ಸೂಪರ್ ಸ್ಟಾರ್ ಸರಳತೆಗೆ ಅಭಿಮಾನಿಗಳ ಸಲಾಮ್

ಅವರಿಗೆ ಇರುವ ಬಿರುದು ಸೂಪರ್ ಸ್ಟಾರ್, ಆದರೆ ಆ ವ್ಯಕ್ತಿ ನಿಜ ಜೀವನದಲ್ಲಿ ಸಿಂಪಲ್ ಸ್ಟಾರ್ ಆಗಿರುತ್ತಾರೆ. ಅವರೇ ರಜನಿಕಾಂತ್.

ನಟ ರಜನಿಕಾಂತ್ ಅನೇಕ ಬಾರಿ ತಮ್ಮ ಸರಳತೆಯ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗಿದ್ದಾರೆ. ಇದೀಗ ಮತ್ತೆ ಅವರ ಸರಳತೆ ಕಂಡು ಅಭಿಮಾನಿಗಳ ಮನಸ್ಸು ತುಂಬಿದೆ. ಅವರ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

21 ವರ್ಷದ ಚಿತ್ರಕಾರ, ವಿಶೇಷ ಚೇತನ ಪ್ರಣವ್ ಎಂ ಬಿ ಇತ್ತೀಚಿಗಷ್ಟೆ ಕೇರಳ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದರು. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ರನ್ನು ಮೀಟ್ ಮಾಡಿದ್ದಾರೆ. ರಜನಿಕಾಂತ್ ರನ್ನು ನೋಡಬೇಕು ಎನ್ನುವುದು ಪ್ರಣವ್ ಜೀವನದ ಕನಸಾಗಿತ್ತು. ಆ ಆಸೆಯನ್ನು ಸೂಪರ್ ಸ್ಟಾರ್ ಈಡೇರಿಸಿದ್ದಾರೆ.

Artist Pranav Met Super Star Rajinikanth

ಚೆನ್ನೈನ ತಮ್ಮ ನಿವಾಸದಲ್ಲಿ ರಜನಿಕಾಂತ್ ಪ್ರಣವ್ ರನ್ನು ಭೇಟಿ ಮಾಡಿದ್ದಾರೆ. 20 ನಿಮಿಷಗಳ ಕಾಲ ಅವರ ಜೊತೆಗೆ ಮಾತನಾಡಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿಯೂ ಅಭಿಮಾನಿಗೆ ಸಮಯ ನೀಡಿದ್ದಾರೆ. ಅಂತಹ ದೊಡ್ಡ ನಟ ಒಬ್ಬ ಅಭಿಮಾನಿ ಕಾಲು ಮುಟ್ಟಿದ್ದು, ರಜನಿ ಸರಳತೆಗೆ ಅಭಿಮಾನಿಗಳು ಸಲಾಮ್ ಎಂದಿದ್ದಾರೆ.

ಮೆಚ್ಚಿನ ನಟನಿಗೆ ಪ್ರಣವ್ ಉಡುಗೊರೆ ನೀಡಿದ್ದಾರೆ. ರಜನಿಕಾಂತ್ ಚಿತ್ರವನ್ನು ಬಿಡಿಸಿ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಈ ಸುಂದರ ಕ್ಷಣವನ್ನು ಫೋಟೋ ಮೂಲಕ ಸೆರೆ ಹಿಡಿದಿದ್ದಾರೆ.

Artist Pranav Met Super Star Rajinikanth

ಅಂದಹಾಗೆ, ರಜನಿಕಾಂತ್ ಸದ್ಯ ದರ್ಬಾರ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಎ ಆರ್ ಮುರುಗದಾಸ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.

More from Filmibeat

English summary
Artist Pranav met super star Rajinikanth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X