For Quick Alerts
  ALLOW NOTIFICATIONS  
  For Daily Alerts

  ಸಾಯಿ ಪಲ್ಲವಿ ಜೊತೆ ಡೇವಿಡ್ ವಾರ್ನರ್ ಡಾನ್ಸ್; ವಿಡಿಯೋ ವೈರಲ್

  |

  ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಜೊತೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಯಿ ಪಲ್ಲವಿ ಜೊತೆ, ಡೇವಿಡ್ ವಾರ್ನರ್ ಯಾವಾಗ ಡಾನ್ಸ್ ಮಾಡಿದ್ರು ಅಂತ ತಲೆಕೆಡಿಸಿಕೊಂಡ್ರಾ? ಡೇವಿಡ್ ವಾರ್ನರ್ ಇನ್ಸ್ಟಾಗ್ರಾಮ್ ನೋಡಿದ್ರೆ ಗೊತ್ತಾಗುತ್ತೆ.

  David warner ಅವರ ಹೊಸ ಅವತಾರ ನೋಡಿ | Oneindia Kannada

  ಸಾಯಿ ಪಲ್ಲವಿ ಮತ್ತು ತಮಿಳು ನಟ ಧನುಷ್ ನಟನೆಯ ಮಾರಿ-2 ಸಿನಿಮಾದ ಸೂಪರ್ ಹಿಟ್ ರೌಡಿ ಬೇಬಿ ಹಾಡಿಗೆ ಡೇವಿಡ್ ವಾರ್ನರ್ ಹೆಜ್ಜೆ ಹಾಕಿದ್ದಾರೆ. ಫೇಸ್ ಆಪ್ ಮೂಲಕ ಧನುಷ್ ಮುಖಕ್ಕೆ ಡೇವಿಡ್ ವಾರ್ನರ್ ಮುಖ ಬರುವ ಹಾಗೆ ಜೋಡಿಸಿದ್ದಾರೆ. ಈ ವಿಡಿಯೋವನ್ನು ಡೇವಿಡ್ ವಾರ್ನರ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

  ಬಾಲಿವುಡ್‌ಗೆ ಹಾರಲಿದ್ದಾರೆ ನಟಿ ಸಾಯಿ ಪಲ್ಲವಿ, ಹೀರೊ ಯಾರು?ಬಾಲಿವುಡ್‌ಗೆ ಹಾರಲಿದ್ದಾರೆ ನಟಿ ಸಾಯಿ ಪಲ್ಲವಿ, ಹೀರೊ ಯಾರು?

  ಈ ವಿಡಿಯೋ ನೋಡಿದ್ರೆ ಸಾಯಿ ಪಲ್ಲವಿ ಜೊತೆ ಡೇವಿಡ್ ವಾರ್ನರ್ ಅವರೇ ಹೆಜ್ಜೆ ಹಾಕಿರುವ ಹಾಗೆ ಕಾಣುತ್ತೆ. ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಡೇವಿಡ್ ವಾರ್ನರ್ ಐಪಿಎಲ್ ಮೂಲಕ ಭಾರತೀಯರಿಗೆ ಮತ್ತಷ್ಟು ಹತ್ತಿರರಾಗಿದ್ದಾರೆ.

  ಈ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. 3 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದ್ದು, 14 ಸಾವಿರಕ್ಕೂ ಹೆಚ್ಚು ಕಾಮೆಂಟ್ಸ್ ಹರಿದು ಬಂದಿದೆ. ಅಭಿಮಾನಿಗಳು ಈ ವಿಡಿಯೋ ಶೇರ್ ಮಾಡಿ ಮಸ್ತ್ ಮನರಂಜನೆ ಪಡೆಯುತ್ತಿದ್ದಾರೆ.

  ಟಾಲಿವುಡ್ ಸಿನಿಮಾಗೆ ಯಾಕೆ ನೀವು ಪ್ರಯತ್ನ ಪಡಬಾರದು?, ತೆಲುಗು ರಾಜ್ಯದಲ್ಲಿ ನೀವು ಸೆನ್ಸೇಶನ್. ಚಿತ್ರಮಂದಿರಗಳು ನಿಮಗಾಗಿ ಕಾಯುತ್ತಿವೆ. ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  ವಾರ್ನರ್ ಆಗಾಗ ಇಂಥ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪ್ರಪಂಚದ ಪ್ರಸಿದ್ಧ ಹಾಡುಗಳಿಗೆ ಟಿಕ್ ಟಾಕ್ ಮತ್ತು ಡಾನ್ಸ್ ಮಾಡಿ ಗಮನ ಸೆಳೆದಿದ್ದರು. ಇತ್ತೀಚಿಗೆ 'ಕೆಜಿಎಫ್: ಚಾಪ್ಟರ್ 2' ಸಿನಿಮಾದ ಟೀಸರ್ ರಿಲೀಸ್ ಆದಾಗ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಡೇವಿಡ್ ವಾರ್ನರ್ ಕೂಡ ಫಿದಾ ಆಗಿದ್ದರು. ಟೀಸರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಗನ್ ನಿಂದ ಸಿಗರೇಟ್ ಹಚ್ಚಿಕೊಳ್ಳುವ ದೃಶ್ಯಕ್ಕೆ ಫೇಸ್ ಆಪ್ ಮಾಡಿದ್ದರು. ಎಡಿಟ್ ಮಾಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  English summary
  Australian Cricketer David Warner dance with Actress Sai Pallavi in Faceapp, video viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X