ಸಿನಿಮಾ ಕಾರ್ಯಕ್ರಮದಲ್ಲಿ ಬೇಸರಗೊಂಡು ವೇದಿಕೆ ಇಳಿದಿದ್ದಕ್ಕೆ ರೆಹಮಾನ್ ಕೊಟ್ಟರು ಕಾರಣ

ದಿಗ್ಗಜ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಕಾರ್ಯಕ್ರಮಗಳಿಗೆ ಹಾಜರಾದರೂ ಮಾತಂತೂ ಬಹಳ ಕಡಿಮೆ. ಯಾವಾಗಲೂ ನಗುಮುಖವನ್ನೇ ಪ್ರದರ್ಶಿಸುವ ಅವರು ಇತ್ತೀಚೆಗೆ ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೇ ಬೇಸರ ಹೊರಹಾಕಿದರು.

ತಮ್ಮದೇ ನಿರ್ಮಾಣದ, ತಾವೇ ಕತೆ ಬರೆದಿರುವ '99ಸಾಂಗ್ಸ್' ಸಿನಿಮಾದ ಆಡಿಯೋ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನಿರೂಪಕಿ ಹಿಂದಿ ಮಾತನಾಡಿದ್ದಕ್ಕೆ ಅಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಎ.ಆರ್.ರೆಹಮಾನ್ ವೇದಿಕೆಯಿಂದ ಕೆಳಗೆ ಇಳಿದಿದ್ದರು. ಈ ವಿಡಿಯೋ ಬಹಳ ವೈರಲ್ ಆಗಿತ್ತು.

ಈ ಬಗ್ಗೆ ಹಿಂದಿ ಮಾಧ್ಯಮವೊಂದಕ್ಕೆ ಕಾರಣ ನೀಡಿದ್ದಾರೆ ಎ.ಆರ್.ರೆಹಮಾನ್. 'ನಮ್ಮ ಸಿನಿಮಾ ಮೂರು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈಗಾಗಲೇ ನಾವು ಹಿಂದಿ ಭಾಷೆಯ ಹಾಡು ಬಿಡುಗಡೆ ಮಾಡಿದ್ದೆವು. ತಮಿಳು ಹಾಡು ಬಿಡುಗಡೆ ಮಾಡಲು ಕಾರ್ಯಕ್ರಮ ಆಯೋಜಿಸಿದ್ದೆವು. ಆ ಕಾರ್ಯಕ್ರಮದಲ್ಲಿ ಹಿಂದಿ ಮಾತನಾಡುವುದು ಬೇಡವೆಂದು ನಾನು ನಿರೂಪಕಿಗೆ ಮೊದಲೇ ಸೂಚಿಸಿದ್ದೆ. ಆದರೆ ನಮ್ಮ ಸಿನಿಮಾದ ಹೀರೋಗಾಗಿ ಆಕೆ ಹಿಂದಿ ಮಾತನಾಡಿದರು ಇದು ನನಗೆ ಸರಿ ಎನಿಸಲಿಲ್ಲ' ಎಂದಿದ್ದಾರೆ ರೆಹಮಾನ್.

AR Rahman Reveals Why He Walked Of The Stage In 99 Songs Movie Function

'ನಿಮ್ಮ ಹೀರೋ ಹೆಚ್ಚು ಬೆಳ್ಳಗೆ ಇದ್ದಾರೆ ಎಂದು ಈಗಾಗಲೇ ತಮಿಳು ಜನರು ಹೇಳುತ್ತಿದ್ದಾರೆ. ಜೊತೆಗೆ ವೇದಿಕೆ ಮೇಲೆ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಾವು ಕಾರ್ಯಕ್ರಮ ಮಾಡುತ್ತಿದ್ದುದೆ ತಮಿಳು ಪ್ರೇಕ್ಷಕರಿಗಾಗಿ ಆ ವೇದಿಕೆಯಲ್ಲಿ ಹಿಂದಿ ಮಾತನಾಡುವುದು ಬೇಡ ಎಂಬುದು ನನ್ನ ಉದ್ದೇಶವಾಗಿತ್ತು' ಎಂದಿದ್ದಾರೆ ಎ.ಆರ್.ರೆಹಮಾನ್.

ನಡೆದಿದ್ದಿಷ್ಟು, '99 ಸಾಂಗ್‌' ಸಿನಿಮಾದ ಹೀರೋ ಇಹಾನ್ ಅನ್ನು ವೇದಿಕೆಗೆ ಕರೆಯುವಾಗ ನಿರೂಪಕಿಯು ಹಿಂದಿ ಭಾಷೆಯಲ್ಲಿ ಮಾತನಾಡಿದರು. ಆಗ ವೇದಿಕೆ ಮೇಲಿದ್ದ ರೆಹಮನ್, 'ಹಿಂದಿ?' ಎಂದು ಪ್ರಶ್ನೆ ಮಾಡಿದರು. 'ನಾನು ನಿಮಗೆ ಮೊದಲೇ ಹೇಳಿದ್ದೆ ತಾನೆ ತಮಿಳಿನಲ್ಲಿ ಕಾರ್ಯಕ್ರಮ ನಡೆಸಿಕೊಡಿ ಎಂದು?' ಎಂದು ಪ್ರಶ್ನೆ ಮಾಡುತ್ತಾ ವೇದಿಕೆ ಇಳಿದಿದ್ದರು ರೆಹಮಾನ್, ಆದರೆ ವೇದಿಕೆ ಇಳಿಯುವ ಹೊತ್ತಿಗೆ ನಿರೂಪಕಿ ಕ್ಷಮೆ ಕೇಳಿದರು. ರೆಹಮಾನ್ ನಗುತ್ತಾ 'ಜೋಕ್' ಎಂದು ಹೇಳಿ ಕೆಳಗೆ ಇಳಿದರು.

Recommended Video

ಕರ್ನಾಟಕ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟ ರಾಬರ್ಟ್ ಮಂಗ್ಲಿ | Filmibeat Kannada

ವೇದಿಕೆ ಇಳಿದು ಹೋಗಿದ್ದೇಕೆ ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿರುವ ರೆಹಮಾನ್, 'ನಾನು ಬೇಸರಗೊಂಡು ವೇದಿಕೆ ಇಳಿಯಲಿಲ್ಲ. ಸಿನಿಮಾಕ್ಕೆ ಸಂಬಂಧಿಸಿದ ಇನ್ನೂ ಕೆಲವರು ವೇದಿಕೆ ಏರಬೇಕಿತ್ತು ಹಾಗಾಗಿ ನಾನು ವೇದಿಕೆ ಇಳಿದೆ' ಎಂದಿದ್ದಾರೆ. ವಿಡಿಯೋ ವೈರಲ್ ಆದ ಬಗ್ಗೆ ಮಾತನಾಡಿರುವ ರೆಹಮಾನ್, 'ವಿಡಿಯೋ ವೈರಲ್ ಆಗಿದ್ದು ಒಳ್ಳೆಯದೇ ಆಗಿದೆ. ನನಗೆ ಹಾಗೂ ಇಹಾನ್‌ಗೆ ಒಳ್ಳೆಯ ಪ್ರಚಾರವನ್ನು ಆ ವಿಡಿಯೋ ನೀಡಿದೆ, ಸಾಕಷ್ಟು ಹಣವನ್ನೂ ಉಳಿಸಿದೆ' ಎಂದು ನಗಾಡಿದ್ದಾರೆ ರೆಹಮಾನ್.

More from Filmibeat

English summary
Music composer AR Rahman reveals why he walked of the stage in 99 songs movie function after anchor talks in Hindi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X