For Quick Alerts
  ALLOW NOTIFICATIONS  
  For Daily Alerts

  ಎ.ಆರ್‌ ರೆಹಮಾನ್ ಪುತ್ರಿ ವಿವಾಹ ಸಂಭ್ರಮ, ಅಭಿಮಾನಿಗಳಿಂದ ಶುಭ ಹಾರೈಕೆ

  |

  ಭಾರತೀಯ ಚಿತ್ರರಂಗದ ಮ್ಯೂಸಿಕಲ್ ಮಾಂತ್ರಿಕ ಎ.ಆರ್ ರೆಹಮಾನ್ ಅವರ ಪುತ್ರಿ ಖತೀಜಾ ರೆಹಮಾನ್ ರಿಯಾಸ್ದೀನ್ ಶೇಕ್ ಮೊಹಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಶುಭಸುದ್ದಿಯನ್ನು ಎ.ಆರ್‌ ರೆಹಮಾನ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ನವವಿವಾಹಿತ ಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ.

  AR Rahman: ಲಕ್ಷಗಳಿಗೆ ಹರಾಜಾಯ್ತು ಎಆರ್ ರೆಹಮಾನ್ ಧರಿಸಿದ್ದ ಉಡುಪುAR Rahman: ಲಕ್ಷಗಳಿಗೆ ಹರಾಜಾಯ್ತು ಎಆರ್ ರೆಹಮಾನ್ ಧರಿಸಿದ್ದ ಉಡುಪು

  ಗುರುವಾರ ವಿವಾಹ ಸಮಾರಂಭ ನಡೆದಿದ್ದು, ಮದುವೆಯ ಪೋಟೊಗಳನ್ನು ಎ.ಆರ್‌ ರೆಹಮಾನ್ ತಮ್ಮ ಇನ್ಸ್‌ಟಾ ಹಾಗೂ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪತ್ನಿ ಸಾಯಿರಾ ಬಾನು ಮತ್ತು ಮಕ್ಕಳಾದ ಅಮೀನ್ ಮತ್ತು ರಹೀಮಾ ಎಲ್ಲರೂ ನೂತನ ವಧುವರರ ಜೊತೆಯೇ ಪೋಟೊಗೆ ಪೋಸ್‌ ನೀಡಿದ್ದಾರೆ. ಇನ್ನು ಎ.ಆರ್‌ ರೆಹಮಾನ್ ನೂತನ ದಂಪತಿಗಳಿಗೆ ದೇವರು ಆರ್ಶೀವದಿಸಲಿ. ನಿಮ್ಮ ಶುಭ ಹಾರೈಕೆಗಳಿಗೂ ಧನ್ಯವಾದಗಳು ಎಂದು ಬರೆದು ವಧು ವರ ಜೊತೆಗಿನ ತಮ್ಮ ಫ್ಯಾಮಿಲಿ ಪೋಟೊವನ್ನು ಹಂಚಿಕೊಂಡಿದ್ದಾರೆ.

  ಸದ್ಯ ಪೋಟೊಗಳನ್ನು ನೋಡಿದ ಅಭಿಮಾನಿಗಳು ಹಾಗೂ ಸಿನಿ ಕಲಾವಿದರು ಖತೀಜಾ ರೆಹಮಾನ್ ಹಾಗೂ ರಿಯಾಸ್ದೀನ್‌ ಶೇಕ್‌ಗೆ ಶುಭಾಶಯದ ಮಹಾಪೂರವನ್ನೇ ಹರಿಸಿದ್ದಾರೆ. ಗಾಯಕಿ ಶ್ರೇಯಾ ಘೋಷಾಲ್ ಕೂಡ ರೆಹಮಾನ್ ಪುತ್ರಿಯ ವಿವಾಹಕ್ಕೆ ಶುಭಾಶಯ ಕೋರಿದ್ದಾರೆ. ನವ ವಧು-ವರರಿಗೆ ಶುಭಾಶಯಗಳು ದೇವರು ನಿಮ್ಮಬ್ಬರಿಗೂ ಒಳ್ಳೆದು ಮಾಡಲಿ. ಸಂತೋಷವಾಗಿರಿ ಎಂದು ಹಾರೈಸಿದ್ದಾರೆ.

  ಉದ್ಯಮಿ ರಿಯಾಸ್ದೀನ್ ಶೇಕ್‌ ಜೊತೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಖತೀಜಾ ರೆಹಮಾನ್‌ ಅವರ ಹುಟ್ಟಹಬ್ಬದ ದಿನದಂದೇ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಾಗಿತ್ತು. ಗುರುವಾರ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿದ್ದು, ಬಾಲಿವುಡ್‌ನ ಹಲವು ತಾರೆಯರು ಭಾಗಿಯಾಗಿ ನೂತನ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

  AR Rahmans Daughter Khatija got married to Riyasdeen Shaikh Mohamed

  ಖತೀಜಾ ರೆಹಮಾನ್‌ ಕೂಡ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮದುವೆಯ ಪೋಟೊಗಳನ್ನು ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಉಡುಪಿನಲ್ಲಿ ನವ ವಧು ವರರು ಮಿಂಚುತ್ತಿದ್ದು, ಇಂದು ಜೀವನದಲ್ಲಿ ಅತ್ಯಂತ ಮರೆಯಲಾಗದ ದಿನ ಎಂದು ಖತೀಜಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  English summary
  AR Rahman's daughter Khatija Rahman has married Riyasdeen Shaikh Mohamed. The music composer shared the happy news on Instagram, along with a family photo from the nikah ceremony.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X