For Quick Alerts
  ALLOW NOTIFICATIONS  
  For Daily Alerts

  ಕಲಾವಿದ ಕರಣ್ ಆಚಾರ್ಯ ಕಲ್ಪನೆಯಲ್ಲಿ ಶಿವನಾದ ಕಾಲಿವುಡ್ ಸ್ಟಾರ್ ನಟ ಕಾರ್ತಿ

  |

  ಕನ್ನಡದ ಅದ್ಭುತ ಪ್ರತಿಭೆ ಕರಣ್ ಆಚಾರ್ಯ ಕಲ್ಪನೆಯಲ್ಲಿ ಮೂಡಿಬರುವ ಚಿತ್ರಪಟಗಳು ಎಲ್ಲರ ಗಮನ ಸೆಳೆಯುತ್ತಿವೆ. ತನ್ನ ಕಲ್ಪನೆಯಲ್ಲಿ ಸಾಕಷ್ಟು ಚಿತ್ರಪಟಗಳನ್ನು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕರಣ್ ಆಚಾರ್ಯ ಅವರ ಫೋಟೋಗಳಿಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

  ಇದೀಗ ಕರಣ್ ಆಚಾರ್ಯ ಹಂಚಿಕೊಂಡಿರುವ ಮತ್ತೊಂದು ಫೋಟೋ ಅಭಿಮಾನಿಗಳ ಮನ ಸೆಳೆದಿದೆ. ತನ್ನ ಕಲ್ಪನೆಯಲ್ಲಿ ತಮಿಳು ನಟ ಕಾರ್ತಿ ಶಿವನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಕಾರ್ತಿ ಅವರ ಫೋಟೋವನ್ನು ಶಿವನ ಹಾಗೆ ಎಡಿಟ್ ಮಾಡಿದ್ದಾರೆ. ಈ ಫೋಟೋ ತಮಿಳು ಅಭಿಮಾನಿಗಳ ಹೃದಯ ಗೆದ್ದಿದೆ.

  ರಶ್ಮಿಕಾ ನಟನೆಯ ಮೊದಲ ತಮಿಳು ಸಿನಿಮಾ ಬಿಡುಗಡೆ ಇನ್ನಷ್ಟು ತಡರಶ್ಮಿಕಾ ನಟನೆಯ ಮೊದಲ ತಮಿಳು ಸಿನಿಮಾ ಬಿಡುಗಡೆ ಇನ್ನಷ್ಟು ತಡ

  ಅಂದಹಾಗೆ ಕಾರ್ತಿ ಅಭಿಮಾನಿಯೊಬ್ಬರು ಕಾರ್ತಿ ಫೋಟೋ ಸೇರ್ ಮಾಡಿ,ಶಿವ ಅಥವಾ ರಾಮ ಹಾಗೆ ಎಡಿಟ್ ಮಾಡಿ ಎಂದು ಕರಣ್ ಆಚಾರ್ಯ ಬಳಿ ಮನವಿ ಮಾಡಿಕೊಂಡಿದ್ದರು. ಅಭಿಮಾನಿಯ ಮನವಿಗೆ ಸ್ಪಂದಿಸಿದ ಕರಣ್, ಕಾರ್ತಿಯನ್ನು ಶಿವನ ಅವತಾರದಲ್ಲಿ ಎಡಿಟ್ ಮಾಡಿ ಅಭಿಮಾನಿಗಳನ್ನು ಖುಷಿ ಪಡಿಸಿದ್ದಾರೆ.

  ಅಂದಹಾಗೆ ಕರಣ್ ಈ ಹಿಂದೆ ನಟಿ ಮೇಘನಾ ರಾಜ್ ಅವರ ಫೋಟೋವನ್ನು ಎಡಿಟ್ ಮಾಡಿದ್ದರು. ಕರಣ್ ತನ್ನ ಕಲ್ಪನೆಯಲ್ಲಿ ಗರ್ಭಿಣಿ ಮೇಘನಾ ಅವರನ್ನು ಪತಿ ಚಿರಂಜೀವಿ ಕೈ ಹಿಡಿದು ಕರೆದುಕೊಂಡು ಹೋಗುತ್ತಿರುವ ಹಾಗೆ ಎಡಿಟ್ ಮಾಡಿದ್ದರು. ಮನಮುಟ್ಟುವ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೆ ಹರಿದುಬಂದಿತ್ತು.

  ಇನ್ನು ವಿಶೇಷ ಎಂದರೆ ಇತ್ತೀಚಿಗೆ ಕರಣ್, ಸ್ಯಾಂಡಲ್ ವುಡ್ ಮಾಜಿ ಕುಚುಕುಗಳಾದ ದರ್ಶನ್ ಮತ್ತು ಸುದೀಪ್ ಅವರನ್ನು ರಾಮ-ಆಂಜನೇಯ ಅವತಾರದಲ್ಲಿ ಎಡಿಟ್ ಮಾಡಿದ್ದರು. ಸ್ಯಾಂಡಲ್ ವುಡ್ ಸ್ಟಾರ್ ನಟರಿಬ್ಬರನ್ನು ರಾಮ-ಆಂಜನೇಯನಾಗಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಕರಣ್ ಆಚಾರ್ಯ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಸಾಕಷ್ಟು ಫೋಟೋಗಳನ್ನು ಸೇರ್ ಮಾಡಿ, ಎಡಿಟ್ ಮಾಡಿಕೊಡಿ ಎಂದು ಮುಗಿಬಿದ್ದಿದ್ದಾರೆ.

  English summary
  Artist Karan Acharya creates Kollywood Actor Karthi as Lord Shiva.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X