ನಟಿ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

ಕೆಲವು ದಿನಗಳ ಹಿಂದಷ್ಟೆ (ಡಿಸೆಂಬರ್ 09) ವಿಜೆ ಚಿತ್ರ ಸಾವನ್ನಪ್ಪಿದ್ದರು. ಚೆನ್ನೈನ ನಜರತ್ ಪಟ್ಟೈನ ಪಂಚತಾರಾ ಹೋಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅನುಮಾನಿಸಲಾಗಿತ್ತು.

ಚಿತ್ರಾ ಆತ್ಮಹತ್ಯೆ ನಂತರ ಹಲವು ವಿಷಯಗಳು ಹೊರಬಂದಿದ್ದು, ಇವೆಲ್ಲವೂ ಚಿತ್ರಾ ಅವರ ಸಾವಿನ ಬಗ್ಗೆ ಅನುಮಾನಗಳನ್ನು ಎಬ್ಬಿಸಿವೆ. ಚಿತ್ರಾ ಗುಟ್ಟಾಗಿ ಮದುವೆ ಆಗಿದ್ದು, ಪತಿ ಹೇಮಂತ್ ಜೊತೆಗೆ ಆತ್ಮೀಯತೆ ಇರಲಿಲ್ಲ ಎನ್ನಲಾಗಿತ್ತು. ಚಿತ್ರಾ ತಾಯಿ ವಿಜಯಾ ಸಹ, ಮಗಳ ಸಾವಿಗೆ ಚಿತ್ರಾಳ ಪತಿ ಹೇಮಂತ್ ಕಾರಣ ಎಂದು ಆರೋಪಿಸಿದ್ದರು.

ಇದೀಗ ಹೊರಬಂದಿರುವ ಸುದ್ದಿಯಂತೆ, ಚಿತ್ರಾ ಸಾವಿಗೆ ಮುನ್ನಾ ತಾಯಿಯೊಂದಿಗೆ ಜಗಳವಾಡಿದ್ದರಂತೆ. ಚಿತ್ರಾ ತನ್ನ ಮನೆಯವರೊಂದಿಗೆ ಅಸಮಾಧಾನ ಹೊಂದಿದ್ದರು ಎಂಬ ಅಂಶ ತನಿಖೆಯಿಂದ ಗೊತ್ತಾಗಿದೆ.

Another Twist In VJ Chitras Suicide Case

ಚಿತ್ರಾ ಹಾಗೂ ಹೇಮಂತ್ ಇದೇ ವರ್ಷದ ಅಕ್ಟೋಬರ್ 09 ರಂದು ಗುಟ್ಟಾಗಿ ಮದುವೆ ಆಗಿದ್ದರು. ಫೆಬ್ರವರಿ 2021 ರಂದು ಸರಳ ಸಮಾರಂಭ ಆಯೋಜಿಸಿ ಮದುವೆಯನ್ನು ಘೋಷಣೆ ಮಾಡಬೇಕು ಎಂದು ಯೋಜನೆ ರೂಪಿಸಿದ್ದರು. ಆದರೆ ಇವರ ಮದುವೆಗೆ ಚಿತ್ರಾ ತಾಯಿ ವಿಜಯಾ ಅವರ ತೀವ್ರ ವಿರೋಧ ಇತ್ತಂತೆ.

ಹೇಮಂತ್-ಚಿತ್ರಾ ಮದುವೆ ಬಗ್ಗೆ ತಾಯಿ ವಿಜಯಾ ಗೆ ತೀವ್ರ ಅಸಮಾಧಾನ ಇತ್ತಂತೆ. ಹೇಮಂತ್ ಅನ್ನು ಬಿಟ್ಟು ಬಂದುಬಿಡು ಎಂದು ತಾಯಿ ವಿಜಯಾ ಹೇಳಿದ್ದರಂತೆ. ಚಿತ್ರಾ ಸಾಯುವ ಕೆಲವು ಗಂಟೆಗಳ ಮುನ್ನಾ ಸಹ ತಾಯಿ ವಿಜಯಾ ಜೊತೆ ಬಹು ಸಮಯ ಫೋನಿನಲ್ಲಿ ಮಾತನಾಡಿದ್ದರು ಎನ್ನಲಾಗುತ್ತಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೋಟೆಲ್ ಸಿಸಿಟಿವಿ ಫುಟೇಜ್‌ ಅನ್ನು ವಶಕ್ಕೆ ಪಡೆದಿದ್ದು, ಚಿತ್ರಾಳ ಪತಿ ಹೇಮಂತ್, ಚಿತ್ರಾರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದಾರೆ.

ವಿಜೆ ಚಿತ್ರಾ ತಮಿಳಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಕೆಲವು ಟಿವಿ ಚಾನೆಲ್‌ಗಳಲ್ಲಿ ನಿರೂಪಕಿಯಾಗಿಯೂ ಸಾಕಷ್ಟು ಖ್ಯಾತರಾಗಿದ್ದರು.

More from Filmibeat

English summary
VJ Chitra's suicide case gets another twist. Chitra was upset with her family. Chitra was talking to her mother in a long call before she died.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X