For Quick Alerts
  ALLOW NOTIFICATIONS  
  For Daily Alerts

  ಶಾರೂಖ್ ಇಲ್ಲ, ಎನ್.ಟಿ.ಆರ್ ಇಲ್ಲ...ಸರ್ಪ್ರೈಸ್ ಕೊಟ್ರು ಅಟ್ಲಿ!

  |

  'ಬಿಗಿಲ್' ಸಿನಿಮಾದ ಬಳಿಕ ನಿರ್ದೇಶಕ ಅಟ್ಲಿ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಚಿತ್ರಪ್ರೇಮಿಗಳನ್ನು ಕಾಡುತ್ತಿದೆ. ಬಾಲಿವುಡ್ ನಟ ಶಾರೂಖ್ ಖಾನ್ ಅವರೊಂದಿಗೆ ಅಟ್ಲಿ ಕಾಣಿಸಿಕೊಂಡ ಕ್ಷಣದಿಂದ ಇವರಿಬ್ಬರ ಕಾಂಬಿನೇಷನ್ನಲ್ಲೊಂದು ಸಿನಿಮಾ ಬರುತ್ತೆ ಎಂಬ ನಿರೀಕ್ಷೆ ಹುಟ್ಟಿಕೊಂಡಿತ್ತು.

  ಆದರೆ ಆ ಪ್ರಾಜೆಕ್ಟ್ ಆರಂಭವಾಗುವ ಲಕ್ಷಣ ಕಂಡಿಲ್ಲ. ಈ ಮಧ್ಯೆ ಜೂನಿಯರ್ ಎನ್.ಟಿ.ಆರ್ ಅವರ ಜೊತೆ ಅಟ್ಲಿ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಆಯ್ತು. ಈ ಚಿತ್ರದ ಬಗ್ಗೆಯೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

  ಶಾರುಖ್ ಬಿಟ್ಟು ಮತ್ತೊಬ್ಬ ಸ್ಟಾರ್ ನಟನ ಕೈ ಹಿಡೀತಾರಾ ನಿರ್ದೇಶಕ ಅಟ್ಲೀಶಾರುಖ್ ಬಿಟ್ಟು ಮತ್ತೊಬ್ಬ ಸ್ಟಾರ್ ನಟನ ಕೈ ಹಿಡೀತಾರಾ ನಿರ್ದೇಶಕ ಅಟ್ಲೀ

  ಅವರನ್ನು ಬಿಟ್ಟು ಇವರನ್ನು ಬಿಟ್ಟು ಈಗ ಮತ್ತೊಬ್ಬ ನಟನ ಜೊತೆ ಅಟ್ಲಿ ಹೆಸರು ಕೇಳಿ ಬರ್ತಿದೆ. ಹೌದು, ಬಿಗಿಲ್ ಯಶಸ್ಸಿನ ಬಳಿಕ ಮತ್ತೊಮ್ಮೆ ವಿಜಯ್ ಜೊತೆಯಲ್ಲೇ ಸಿನಿಮಾ ಮಾಡ್ತಾರೆ ಎಂಬ ಇಂಟ್ರೆಸ್ಟಿಂಗ್ ವಿಷ್ಯ ಚರ್ಚೆಯಾಗ್ತಿದೆ.

  ಸದ್ಯ, ಲೋಕೇಶ್ ಕನಕರಾಜ್ ಅವರ ಜೊತೆ 64ನೇ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಳಿಕ ಅಟ್ಲಿ ಜೊತೆ ಮತ್ತೆ ಕೆಲಸ ಮಾಡಬಹುದು ಎಂಬ ನಿರೀಕ್ಷೆ ಇದೆ. ಈ ಚಿತ್ರವನ್ನ 'ಬಿಗಿಲ್' ನಿರ್ಮಿಸಿದ್ದ ಸನ್ ಪಿಕ್ಚರ್ಸ್ ಅವರೇ ನಿರ್ಮಾಣ ಮಾಡುವ ಸಾಧ್ಯತೆ ಇದೆ.

  ವಿಜಯ್ ಜೊತೆ ಈ ಹಿಂದೆ ಮೆರ್ಸಲ್, ಥೇರಿ ಹಾಗೂ ಬಿಗಿಲ್ ಚಿತ್ರವನ್ನ ಮಾಡಿದ್ದರು. ಮೂರು ಯಶಸ್ವಿ ಚಿತ್ರಗಳನ್ನು ಮಾಡಿದ್ದ ಜೋಡಿ ಮತ್ತೆ ಬಂದರೆ ಅಚ್ಚರಿಯಾಗಬಹುದು.

  English summary
  After Bigil, Director atlee and vijay ready to come together again.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X