ವಿಜಯ್-ತ್ರಿಶಾ ಖಾಸಗಿ ಫೋಟೊ ಲೀಕ್ , ಸ್ಫೋಟಕ ಹೇಳಿಕೆ ನೀಡಿದ ಅಣ್ಣಾಮಲೈ...!

ನಿಜಾ ... ಸಿನಿಮಾ ಕಲಾವಿದರೆಂದ ಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಆದರೆ ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಕೆಲವರು ಕೆಲ ಸುದ್ದಿಗಳನ್ನು ಹರಿಬಿಡುತ್ತಾರೆ. ಅದರ ಹಿಂದಿರುವ ಉದ್ದೇಶ ಅವರಿಗೆ ಗೊತ್ತಿರುತ್ತಾದರೂ ಈ ತರಹದ ಸುದ್ದಿಗಳು ಎಲ್ಲರ ಗಮನ ಸೆಳೆಯುತ್ತಾವೆ. ಚರ್ಚೆಗೆ ಕಾರಣವೂ ಆಗುತ್ತವೆ.

ಸದ್ಯ ಇಳಯ ದಳಪತಿ ವಿಜಯ್ ಮತ್ತು ತ್ರಿಶಾ ವಿಚಾರದಲ್ಲಿ ಹೀಗೆ ಕೆಲವರು ಬೇಕು ಬೇಕಂತಲೇ ಸುದ್ದಿಯನ್ನು ತೇಲಿ ಬಿಡುತ್ತಿದ್ದಾರಾ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ. ಯಾಕೆಂದರೆ ನಮ್ಮ ರಾಜ್ಯದಲ್ಲಿ ಐಪಿಎಸ್ ಅಧಿಕಾರಿಯಾಗಿ ಮಿಂಚಿದ್ದ ಸದ್ಯ ತಮಿಳುನಾಡು ರಾಜಕೀಯದಲ್ಲಿ ಸಕ್ರಿಯರಾಗಿರುವ ಕೆ.ಅಣ್ಣಾಮಲೈ ವಿಜಯ್ ಮತ್ತು ತ್ರಿಶಾ ಅವರ ಹೆಸರಿಗೆ ಕಪ್ಪು ಮಸಿ ಬಳಿಯುವ ಪ್ರಯತ್ನವಾಗುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಮೊನ್ನೆ ವೈರಲ್ ಆದ ವಿಜಯ್ ಮತ್ತು ತ್ರಿಶಾ ಫೋಟೊಗಳಿಗೆ ರಾಜಕೀಯದ ಬಣ್ಣ ಹಚ್ಚಿ ಆರೋಪವನ್ನು ಮಾಡಿದ್ದಾರೆ.

Annamalai accuses Tamil Nadu intelligence of leaking Vijay-Trisha photos to DMK IT wing

ಹೌದು, ಅಸಲಿಗೆ ಗೋವಾದಲ್ಲಿ ನಡೆದ ಕೀರ್ತಿ ಸುರೇಶ್ ಅವರ ಮದುವೆಗೆ ವಿಜಯ್ ತಮ್ಮ ಪತ್ನಿ ಸಂಗೀತಾ ಅವರ ಜೊತೆ ತೆರಳದೆ ತ್ರಿಶಾ ಜೊತೆ ಹೋಗಿದ್ದರು. ಪ್ರೈವೇಟ್ ಜೆಟ್‌ನಲ್ಲಿ ಪ್ರಯಾಣ ಮಾಡಿದ್ದರು.ಆದರೆ ಈ ಸಮಯದಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭದ್ರತಾ ಚೆಕ್ ಪಾಯಿಂಟ್ ಬಳಿ ತಪಾಸಣೆಗೆ ಒಳಗಾಗುತ್ತಿದ್ದ ಫೋಟೊಗಳನ್ನು ಯಾರೋ ಕ್ಲಿಕಿಸಿ ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಟ್ಟಿದ್ದರು. ಹೀಗೆ ಹೊರ ಬಂದ ಫೋಟೊಗಳು ನೋಡ ನೋಡುತ್ತಾ ವೈರಲ್ ಆಗಿದ್ದವು. ಚರ್ಚೆಯನ್ನು ಹುಟ್ಟು ಹಾಕಿದ್ದವು.

ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಮಾತನಾಡಿದ್ಧಾರೆ. ವಿಜಯ್ ಮತ್ತು ತ್ರಿಶಾ ಅವರಿಗೆ ಅರಿವಿಗೆ ಬಾರದಂತೆ ರಾಜ್ಯ ಗುಪ್ತಚರ ವಿಭಾಗ ಫೋಟೊಗಳನ್ನು ತೆಗೆದು ಹರಿಬಿಟ್ಟಿದೆ ಎಂದು ಹೇಳಿದ್ದಾರೆ. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅಣ್ಣಾ ಮಲೈ ವಿಜಯ್ ಕಳೆದ ವಾರ ವಿಮಾನ ನಿಲ್ದಾಣದ ಗೇಟ್ ನಂಬರ್ ಆರರಲ್ಲಿ ಭದ್ರತಾ ತಪಾಸಣೆಗೆ ಒಳಗಾಗಿ ಗೋವಾದಲ್ಲಿ ನಡೆದ ಮದ್ವೆಗೆ ತೆರಳಿದ್ದರು. ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದರು. ಹೀಗಿರುವಾಗ ಅವರ ಖಾಸಗಿ ಫೋಟೊ ಹೊರಗೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅಣ್ಣಾಮಲೈ ವಿಜಯ್ ತಮಗೆ ಇಷ್ಟವಾದವರ ಜೊತೆ ಮದುವೆಗೆ ಹೋಗಬಹುದು ಅದು ಅವರ ವ್ಯೆಯಕ್ತಿಕ ಆಯ್ಕೆ ಆದರೆ ಫೋಟೊ ತೆಗೆದು ಅವುಗಳನ್ನು ಸೋರಿಕೆ ಮಾಡಿದ್ದು ಯಾರು ಎಂದು ಕೇಳಿದ್ದಾರೆ. ವಿಜಯ್ ಈಗ ರಾಜಕೀಯಕ್ಕೆ ಬಂದ ಹಿನ್ನೆಲೆ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಯ ಮಾಹಿತಿ ತಂತ್ರಜ್ಞಾನ ಘಟಕಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ವಿಚಾರದ ಕುರಿತು ಪರಿಶೀಲನೆ ನಡೆಸುವಂತೆ ಕೂಡ ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಪತ್ರ ಬರೆಯುವುದಾಗಿ ಹೇಳಿರುವ ಕೆ ಅಣ್ಣಾ ಮಲೈ ಈ ಚಿತ್ರಗಳನ್ನು ತೆಗೆದವರು ಯಾರು ಎನ್ನುವುದನ್ನು ಸಚಿವಾಲಯ ಪತ್ತೆ ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ಎಫ್‌ಐಆರ್ ಕೂಡ ದಾಖಲಿಸಬಹುದು ಎಂದು ಹೇಳಿದ್ದಾರೆ. ವಿಮಾನನಿಲ್ದಾಣಕ್ಕೆ ಬಂದು ಹೋಗುವವರ ಫೋಟೊ ತೆಗೆಯುವುದು ಅದನ್ನು ಡಿಎಂಕೆ ಐಟಿ ವಿಭಾಗಕ್ಕೆ ಕೊಡುವುದು ರಾಜ್ಯ ಗುಪ್ತಚರೆ ವಿಭಾಗದ ಕೆಲಸನಾ ಎಂದು ಪ್ರಶ್ನೆ ಮಾಡಿರುವ ಅಣ್ಣಾಮಲೈ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ಧಾರೆ. ಸದ್ಯ ಅಣ್ಣಾಮಲೈ ಅವರ ಈ ಹೇಳಿಕೆ ತಮಿಳುನಾಡಿನಲ್ಲಿ ವ್ಯಾಪಕ ಸದ್ದು ಮಾಡುತ್ತಿದೆ.

More from Filmibeat

Read more about: vijay trisha kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X