ಮುಚ್ಚಲಿದೆ ಐವತ್ತು ವರ್ಷ ಹಳೆಯ ಖ್ಯಾತ ಚಿತ್ರಮಂದಿರ

'ಎವಿಎಂ' ಎಂದರೆ ಗೊತ್ತಿಲ್ಲದ ದಕ್ಷಿಣ ಭಾರತದ ಸಿನಿಪ್ರೇಮ ಇರಲಿಕ್ಕಿಲ್ಲ. ಎವಿಎಂ ಸ್ಟುಡಿಯೋಸ್ ದಕ್ಷಿಣ ಭಾರತದ ಸಿನಿಮಾದ ಅಡಿಪಾಯ.

ಒಂದು ಕಾಲದಲ್ಲಿ ದಕ್ಷಿಣ ಭಾರತದ ಎಲ್ಲಾ ಸಿನಿಮಾಗಳು ಚಿತ್ರೀಕರಣಗೊಳ್ಳುತ್ತಿದ್ದು ಇದೇ ಎವಿಎಂ ಸ್ಟುಡಿಯೋದಲ್ಲಿ. ಇಂದು ದಂತಕತೆ ಎನಿಸಿಕೊಂಡಿರುವ ಬಹುತೇಕ ಎಲ್ಲಾ ನಟರಿಗೂ ಎವಿಎಂ ಸ್ಟುಡಿಯೋದೊಂದಿಗೆ ನಂಟು ಇದೆ.

ಎವಿಎಂ ಸ್ಟುಡಿಯೋಸ್ ಅನ್ನು ಸ್ಥಾಪಿಸಿದ ಎವಿ ಮೆಯಪ್ಪನ್ ಹಾಗೂ ಅವರ ಪತ್ನಿ ರಾಜೇಶ್ವರಿ ಸ್ಮರಣಾರ್ಥ 1978 ರಲ್ಲಿ ನಿರ್ಮಿಸಲಾಗಿದ್ದ ಎವಿಎಂ ರಾಜೇಶ್ವರಿ ಚಿತ್ರಮಂದಿರವನ್ನು ಇದೀಗ ಮುಚ್ಚಲಾಗುತ್ತಿದೆ.

 AVM Rajeswari Theatre To Shut Down Permanently

ಚೆನ್ನೈನ ವಡಪಳನಿ ಯಲ್ಲಿರುವ ಎವಿಎನ್ ರಾಜೇಶ್ವರಿ ಚಿತ್ರಮಂದಿರ, ಸಿಂಗಲ್ ಸ್ಕ್ರೀನ್ ಚಿತ್ರಮಂದಿರವಾಗಿದ್ದು, ಚೆನ್ನೈನ ಕಡಿಮೆ ದರದ ಉತ್ತಮ ಗುಣಮಟ್ಟದ ಚಿತ್ರಮಂದಿರಗಳಲ್ಲೊಂದಾಗಿತ್ತು.

ಆದರೆ ಕೊರೊನಾ ಕಾರಣದಿಂದಾಗಿ ಭಾರಿ ನಷ್ಟ ಅನುಭವಿಸಿರುವ ಚಿತ್ರಮಂದಿರದ ಮ್ಯಾನೇಜ್‌ಮೆಂಟ್ ಚಿತ್ರಮಂದಿರವನ್ನು ಬಂದ್ ಮಾಡುವ ಬಗ್ಗೆ ಚಿಂತಿಸಿದ್ದಾರೆ.

ಚಿತ್ರಮಂದಿರದ ಸಿಬ್ಬಂದಿಗೆ ಸಂಬಳ ಇನ್ನಿತರೆ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಚಿತ್ರಮಂದಿರವನ್ನು ಬಂದ್ ಮಾಡುವ ನಿರ್ಧಾರ ಮಾಡಲಾಗಿದೆ.

ಎವಿಎಂ ರಾಜೇಶ್ವರಿ ಮಾತ್ರವಲ್ಲದೆ, ಚೆನ್ನೈನ ಮತ್ತೊಂದು ಹಳೆಯ ಚಿತ್ರಮಂದಿರ ಮಹಾರಾಣಿ ಅನ್ನು ಸಹ ಬಂದ್ ಮಾಡುವ ಸಾಧ್ಯತೆ ಇದೆ.

More from Filmibeat

English summary
Chennai's AVM Rajeshwari theater to shut down permanently due to coronavirus crisis.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X