For Quick Alerts
  ALLOW NOTIFICATIONS  
  For Daily Alerts

  ಗಣೇಶ ಹಬ್ಬದ ವಿಶೇಷ ರಜನಿಕಾಂತ್ ಅಭಿಮಾನಿಗಳಿಗೆ ಡಬಲ್ ಧಮಾಕ

  |

  ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಅಣ್ಣಾತ್ತೆ' ಸಿನಿಮಾ ಪ್ರತಿಯೊಂದು ಹಂತದಲ್ಲೂ ನಿರೀಕ್ಷೆ ಹುಟ್ಟುಹಾಕಿದೆ. ಇದುವರೆಗೂ ಚಿತ್ರದ ಬಗ್ಗೆ ಬರಿ ಸುದ್ದಿಗಳು ಮಾತ್ರ ಬಹಿರಂಗವಾಗುತ್ತಿತ್ತೇ ಹೊರತು ಪೋಸ್ಟರ್, ಟೀಸರ್ ಏನೂ ರಿಲೀಸ್ ಮಾಡಿಲ್ಲ. ಇದೀಗ, ಅಣ್ಣಾತ್ತೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯ ಸುದ್ದಿ ಹೊರಬಿದ್ದಿದೆ.

  ಈ ಸಲ ಗೌರಿ-ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗ್ತಿಲ್ಲ. ಕೊರೊನಾ ಕಾರಣದಿಂದ ನಿಯಮಗಳ ಅಡಿಯಲ್ಲಿ ಹಬ್ಬವನ್ನು ಸೆಲೆಬ್ರೆಟ್ ಮಾಡಬೇಕು. ಹೀಗೆ, ಸಂಭ್ರಮ-ಸಡಗರಕ್ಕೆ ಬ್ರೇಕ್ ಬಿತ್ತು ಎನ್ನುವ ನಿರಾಸೆಯಲ್ಲಿರುವ ಅಭಿಮಾನಿಗಳಿಗೆ ತಲೈವಾ ಭರ್ಜರಿ ಸುದ್ದಿ ಕೊಟ್ಟಿದ್ದಾರೆ.

  ಇನ್ಮುಂದೆ ಸಿನಿಮಾಗಳೇ ಮಾಡೋದಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದರು ರಜನಿಕಾಂತ್!ಇನ್ಮುಂದೆ ಸಿನಿಮಾಗಳೇ ಮಾಡೋದಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದರು ರಜನಿಕಾಂತ್!

  ಅಣ್ಣಾತ್ತೆ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಒಂದೇ ದಿನ ಬಹಿರಂಗಪಡಿಸಲಾಗುತ್ತಿದೆ. ಈ ಸುದ್ದಿ ತಲೈವಾ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಇದೇ ಖುಷಿಯಲ್ಲಿ ಗೌರಿ-ಗಣೇಶ ಹಬ್ಬವನ್ನು ಮತ್ತಷ್ಟು ಜೋರಾಗಿ ಆಚರಿಸಲು ಮುಂದಾಗಿದ್ದಾರೆ. ಮುಂದೆ ಓದಿ...

  ರಜನಿ ಫ್ಯಾನ್ಸ್‌ಗೆ ಡಬಲ್ ಧಮಾಕ

  ರಜನಿ ಫ್ಯಾನ್ಸ್‌ಗೆ ಡಬಲ್ ಧಮಾಕ

  ಸೆಪ್ಟೆಂಬರ್ 10 ರಂದು ಬೆಳಗ್ಗೆ 11 ಗಂಟೆಗೆ ಅಣ್ಣಾತ್ತೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ. ಅದೇ ದಿನ ಸಂಜೆ 6 ಗಂಟೆಗೆ 'ಅಣ್ಣಾತ್ತೆ' ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಆಗಲಿದೆ. ಈ ಮೂಲಕ ಒಂದೇ ದಿನ ತಲೈವಾ ಅಭಿಮಾನಿಗಳಿಗೆ ಡಬಲ್ ಧಮಾಕ ಎನ್ನಬಹುದು.

  'ಅಣ್ಣಾತ್ತೆ' ಟ್ರೆಂಡಿಂಗ್

  'ಅಣ್ಣಾತ್ತೆ' ಟ್ರೆಂಡಿಂಗ್

  ಅಣ್ಣಾತ್ತೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗುತ್ತಿರುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದೆ. ಕೇವಲ ಒಂದೇ ಒಂದು ಪೋಸ್ಟರ್ ಬರ್ತಿದೆ ಎನ್ನುವುದಕ್ಕೆ ರಜನಿಕಾಂತ್ ಮತ್ತು ಅಣ್ಣಾತ್ತೆ ಹೆಸರು ಸದ್ದು ಮಾಡ್ತಿದೆ. ಈ ವರ್ಷದ ನಿರೀಕ್ಷೆಯ ಸಿನಿಮಾ ಪೈಕಿ ಅಣ್ಣಾತ್ತೆ ಸಹ ಮುಂಚೂಣಿಯಲ್ಲಿದೆ.

  'ಅಣ್ಣಾತ್ತೆ' ಎಂಟ್ರಿಯಲ್ಲಿ ಬದಲಾವಣೆ ಇಲ್ಲ, ನಿರ್ಧರಿಸಿದ ದಿನಕ್ಕೆ ಬರ್ತಾರೆ ತಲೈವಾ'ಅಣ್ಣಾತ್ತೆ' ಎಂಟ್ರಿಯಲ್ಲಿ ಬದಲಾವಣೆ ಇಲ್ಲ, ನಿರ್ಧರಿಸಿದ ದಿನಕ್ಕೆ ಬರ್ತಾರೆ ತಲೈವಾ

  ಶೂಟಿಂಗ್ ಮುಗಿಸಿದ ರಜನಿಕಾಂತ್

  ಶೂಟಿಂಗ್ ಮುಗಿಸಿದ ರಜನಿಕಾಂತ್

  ಸದ್ಯದ ವರದಿ ಪ್ರಕಾರ ರಜನಿಕಾಂತ್ ಅಣ್ಣಾತ್ತೆ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇನ್ನುಳಿದಂತೆ ಬಾಕಿ ಉಳಿದಿರುವ ದೃಶ್ಯಗಳ ಶೂಟಿಂಗ್ ಆಗಬೇಕಿದೆ. ಅಣ್ಣಾತ್ತೆ ಚಿತ್ರೀಕರಣದ ನಡುವೆಯೇ ಶಸ್ತ್ರ ಚಿಕಿತ್ಸೆಗಾಗಿ ಯುಎಸ್‌ಗೆ ಹೋಗಿ ಬಂದರು. ಅಮೆರಿಕಾದಿಂದ ವಾಪಸ್ ಆಗುತ್ತಿದ್ದಂತೆ ಕೊಲ್ಕತ್ತಾದಲ್ಲಿ ಕೊನೆಯ ಹಂತ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಚಿತ್ರದ ಬಹುಮುಖ್ಯ ಆಕ್ಷನ್ ದೃಶ್ಯಗಳ ಹಾಗೂ ಎಮೋಷನಲ್ ಸೀನ್ ಸೇರಿದಂತೆ ಎಲ್ಲವನ್ನು ಮುಗಿಸಿದರು.

  ನಯನತಾರಾ-ಕೀರ್ತಿ ಸುರೇಶ್

  ನಯನತಾರಾ-ಕೀರ್ತಿ ಸುರೇಶ್

  ಸಿರುತೈ ಶಿವ ಈ ಚಿತ್ರ ನಿರ್ದೇಶನ ಮಾಡಿದ್ದು, ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಜೊತೆ ನಯನತಾರ, ಕೀರ್ತಿ ಸುರೇಶ್, ಹಿರಿಯ ನಟ ಮೀನಾ, ಖುಷ್ಬೂ, ಪ್ರಕಾಶ್ ರಾಜ್, ಸೂರಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಈ ಸಿನಿಮಾ ನಿರ್ಮಿಸುತ್ತಿದ್ದು, ಡಿ ಇಮ್ಮನ್ ಸಂಗೀತ ಇದೆ.

  ಅಣ್ಣಾತ್ತೆ vs ವಾಲಿಮೈ

  ಅಣ್ಣಾತ್ತೆ vs ವಾಲಿಮೈ

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತ್ತೆ ಚಿತ್ರ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4 ರಂದು ಚಿತ್ರಮಂದಿರಕ್ಕೆ ಬರಲಿದೆ. ಸದ್ಯದ ಮಾಹಿತಿ ಪ್ರಕಾರ ಅದೇ ದಿನ ಅಜಿತ್ ಕುಮಾರ್ ನಟನೆಯ ಬಹುನಿರೀಕ್ಷೆಯ ಸಿನಿಮಾ ವಾಲಿಮೈ ಸಹ ರಿಲೀಸ್ ಮಾಡುವ ಸಿದ್ಧತೆ ನಡೆಯುತ್ತಿದೆಯಂತೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ತಲಾ ಮತ್ತು ತಲೈವಾ ಅಭಿಮಾನಿಗಳಲ್ಲಿ ತೀವ್ರ ಪೈಪೋಟಿ ಎದುರಾಗಿದೆ. ಆದರೆ, ಅಧಿಕೃತವಾಗಿ ವಾಲಿಮೈ ರಿಲೀಸ್ ದಿನಾಂಕ ಇನ್ನು ಪ್ರಕಟವಾಗಿಲ್ಲ. ಅಜಿತ್ ಚಿತ್ರವನ್ನು ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ.

  English summary
  The first look poster of superstar Rajinikanth starrer Annaatthe to be unveiled on Sept 10 on the ocassion of Ganesh Chaturthi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X