For Quick Alerts
  ALLOW NOTIFICATIONS  
  For Daily Alerts

  ಅನುಶ್ರೀ ನೀಡಿದ ಅಪ್ಪು ನಾಣ್ಯ ಸ್ವೀಕರಿಸಿ 'ಅಪ್ಪು ಅಣ್ಣ' ಎಂದು ಭಾವುಕರಾದ ತಮಿಳು ನಟ ವಿಕ್ರಮ್

  |

  ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಮುಂದಿನ ತಿಂಗಳ ಅಂತ್ಯಕ್ಕೆ ಒಂದು ವರ್ಷ ಕಳೆಯಲಿದೆ. ಹೀಗೆ ಅಪ್ಪು ಇಲ್ಲದೇ ರಾಜ್ಯ ಒಂದು ವರ್ಷವನ್ನು ಕಳೆದಿರಬಹುದು, ಆದರೆ ಪುನೀತ್ ಕುರಿತಾಗಿ ಮಾತನಾಡದ ದಿನವೇ ಇಲ್ಲ ಎನ್ನಬಹುದು. ಹೀಗೆ ಅಪ್ಪು ನಿಧನದ ನಂತರ ಅವರ ಅಭಿಮಾನಿಗಳು ನಾನಾ ಕಡೆ ಅವರ ಪ್ರತಿಮೆ ನಿರ್ಮಿಸಿ ಸರ್ಕಲ್‌ಗಳಿಗೆ, ತಮ್ಮ ಅಂಗಡಿ ಹಾಗೂ ಮನೆಗಳಿಗೆ ಪುನೀತ್ ರಾಜ್‌ಕುಮಾರ್ ಹೆಸರಿಟ್ಟು ತಮ್ಮ ನಡುವೆಯೇ ಅಪ್ಪು ಅವರನ್ನು ಜೀವಂತವಾಗಿರಿಸಿಕೊಂಡಿದ್ದಾರೆ.

  ಇನ್ನು ಕೇವಲ ಅಪ್ಪು ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಸಹ ಅಪ್ಪು ಅವರ ಕುರಿತು ಮಾತನಾಡಿ ಅವರದ್ದು ಎಂಥ ವ್ಯಕ್ತಿತ್ವ ಹಾಗೂ ಅವರ ಮೇಲೆ ತಮ್ಮಲ್ಲಿರುವ ಗೌರವ ಎಂಥದ್ದು ಎಂಬುದನ್ನು ಸಾಕಷ್ಟು ಸಂದರ್ಶನಗಳಲ್ಲಿ ಬಿಚ್ಚಿಟ್ಟಿದ್ದಾರೆ. ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿಯೇ ನಡೆದ ಪ್ರತಿಷ್ಟಿತ ಸೈಮಾ ಕಾರ್ಯಕ್ರಮದಲ್ಲಿಯೂ ಸಹ ಅಪ್ಪು ಜಪ ನಡೆಯಿತು. ಕನ್ನಡದ ಹಲವಾರು ಕಲಾವಿದರು ಅಪ್ಪು ಕುರಿತು ಮಾತಾನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  ಇನ್ನು ಸೈಮಾದಲ್ಲಿ ಭಾಗವಹಿಸಿದ್ದ ಬೇರೆ ಚಿತ್ರರಂಗದ ಕಲಾವಿದರೂ ಸಹ ಅಪ್ಪು ನೆನೆದು ಮಂಕಾಗಿದ್ದರು. ಇನ್ನು ಕನ್ನಡದ ನಟಿಯೋರ್ವಳು ಇದೀಗ ಅಪ್ಪು ಅವರ ಚಿತ್ರವಿರುವ ಬೆಳ್ಳಿ ನಾಣ್ಯವನ್ನು ಪೊನ್ನಿಯಿನ್ ಸೆಲ್ವನ್ - 1 ಚಿತ್ರ ತಂಡಕ್ಕೆ ಹಂಚಿದ್ದಾರೆ.

  ಪೊನ್ನಿಯಿನ್ ಸೆಲ್ವನ್ ತಂಡಕ್ಕೆ ಅಪ್ಪು ನಾಣ್ಯ

  ಪೊನ್ನಿಯಿನ್ ಸೆಲ್ವನ್ ತಂಡಕ್ಕೆ ಅಪ್ಪು ನಾಣ್ಯ

  ಚೆನ್ನೈನಲ್ಲಿ ನಡೆದ ಪೊನ್ನಿಯಿನ್ ಸೆಲ್ವನ್ 1 ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ವಿಕ್ರಮ್, ನಿರ್ದೇಶಕ ಮಣಿರತ್ನಂ ಸೇರಿದಂತೆ ಚಿತ್ರತಂಡದ ಎಲ್ಲರಿಗೂ ಕನ್ನಡ ನಟಿ ಹಾಗೂ ನಿರೂಪಕಿ ಅನುಶ್ರೀ ಪುನೀತ್ ರಾಜ್‌ಕುಮಾರ್ ಚಿತ್ರವಿರುವ ಬೆಳ್ಳಿ ನಾಣ್ಯವನ್ನು ಉಡುಗೊರೆಯಾಗಿ ನೀಡಿದ್ದಾರೆ. ರಾಜಕುಮಾರ ಚಿತ್ರದಲ್ಲಿ ಅಪ್ಪು ಪಾರಿವಾಳವನ್ನು ಹೆಗಲ ಮೇಲೆ ಕೂರಿಸಿಕೊಂಡು ಪೋಸ್ ನೀಡಿರುವ ಚಿತ್ರವನ್ನು ಈ ನಾಣ್ಯದಲ್ಲಿ ಬಳಸಲಾಗಿದೆ.

  ನಾಣ್ಯದ ಚಿತ್ರ ಹಂಚಿಕೊಂಡ ವಿಕ್ರಮ್ ಪ್ರಭು

  ನಾಣ್ಯದ ಚಿತ್ರ ಹಂಚಿಕೊಂಡ ವಿಕ್ರಮ್ ಪ್ರಭು

  ಇನ್ನು ಅನುಶ್ರೀ ಅಪ್ಪು ಬೆಳ್ಳಿ ನಾಣ್ಯವನ್ನು ಹಂಚಿಕೊಂಡಿರುವುದರ ಕುರಿತು ಚಿತ್ರತಂಡದ ಸದಸ್ಯ ವಿಕ್ರಮ್ ಪ್ರಭು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚೆನ್ನೈನಲ್ಲಿ ಪೊನ್ನಿಯಿನ್ ಸೆಲ್ವನ್ ಚಿತ್ರದ ಪ್ರಚಾರದ ವೇಳೆ ಅನುಶ್ರೀ ಅಪ್ಪು ಅಣ್ಣ ಇರುವ ನಾಣ್ಯವನ್ನು ಉಡುಗೊರೆಯಾಗಿ ನೀಡಿದರು, ಈ ನಾಣ್ಯವನ್ನು ಸ್ವೀಕರಿಸಿದಾಗ ನಾನು ಭಾವುಕನಾದೆ, ಎಂಥ ಒಳ್ಳೆಯ ವ್ಯಕ್ತಿ, ಅಪ್ಪು ಇನ್ನೂ ಸಹ ನಮ್ಮೆಲ್ಲರ ನಡುವೆಯೇ ಇದ್ದಾರೆ ಎಂದು ಬರೆದುಕೊಂಡಿದ್ದಾರೆ.

  ಇದೇ ತಿಂಗಳು ಚಿತ್ರ ಬಿಡುಗಡೆ

  ಇದೇ ತಿಂಗಳು ಚಿತ್ರ ಬಿಡುಗಡೆ

  ಇನ್ನು ಮಣಿರತ್ನಂ ಅವರ ದೃಶ್ಯಕಾವ್ಯ ಪೊನ್ನಿಯಿನ್ ಸೆಲ್ವನ್ 1 ಚಿತ್ರ ಇದೇ ತಿಂಗಳ 30ರಂದು ಬಿಡುಗಡೆಯಾಗಲಿದೆ. ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರದಲ್ಲಿ ವಿಕ್ರಮ್, ಜಯಮ್ ರವಿ, ಕಾರ್ತಿ, ಐಶ್ವರ್ಯ ರೈ ಬಚ್ಚನ್ ಹಾಗೂ ತ್ರಿಶಾ ಸೇರಿದಂತೆ ಹಲವಾರು ಸ್ಟಾರ್‌ಗಳು ನಟಿಸಿದ್ದಾರೆ.

  English summary
  Anchor Anushree gifted Puneeth Rajkumar silver coin to Ponniyin Selvan team in Chennai promotion.
  Wednesday, September 21, 2022, 18:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X