For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ ಎದುರು ವಿಲನ್ ಆಗಲಿದ್ದಾರೆ ಮಲಯಾಳಂ ನಟ?

  |

  ತಮಿಳು ನಟ ಕಮಲ್ ಹಾಸನ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ 'ವಿಕ್ರಂ' ಸಿನಿಮಾ ತಯಾರಾಗುತ್ತಿದೆ. ಈಗಾಗಲೇ ಚಿತ್ರದ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆದಿದೆ.

  ಕಮಲ್ ಹಾಸನ್ ಎದುರು ಖಳನಾಯಕನ ಪಾತ್ರಕ್ಕೆ ಸ್ಟಾರ್ ಕಲಾವಿದರನ್ನು ಕರೆತರುವ ಸಿದ್ಧತೆ ನಡೆಯುತ್ತಿದೆ. ಈ ಹಿಂದೆ ತಮಿಳು ನಟ ವಿಜಯ್ ಸೇತುಪತಿ ಅವರ ಹೆಸರು ಹೆಚ್ಚು ಚರ್ಚೆಯಲ್ಲಿತ್ತು. ಈ ಬಗ್ಗೆ ಇನ್ನೂ ಅಧಿಕೃತವಾಗಿ ಪ್ರಕಟಣೆಯಾಗಿಲ್ಲ.

  ಸೂಪರ್ ಸ್ಟಾರ್ ನಟನ ಚಿತ್ರದಿಂದ ವಿಜಯ್ ಸೇತುಪತಿಗೆ ಆಫರ್?ಸೂಪರ್ ಸ್ಟಾರ್ ನಟನ ಚಿತ್ರದಿಂದ ವಿಜಯ್ ಸೇತುಪತಿಗೆ ಆಫರ್?

  ಇದೀಗ, ಮಲಯಾಳಂ ನಟ ಆಂಟೋನಿ ವರ್ಗೀಸ್ ಹೆಸರು ಪ್ರಮುಖ ಪಾತ್ರವೊಂದಕ್ಕೆ ಮುಂಚೂಣಿಯಲ್ಲಿದೆ. ಈ ಹೆಸರು ಸಹ ಕುತೂಹಲ ಮೂಡಿಸಿದೆ. ಇನ್ನು ಫಾಹದ್ ಫಾಸಿಲ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

  ಕಮಲ್ ಹಾಸನ್ ಜೊತೆ ಖಾಸಗಿ ಜೆಟ್‌ನಲ್ಲಿ ಕಾಣಿಸಿಕೊಂಡಿದ್ದ ಲೋಕೇಶ್ ಕನಕರಾಜ್ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡು ''ಆರಂಭಿಸೋಣ'' ಎಂದು ಪೋಸ್ಟ್ ಹಾಕಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಕಮಲ್ ಹಾಸನ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.

  ಎಲ್ಲರಿಗೂ ಉತ್ತರ ಕೊಟ್ಟು ಕೊಟ್ಟು ಸಾಕಾಗಿದೆ ಎಂದ ಕುರಿ ಪ್ರತಾಪ್

  ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಕಥೆಯಾಗಿದ್ದು, ಸ್ವತಃ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ಮತ್ತೊಂದೆಡೆ ಶಂಕರ್ ನಿರ್ದೇಶನದಲ್ಲಿ ಇಂಡಿಯನ್ 2 ಸಿನಿಮಾ ಚಿತ್ರೀಕರಣ ಆರಂಭಿಸಿ ಅರ್ಧದಲ್ಲಿ ಸ್ಥಗಿತವಾಗಿದೆ. ನಿರ್ಮಾಪಕ ಮತ್ತು ನಿರ್ದೇಶಕರ ನಡುವಿನ ಭಿನ್ನಾಭಿಪ್ರಾಯದಿಂದ ಈ ಪ್ರಾಜೆಕ್ಟ್ ಟೇಕ್ ಆನ್ ಆಗಲಿಲ್ಲ.

  English summary
  Latest Buzz, Malyalam actor Antony Varghese is in talks for an important role in Kamal Haasan's Vikram movie?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X