For Quick Alerts
  ALLOW NOTIFICATIONS  
  For Daily Alerts

  ಹಿಂದಿಗೆ ರಿಮೇಕ್ ಆಗುತ್ತಿದೆ 'ಸಿಂಗಂ-3'; ಸೂರ್ಯ ಪಾತ್ರದಲ್ಲಿ ಖ್ಯಾತ ಖಳ ನಟ

  |

  ದಕ್ಷಿಣ ಭಾರತದ ಅನೇಕ ಸಿನಿಮಾಗಳು ಹಿಂದಿಗೆ ರಿಮೇಕ್ ಆಗುತ್ತಿವೆ. ತಮಿಳು ಮತ್ತು ತೆಲುಗು ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದಂತೆ ಬಾಲಿವುಡ್ ನಲ್ಲಿ ರಿಮೇಕ್ ಮಾಡಿ ಸಕ್ಸಸ್ ಕಾಣುತ್ತಿದ್ದಾರೆ. ಸದ್ಯ ಮಲಯಾಳಂ ದೃಶ್ಯಂ-2 ಸಿನಿಮಾ ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ದಕ್ಷಿಣ ಭಾರತದ ಸಿನಿಮಾ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದೆ.

  ತಮಿಳು ನಟ ಸೂರ್ಯ ನಟನೆಯ ಸೂಪರ್ ಹಿಟ್ ಸಿಂಗಂ-3 ಸಿನಿಮಾ ಹಿಂದಿದೆ ರಿಮೇಕ್ ಆಗುತ್ತಿದೆ. 2017ರಲ್ಲಿ ತೆರೆಗೆ ಬಂದ ಈ ಸಿನಿಮಾ ಸಿಂಗಂ ಸಿನಿಮಾದ ಪ್ರಾಂಚೈಸಿಯಾಗಿದೆ. ಚಿತ್ರದಲ್ಲಿ ನಟ ಸೂರ್ಯಗೆ ನಾಯಕಿಯರಾಗಿ ಅನುಷ್ಕಾ ಶೆಟ್ಟಿ ಮತ್ತು ಶ್ರುತಿ ಹಾಸನ್ ಕಾಣಿಸಿಕೊಂಡಿದ್ದರು.

  'ಸೂರರೈ ಪೊಟ್ರು' ಜೊತೆ ಆಸ್ಕರ್ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮತ್ತೆರಡು ಸಿನಿಮಾಗಳು'ಸೂರರೈ ಪೊಟ್ರು' ಜೊತೆ ಆಸ್ಕರ್ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮತ್ತೆರಡು ಸಿನಿಮಾಗಳು

  ಇದೀಗ ಹಿಂದೆಗೆ ರಿಮೇಕ್ ಆಗುತ್ತಿದ್ದು, ಖ್ಯಾತ ವಿಲನ್ ನಾಯಕನಾಗಿ ಮಿಂಚುತ್ತಿದ್ದಾರೆ. ಹೌದು, ದಕ್ಷಿಣ ಭಾರತ ಮತ್ತು ಹಿಂದಿಯಲ್ಲಿ ಖಳನಟನಾಗಿ ಅಬ್ಬರಿಸುತ್ತಿರುವ ನಟ ಅನೂಪ್ ಠಾಕೂರ್ ಸಿಂಗ್ ಸಿಂಗಂ-3 ಹಿಂದಿ ರಿಮೇಕ್ ನಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ.

  ಖಳನಟನ ಇಮೇಜ್ ಬದಲಾಯಿಸಿಕೊಳ್ಳಲು ಅನೂಪ್ ಈ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ವಿಶೇಷ ಎಂದರೆ ಅನೂಪ್ ಮೂಲ ಸಿಂಗಂ-3ನಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದರು. ಇದೀಗ ಅದೇ ಸಿನಿಮಾಗೆ ನಾಯಕನಾಗಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

  ಜಯಂತಿಲಾಲ್ ಗದಾ ಈ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡುತ್ತಿದ್ದು, ಸದ್ಯ ಸಿನಿಮಾ ಸ್ಕ್ರಿಪ್ಟಿಂಗ್ ಹಂತದಲ್ಲಿದ್ದು, ಜುಲೈ ನಂತರ ಪ್ರಾರಂಭವಾಗುವ ಸಾಧ್ಯತೆ ಇದೆ. ಮೂಲ ಸಿಂಗಂ-3 ಸಿನಿಮಾಗೆ ಹರಿ ಆಕ್ಷನ್ ಕಟ್ ಹೇಳಿದ್ದಾರೆ.

  ಅಪ್ಪು ಮತ್ತು ರಿಷಬ್ ಶೆಟ್ಟಿ ಒಂದೇ ಥರ ಅಂತ ಹೇಳಿದವರು ಯಾರು? | Rishab Shetty | Filmibeat Kannada

  ಇನ್ನು ದಕ್ಷಿಣ ಭಾರತದ ಮತ್ತೊಂದು ಸೂಪರ್ ಹಿಟ್ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಖ್ಯಾತ ನಿರ್ದೇಶಕ ರಾಜಮೌಳಿ ಅವರ ಛತ್ರಪತಿ ಸಿನಿಮಾ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದೆ. ಪ್ರಭಾಸ್ ನಾಯಕನಾಗಿ ಮಿಂಚಿರುವ ಈ ಸಿನಿಮಾ ಈಗ ಬಾಲಿವುಡ್ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದೆ.

  English summary
  Faous villain Anoop Thakur Singh play the lead protagonist in the Hindi version of Singam-3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X