'ನಾನು ಮತ್ತು ವರಲಕ್ಷ್ಮಿ' ಸಿನಿಮಾ ನಟಿಗೆ ನೆಟ್ಟಿಗನ ಅಶ್ಲೀಲ ಪ್ರಶ್ನೆ
ಸೋಶಿಯಲ್ ಮೀಡಿಯಾ ಮೂಲಕ ಸೆಲೆಬ್ರೆಟಿಗಳು ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ತಮ್ಮ ಪ್ರತಿದಿನದ ಆಗೋಹೋಗುಗಳ ಬಗ್ಗೆ ಕಾಮೆಂಟ್ ಮಾಡಿ ತಿಳಿಸುತ್ತಾರೆ. ಅಭಿಮಾನಿಗಳು ಕೂಡ ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಕೆಲವೊಮ್ಮೆ ಇದೇ ಸೋಶಿಯಲ್ ಮೀಡಿಯಾದಲ್ಲಿ ಕೆಲ ನಟ-ನಟಿಯರಿಗೆ ಕಹಿ ಅನುಭವವೂ ಆಗಿದೆ.
ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿ ವಿಕೃತಿ ಮೆರೆಯುವ ಕೆಲಸ ಮಾಡುತ್ತಿರುತ್ತಾರೆ. ಆ ಮೂಲಕ ಗಮನ ಸೆಳೆಯಲು ನೋಡುತ್ತಾರೆ. ಕೆಲವರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮತ್ತೆ ಕೆಲವರು ನೇರವಾಗಿ ತಿರುಗೇಟು ನೀಡುತ್ತಾರೆ. ಸದ್ಯ ಬಹುಭಾಷಾ ನಟಿ ಮಾಳವಿಕಾ ಮೋಹನನ್‌ಗೂ ಇದೇ ರೀತಿಯ ಕಹಿ ಅನುಭವ ಆಗಿದೆ.

ಮಲಯಾಳಂ ನಟಿ ಮಾಳವಿಕಾ ಮೋಹನನ್ ಬಾಲಿವುಡ್ ಚಿತ್ರಗಳಲ್ಲಿ ಕೂಡ ನಟಿಸಲು ಆರಂಭಿಸಿದ್ದಾರೆ. ಕನ್ನಡದಲ್ಲಿ 'ನಾನು ಮತ್ತು ವರಲಕ್ಷ್ಮಿ' ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಸದ್ಯ ಪ್ರಭಾಸ್ ಜೊತೆ 'ರಾಜಾ ಸಾಬ್' ಹಾಗೂ ತಮಿಳಿನಲ್ಲಿ ಕಾರ್ತಿ ಜೊತೆ 'ಸರ್ದಾರ್- 2' ಚಿತ್ರಗಳಲ್ಲಿ ಮಾಳವಿಕಾ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.
ಹಾಟ್ ಹಾಟ್ ಫೋಟೊಶೂಟ್ ಮೂಲಕ ಮಾಳವಿಕಾ ಮೋಹನನ್ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ. ಬಿಂದಾಸ್ ಅವತಾರಗಳಲ್ಲಿ ಫೋಟೊ, ವೀಡಿಯೋ ಕ್ಲಿಕ್ಕಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ. ಅದಕ್ಕೆ ಸಾಕಷ್ಟು ಲೈಕ್ಸ್, ಕಾಮೆಂಟ್ಸ್ ಬರುತ್ತದೆ. ಸಾಮಾನ್ಯವಾಗಿ ನಟಿಯರು ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಆಕ್ಟೀವ್ ಇದ್ದರೆ ಮಾಳವಿಕಾ ಮಾತ್ರ ಟ್ವಿಟರ್‌ನಲ್ಲಿ ಕೂಡ ಸಖತ್ ಆಕ್ಟೀವ್.

ಮಾಳವಿಕಾ ಆಗಾಗ್ಗೆ ಅಭಿಮಾನಿಗಳ ಜೊತೆ ಚಾಟ್ ಮಾಡುತ್ತಾರೆ. #AskMalavika ಹೆಸರಿನಲ್ಲಿ ನೆಟ್ಟಿಗರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ನಿಮ್ಮ ನೆಚ್ಚಿನ ನಟ ಯಾರು? ಕ್ರಿಕೆಟಿಗ ಯಾರು? ಹೀಗೆ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಇತ್ತೀಚೆಗೆ ಇದೇ ರೀತಿ ಸೆಷನ್ ನಡೆಸುವಾಗ ನೆಟ್ಟಿಗನೊಬ್ಬ "ನೀವು ವರ್ಜಿ*?" ಎಂದು ಪ್ರಶ್ನೆ ಕೇಳಿದ್ದಾರೆ. ಕೆಲವರು ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗಲ್ಲ. ಇಂತಹ ಕೊಳಕು ಪ್ರಶ್ನೆಗಳನ್ನು ಕೇಳಬೇಡಿ ಎಂದು ರಿಪ್ಲೇ ಮಾಡಿದ್ದಾರೆ.
ಸದ್ಯ ಮಾಳವಿಕಾ ಮೋಹನನ್ ಕಾಮೆಂಟ್ ವೈರಲ್ ಆಗುತ್ತಿದ್ದಂತೆ ಆತ ತನ್ನ ಟ್ವೀಟ್ ಡಿಲೀಟ್ ಮಾಡಿದ್ದಾನೆ. ಹೆಣ್ಣು ಮಕ್ಕಳ ಬಳಿ ಯಾವ ರೀತಿ ವರ್ತಿಸಬೇಕು ಎನ್ನುವುದು ಗೊತ್ತಿಲ್ಲವೇ ಎಂದು ಆ ನೆಟ್ಟಿಗನಿಗೆ ಕೆಲವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಹಿಂದೆ ಕೂಡ ಕೆಲ ನಟಿಯರಿಗೆ ಇಂತಹ ಕೊಳಕು ಪ್ರಶ್ನೆ ಎದುರಾಗಿದ್ದು ಇದೆ. ಕೆಲವರು ಖಾರವಾಗಿಯೇ ತಿರುಗೇಟು ನೀಡಿದ್ದಾರೆ. ಇನ್ನು ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು? ಎನ್ನುವ ಪ್ರಶ್ನೆಗೆ ವಿರಾಟ್ ಕೊಹ್ಲಿ ಹೆಸರನ್ನು ಮಾಳವಿಕಾ ಹೇಳಿದ್ದಾರೆ.
ಕೇರಳದಲ್ಲಿ ಹುಟ್ಟಿ ಬೆಳೆದ ಮಾಳವಿಕಾ 'ಪಟ್ಟಂ ಪೋಲ್' ಎಂಬ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೋಡಿಯಾಗಿ ಮಿಂಚಿದ್ದರು. 'ಬಿಯಾಂಡ್ ದಿ ಕ್ಲೌಡ್ಸ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಗ್ಲಾಮರಸ್ ಪಾತ್ರಗಳಿಗೆ ಹೇಳಿಮಾಡಿಸಿದ ನಟಿ ಮಾಳವಿಕಾ. ಆದರೆ ಯಾಕೋ ಹೆಚ್ಚು ಅವಕಾಶಗಳು ಆಕೆಗೆ ಸಿಗಲಿಲ್ಲ. ಆರಕ್ಕೇರದ ಮೂರಕ್ಕಿಳಿಯದ ನಟಿಯಾಗಿಯೇ ಉಳಿದುಬಿಟ್ಟಿದ್ದಾರೆ.
ಪ್ರಭಾಸ್ ಜೊತೆ ನಟಿಸುತ್ತಿರುವ 'ರಾಜಾಸಾಬ್' ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಳೆದ ವರ್ಷ ಬಂದ 'ತಂಗಲಾನ್' ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಸಿಕ್ಕಿತ್ತು. ಆರತಿ ಪಾತ್ರದಲ್ಲಿ ಅಬ್ಬರಿಸಿದ್ದರು. ಆಕೆ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.


Click it and Unblock the Notifications











