ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಜೊತೆ ವಿಷ್ಣು ವಿಶಾಲ್ ನಿಶ್ಚಿತಾರ್ಥ

ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಮತ್ತು ತಮಿಳು ನಟ ವಿಷ್ಣು ವಿಶಾಲ್ ನಡುವೆ ಸಂಥಿಂಗ್ ಏನೋ ನಡೆಯುತ್ತಿದೆ, ಇಬ್ಬರು ಪ್ರೀತಿಸುತ್ತಿರಬಹುದು ಎಂದು ಹೇಳಲಾಗುತ್ತಿದೆ. ಈ ಸುದ್ದಿ ಈಗ ಅಧಿಕೃತವಾಗಿದೆ.

Recommended Video

25 ಸಲ ಹುಚ್ಚ ಸಿನಿಮಾನ ಥಿಯೇಟರ್ ನಲ್ಲಿ ನೋಡಿದ್ದೀನಿ | Kirik Keerthi | Filmibeat Kannada

ಜ್ವಾಲಾ ಗುಟ್ಟಾ ಜೊತೆ ವಿಷ್ಣು ವಿಶಾಲ್ ನಿಶ್ಚಿತಾರ್ಥ ಆಗಿದೆ. ಈ ವಿಚಾರನ್ನು ನಟ ವಿಷ್ಣು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಧಿಕೃತ ಮಾಡಿದ್ದಾರೆ. ಪರಸ್ಪರ ಉಂಗುರು ಬದಲಿಸಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ನವ ಜೋಡಿಗೆ ಶುಭ ಕೋರುತ್ತಿದ್ದಾರೆ.

ಬರ್ತಡೇ ಸರ್ಪ್ರೈಸ್

ಬರ್ತಡೇ ಸರ್ಪ್ರೈಸ್

ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ 37ನೇ ವಸಂತಕ್ಕೆ ಕಾಲಿಟ್ಟಿದ್ದು, ಇಂದು ಬರ್ತಡೇ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಲ್ಲಿ ವಿಷ್ಣು ವಿಶಾಲ್ ತಮ್ಮ ನಿಶ್ಚಿತಾರ್ಥ ಸುದ್ದಿಯನ್ನು ಹಂಚಿಕೊಂಡಿದ್ದು, ಗೆಳತಿಗೆ ಸರ್ಪ್ರೈಸ್ ನೀಡಿದ್ದಾರೆ.

ಹೊಸ ಜೀವನ ಆರಂಭ

ಹೊಸ ಜೀವನ ಆರಂಭ

ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ವಿಷ್ಣು ವಿಶಾಲ್ ''ಹುಟ್ಟುಹಬ್ಬದ ಶುಭಾಶಗಳು ಜ್ವಾಲಾ ಗುಟ್ಟಾ. ಹೊಸ ಜೀವನ ಆರಂಭವಾಗಿದೆ. ನಮ್ಮ ಕುಟುಂಬ, ಆರ್ಯನ್ ಹಾಗೂ ನಮ್ಮ ಸುತ್ತಮುತ್ತಲಿನ ಜನರಿಗಾಗಿ ಸ್ಫೂರ್ತಿದಾಯಕವಾಗಿ ಕೆಲಸ ಮಾಡೋಣ. ಮಧ್ಯರಾತ್ರಿ ಉಂಗುರು ಬದಲಿಸಿಕೊಳ್ಳಲು ಸಹಾಯ ಮಾಡಿದ್ದಕ್ಕೆ ಬಸಂತ್ ಜೈನ್‌ಗೆ ಧನ್ಯವಾದಗಳು'' ಎಂದಿದ್ದಾರೆ.

ವಿಷ್ಣು ವಿಶಾಲ್ ಎರಡನೇ ಮದುವೆ!

ವಿಷ್ಣು ವಿಶಾಲ್ ಎರಡನೇ ಮದುವೆ!

ನಟ ವಿಷ್ಣು ವಿಶಾಲ್ ಗೆ ಈಗಾಗಲೇ ಮದುವೆ ಆಗಿದೆ. 2010ರಲ್ಲಿ ರಜನಿ ಜೊತೆ ಸಪ್ತಪದಿ ತುಳಿದಿದ್ದ ನಟ, 2018ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಇವರಿಬ್ಬರಿಗೆ ಆರ್ಯನ್ ಎಂಬ ಮಗ ಸಹ ಇದ್ದನು.

ಜ್ವಾಲಾಗೂ ಎರಡನೇ ಮದುವೆ!

ಜ್ವಾಲಾಗೂ ಎರಡನೇ ಮದುವೆ!

ಜ್ವಾಲಾ ಗುಟ್ಟಾಗೂ ಇದು ಎರಡನೇ ಮದುವೆ. 2005ರಲ್ಲಿ ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಜೊತೆ ವಿವಾಹವಾಗಿದ್ದರು. ಆದರೆ, 2010ರಲ್ಲಿ ಡಿವೋರ್ಸ್ ಪಡೆದುಕೊಂಡರು. ಈಗ ವಿಷ್ಣು ಜೊತೆ ಮತ್ತೊಮ್ಮೆ ದಾಂಪತ್ಯ ಜೀವನ ಆರಂಭಿಸಲು ಮುಂದಾಗಿದ್ದಾರೆ.

More from Filmibeat

English summary
Badminton star Gutta Jwala and Actor Vishnuu Vishal got engaged. check out in Photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X