ನುವ ಗುಸುಗುಸು ಜೋರಾಗುತ್ತಿದೆ.


Click it and Unblock the Notifications