ಎಂಜಿಆರ್ ಪುಣ್ಯ ಸ್ಮರಣೆಯ ದಿನ ಅರವಿಂದ್ ಸ್ವಾಮಿಯ ಹೊಸ ಲುಕ್ ಬಿಡುಗಡೆ
ಕಂಗನಾ ರಣಾವತ್ ನಟಿಸುತ್ತಿರುವ ತಲೈವಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಜೀವನ ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ತಮಿಳು ನಟ ಅರವಿಂದ್ ಸ್ವಾಮಿ ಎಂಜಿಆರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕಳೆದ ವಾರವಷ್ಟೇ ಅರವಿಂದ್ ಸ್ವಾಮಿ ತಲೈವಿ ಚಿತ್ರದ ಶೂಟಿಂಗ್ ಆರಂಭಿಸಿದ್ದರು. ಎಂಜಿಆರ್ ಪಾತ್ರದಲ್ಲಿ ಬಣ್ಣ ಹಚ್ಚುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದೀಗ, ಅರವಿಂದ್ ಸ್ವಾಮಿಯ ಹೊಸ ಲುಕ್ ಬಿಡುಗಡೆಯಾಗುತ್ತಿದೆ.
ಎಂಜಿಆರ್ ಅವರ ಪುಣ್ಯ ಸ್ಮರಣೆ ದಿನದ ವಿಶೇಷವಾಗಿ ಅರವಿಂದ್ ಸ್ವಾಮಿಯ ಹೊಸ ಲುಕ್ ರಿಲೀಸ್ ಆಗುತ್ತಿದೆ. ಡಿಸೆಂಬರ್ 24 ರಂದು ಬೆಳಗ್ಗೆ 10 ಗಂಟೆಗೆ ಎಂಜಿಆರ್ ಪಾತ್ರದ ಲುಕ್ ಅನಾವರಣಗೊಳ್ಳಲಿದೆ.

ಈ ಕುರಿತು ಸ್ವತಃ ಅರವಿಂದ್ ಸ್ವಾಮಿ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎಂಜಿಆರ್ ಅವರಂತೆ ತಲೆಗೆ ಟೋಪಿ ಹಾಗೂ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಜನರತ್ತ ಕೈ ಬೀಸುತ್ತಿರುವ ಹಿಂಬದಿಯ ಫೋಟೋವನ್ನು ಹಂಚಿಕೊಂಡು, ''ನಾಳೆ ಎಂಜಿಆರ್ ಹೊಸ ಲುಕ್ ಬರ್ತಿದೆ'' ಎಂದು ತಿಳಿಸಿದ್ದಾರೆ.
ಅರವಿಂದ್ ಸ್ವಾಮಿಯ ಎಂಜಿಆರ್ ಲುಕ್ ವರ್ಷದ ಆರಂಭದಲ್ಲಿ ಅನಾವರಗೊಳಿಸಿದ್ದರು. ಈಗ ಎಂಜಿಆರ್ ಪುಣ್ಯ ಸ್ಮರಣೆಯ ವಿಶೇಷವಾಗಿ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.
ಇನ್ನುಳಿದಂತೆ ಎಎಲ್ ವಿಜಯ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ವಿಷ್ಣುವರ್ಧನ ಇಂದುರಿ ಮತ್ತು ಶೈಲೆಶ್ ಆರ್ ಸಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಜಯಲಲಿತಾ ಅವರ ಆಪ್ತೆ ಶಶಿಕಲಾ ಪಾತ್ರದಲ್ಲಿ ಪೂರ್ಣ ನಟಿಸುತ್ತಿದ್ದಾರೆ.


Click it and Unblock the Notifications











