ತನಗಿಂತ 2 ವರ್ಷ ಚಿಕ್ಕವನ ಜೊತೆ ಪ್ರೀತಿಲಿ ಬಿದ್ರಾ ನಟಿ ಅನುಪಮಾ ಪರಮೇಶ್ವರನ್?

ಚಿತ್ರರಂಗದಲ್ಲಿ ಡೇಟಿಂಗ್ ವದಂತಿಗಳಿಗೇನು ಬರವಿಲ್ಲ. ಸೆಲೆಬ್ರೆಟಿಗಳು ಎನ್ನುವ ಕಾರಣಕ್ಕೋ ಏನೋ ತಾರೆಯರ ಡೇಟಿಂಗ್, ಲವ್, ಬ್ರೇಕಪ್, ಮದುವೆ ವಿಚಾರಗಳು ಬಹಳ ಬೇಗ ಸದ್ದು ಮಾಡುತ್ತವೆ. ಸೆಲೆಬ್ರೆಟಿಗಳು ಬೇಗ ಪ್ರತಿಕ್ರಿಯಿಸದ ಕಾರಣಕ್ಕೆ ವದಂತಿಗಳು ದೊಡ್ಡದಾಗಿಯೇ ಸದ್ದು ಮಾಡುತ್ತವೆ. ಇದೀಗ ಖ್ಯಾತ ನಟನ ಮಗನ ಜೊತೆ ಬಹುಭಾಷಾ ನಟಿ ಅನುಪಮಾ ಪರಮೇಶ್ವರ್ ಪ್ರೀತಿಲಿ ಬಿದ್ದಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಮಲಯಾಳಂ ನಟಿ ಅನುಪಮಾ ಕನ್ನಡದ 'ನಟ ಸಾರ್ವಭೌಮ' ಚಿತ್ರದಲ್ಲಿ ಕೂಡ ನಟಿಸಿದ್ದರು. ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ಕೆಲಹೊತ್ತು ತೆರೆಮೇಲೆ ಮಿಂಚಿದ್ದರು. ತನ್ನ ಸ್ನಿಗ್ಧ ಸೌಂದರ್ಯ ಹಾಗೂ ಪಕ್ಕದ್ಮನೆ ಹುಡುಗಿ ರೀತಿಯ ಇಮೇಜ್‌ನಿಂದ ಅನುಪಮಾ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಆಕೆ ನಟಿಸಿರುವುದು ಇದೆ. ಲಿಪ್‌ಲಾಕ್ ಸನ್ನಿವೇಶಗಳಲ್ಲಿ ಮಿಂಚಿ ಹುಬ್ಬೇರಿಸಿದ್ದಾರೆ. ಇದೆಲ್ಲದ ನಡುವೆ ನಟ ಧ್ರುವ್ ವಿಕ್ರಮ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.

Anupama Parameswaran Dhruv Vikram Dating Rumours Explode After Viral 2AM Confession Moment

ತಮಿಳು ನಟ ಚಿಯಾನ್ ವಿಕ್ರಮ್ ಮಗ ಧ್ರುವ್ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಧ್ರುವ್ ಹಾಗೂ ಅನುಪಮಾ ಫೋಟೊಗಳು, ಇಬ್ಬರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ವೈರಲ್ ಆಗಿ ಸದ್ದು ಮಾಡ್ತಿದೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಚರ್ಚೆಗೆ ಕಾರಣವಾಗಿದೆ.

'ಬೈಸಿನ್' ಎಂಬ ಚಿತ್ರದಲ್ಲಿ ಧ್ರುವ್ ವಿಕ್ರಮ್ ಹಾಗೂ ಅನುಪಮಾ ಒಟ್ಟಿಗೆ ನಟಿಸಿದ್ದರು. ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿ ಗಮನ ಸೆಳೆದಿದ್ದಾರೆ. ವೇದಿಕೆಯಲ್ಲಿ ಅನುಪಮಾಗೆ ಧ್ರುವ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಬಳಿಕ ನಿರೂಪಕಿ ಅನುಪಮಾಗೆ ಒಂದು ಪ್ರಶ್ನೆ ಕೇಳಿದ್ದಾರೆ. ಮಧ್ಯರಾತ್ರಿ 2 ಗಂಟೆಗೆ ಯಾರಿಗಾದರೂ ಕರೆ ಮಾಡಬೇಕು ಅಂದ್ರೆ, ಯಾರಿಗೆ ಯಾರು ಆ ವ್ಯಕ್ತಿ ಎನ್ನುವ ಪ್ರಶ್ನೆಗೆ ಧ್ರುವ್ ಎಂದು ಉತ್ತರಿಸಿ ನಕ್ಕಿದ್ದಾರೆ.

Anupama Parameswaran Dhruv Vikram Dating Rumours Explode After Viral 2AM Confession Moment

ಒಂದೇ ಚಿತ್ರದಲ್ಲಿ ನಟಿಸುವ ನಟ, ನಟಿಯರ ನಡುವೆ ಆತ್ಮೀಯ ಒಡನಾಟ ಇರುತ್ತದೆ. ಸ್ನೇಹ ಶುರುವಾಗುತ್ತದೆ. ಆದರೆ ಅನುಪಮಾ ಹಾಗೂ ಧ್ರುವ್ ಸ್ನೇಹಿತರಿಗಿಂತ ಹೆಚ್ಚು ಎನ್ನುವಂತಹ ಬಾಂಧವ್ಯ ಇರುವಂತೆ ಕಾಣ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಚೆನ್ನೈನಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದಾರೆ. ವೇದಿಕೆ ಮುಂಭಾಗದಲ್ಲಿ ಒಟ್ಟಿಗೆ ಕೂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇನ್ನು ಧ್ರುವ್ ಪೋಸ್ಟ್ ಒಂದಕ್ಕೆ ಅನುಪಮಾ ಹಾರ್ಟ್ ಸಿಂಬಲ್ ಎಮೋಜಿ ಹಾಕಿದ್ದಾರೆ. ಇದು ಇಬ್ಬರ ಡೇಟಿಂಗ್ ವದಂತಿಗೆ ಮತ್ತಷ್ಟು ಪುಷ್ಠಿಕೊಟ್ಟಿದೆ.

ಈ ಹಿಂದೆ ಕೂಡ ಅನುಪಮಾ ಹಾಗೂ ಧ್ರುವ್ ಲಿಪ್‌ಲಾಕ್ ಮಾಡಿದ್ದಾರೆ ಎನ್ನಲಾದ ಫೋಟೊವೊಂದು ವೈರಲ್ ಆಗಿತ್ತು. ಇಬ್ಬರಲ್ಲಿ ಅನುಪಮಾ ವಯಸ್ಸಿನಲ್ಲಿ ದೊಡ್ಡವರು. ತನಗಿಂತ 2 ವರ್ಷ ಚಿಕ್ಕ ಹುಡುಗನ ಜೊತೆ ಆಕೆ ಲವ್ವಿಡವ್ವಿ ನಡೆಸ್ತಿದ್ದಾರೆ ಎಂದು ಚರ್ಚೆ ನಡೀತಿದೆ. ಅನುಪಮಾ ವಯಸ್ಸು ಈಗ 30 ವರ್ಷ, ಧ್ರುವ್ ವಿಕ್ರಮ್ ವಯಸ್ಸು 28 ವರ್ಷ. ತನಗಿಂತ ಚಿಕ್ಕ ವಯಸ್ಸಿನವರನ್ನು ನಟಿಯರು ಪ್ರೀತಿಸಿ ಮದುವೆ ಆಗಿರುವ ಸಾಕಷ್ಟು ಉದಾಹರಣೆಗಳಿವೆ.

10 ವರ್ಷಗಳ ಹಿಂದೆ ಮಲಯಾಳಂನ 'ಪ್ರೇಮಂ' ಸಿನಿಮಾ ಮೂಲಕ ಅನುಪಮಾ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಆರಂಭದಲ್ಲಿ ಡಿ ಗ್ಲಾಮರಸ್ ರೋಲ್‌ಗಳಲ್ಲಿ ನಟಿಸುತ್ತಿದ್ದ ಚೆಲುವೆ ಬಳಿಕ ಗ್ಲಾಮರಸ್ ಅವತಾರದಲ್ಲಿ ದರ್ಶನ ಕೊಟ್ಟು ಗಮನ ಸೆಳೆದಿದ್ದರು. ಅನುಪಮಾ ನಟಿಸಿದ್ದ 'ಲಾಕ್‌ಡೌನ್' ಎಂಬ ಸಿನಿಮಾ ಕೊನೆಯದಾಗಿ ತೆರೆಗೆ ಬಂದಿತ್ತು. ಮತ್ತಷ್ಟು ಸಿನಿಮಾಗಳಲ್ಲಿ ಕೇರಳ ಚೆಲುವೆ ನಟಿಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X