ವಿಜಯ್ 65ನೇ ಚಿತ್ರದಿಂದ ಸ್ಟಾರ್ ನಿರ್ದೇಶಕ ಎಆರ್ ಮುರುಗದಾಸ್ ಔಟ್!

ಇಳಯ ದಳಪತಿ ವಿಜಯ್ ಮತ್ತು ಎ ಆರ್ ಮುರುಗದಾಸ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಬರಲಿದೆ ಎಂಬ ಸುದ್ದಿ ಹಲವು ತಿಂಗಳಿನಿಂದ ಸದ್ದು ಮಾಡುತ್ತಿದೆ. ಇದು ವಿಜಯ್ ಅವರ 65ನೇ ಚಿತ್ರ ಆಗಲಿದ್ದು, ಎಲ್ಲ ಅಂದುಕೊಂಡಂತೆ ಆದರೆ 2021ರ ಫೆಬ್ರವರಿಯಲ್ಲಿ ಅಧಿಕೃತವಾಗಿ ಸೆಟ್ಟೇರಲಿದೆ ಎನ್ನಲಾಗಿದೆ.

ಭಾರಿ ನಿರೀಕ್ಷೆ ಮೂಡಿಸಿರುವ ಈ ಪ್ರಾಜೆಕ್ಟ್ ಸೆಟ್ಟೇರುವುದಕ್ಕೆ ಮುಂಚಿತವಾಗಿಯೇ ನಿರಾಸೆ ಮೂಡಿಸಿದೆ. ವಿಜಯ್ ಚಿತ್ರದಿಂದ ಎಆರ್ ಮುರುಗದಾಸ್ ಹೊರಬಂದಿದ್ದಾರೆ ಎಂಬ ಲೇಟೆಸ್ಟ್ ಸುದ್ದಿ ಈಗ ಕಾಲಿವುಡ್‌ನಲ್ಲಿ ಚರ್ಚೆಯಾಗ್ತಿದೆ. ಮುಂದೆ ಓದಿ....

ಸ್ಕ್ರಿಪ್ಟ್ ಬದಲಾಯಿಸಲು ಸೂಚನೆ

ಸ್ಕ್ರಿಪ್ಟ್ ಬದಲಾಯಿಸಲು ಸೂಚನೆ

ವಿಜಯ್ ಅವರಿಗಾಗಿ ಮಾಡಲಾಗಿದ್ದ ಸ್ಕ್ರಿಪ್ಟ್ ನಟನಿಗೆ ಇಷ್ಟ ಆಗಿಲ್ಲ. ಹೀಗಾಗಿ, ಕಥೆಯನ್ನು ಕೆಲವು ಬದಲಾವಣೆಗಳನ್ನು ತನ್ನಿ ಎಂದು ನಿರ್ದೇಶಕ ಮುರುಗದಾಸ್ ಅವರಿಗೆ ಸೂಚಿಸಲಾಗಿದೆಯಂತೆ. ಸ್ಕ್ರಿಪ್ಟ್ ಬದಲಾಯಿಸಿದರೂ ವಿಜಯ್ ಅವರನ್ನು ಮೆಚ್ಚಿಸಲು ಕಷ್ಟ ಎಂದು ನಿರ್ದೇಶಕರು ಮೌನವಹಿಸಿದ್ದಾರಂತೆ.

ಸಂಭಾವನೆ ವಿಚಾರದಲ್ಲಿ ಮುರುಗದಾಸ್ ಬೇಸರ

ಸಂಭಾವನೆ ವಿಚಾರದಲ್ಲಿ ಮುರುಗದಾಸ್ ಬೇಸರ

ವಿಜಯ್ ಜೊತೆಗಿನ ಈ ಪ್ರಾಜೆಕ್ಟ್ ಗೆ ಸನ್ ಪಿಕ್ಚರ್ಸ್ ಬಂಡವಾಳ ಹಾಕಲು ನಿರ್ಧರಿಸಿದ್ದರು. ಆದರೆ, ಎಆರ್ ಮುರುಗದಾಸ್ ಸಂಭಾವನೆ ವಿಚಾರದಲ್ಲಿ ನಿರ್ಮಾಪಕರು ಕಾಂಪ್ರುಮೈಸ್ ಆಗಲಿಲ್ಲ. ಮುರುಗದಾಸ್ ನಿರೀಕ್ಷಿಸಿದ ಸಂಭಾವನೆ ಕೊಡಲು ಒಪ್ಪದಿರುವ ಕಾರಣ ನಿರ್ದೇಶಕರು ಹಿಂದೆ ಸರಿಯುತ್ತಿದ್ದಾರೆ ಎಂಬ ಮಾತು ಸಹ ಇದೆ.

ಅಧಿಕೃತ ಮಾಡುವವರೆಗೂ ನಿರೀಕ್ಷೆ ಉಳಿಯಲಿ

ಅಧಿಕೃತ ಮಾಡುವವರೆಗೂ ನಿರೀಕ್ಷೆ ಉಳಿಯಲಿ

ವಿಜಯ್ ಮತ್ತು ಎಆರ್ ಮುರುಗದಾಸ್ ಹಾಗೂ ಸನ್ ಪಿಕ್ಚರ್ಸ್ ಕಾಂಬಿನೇಷನ್ ಚಿತ್ರದ ಬಗ್ಗೆ ಸದ್ಯಕ್ಕೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಹಾಗಾಗಿ, ನಟ, ನಿರ್ದೇಶಕ ಅಥವಾ ನಿರ್ಮಾಪಕರಿಂದ ಹೇಳಿಕೆ ಬರುವವರೆಗೂ ಈ ಪ್ರಾಜೆಕ್ಟ್ ಬಗ್ಗೆ ನಿರೀಕ್ಷೆಯನ್ನು ಹಾಗೆ ಉಳಿಸಿಕೊಳ್ಳಬಹುದು.

Recommended Video

ಮಗು ಹುಟ್ಟಿದ ಕೂಡಲೇ ಮೇಘನಾ ಆಸೆ ಈಡೇರಿಸಿದ್ದು ಈ ವೈದ್ಯರು | Filmibeat Kannada
ಹಿಟ್ ಕಾಂಬಿನೇಷನ್!

ಹಿಟ್ ಕಾಂಬಿನೇಷನ್!

ವಿಜಯ್ ಮತ್ತು ಎಆರ್ ಮುರುಗದಾಸ್ ಜೋಡಿ ಸೌತ್ ಇಂಡಸ್ಟ್ರಿಯ ಹಿಟ್ ಕಾಂಬಿನೇಷನ್‌ಗಳಲ್ಲಿ ಒಂದು. ಈ ಜೋಡಿಯಿಂದ ಈಗಾಗಲೇ ತುಪಾಕಿ, ಕತ್ತಿ ಹಾಗೂ ಸರ್ಕಾರ್ ಅಂತಹ ಸೂಪರ್ ಹಿಟ್ ಚಿತ್ರಗಳು ಬಂದಿದೆ. ಸದ್ಯಕ್ಕೆ ವಿಜಯ್ 'ಮಾಸ್ಟರ್' ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Thalapathy 65th movie update: Director AR Murugadoss has opted out of the Vijay's project?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X