For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ವೇಳೆ ಗಾಯಗೊಂಡ ಬಹುಭಾಷಾ ನಟ ನಾಸರ್

  |

  ಬಹುಭಾಷಾ ನಟ ನಾಸರ್‌ ಹೈದರಾಬಾದ್‌ನಲ್ಲಿ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಮಿಳು, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಪೋಷಕ ನಟರಾಗಿ ನಾಸರ್ ಕೆಲಸ ಮಾಡಿದ್ದಾರೆ. ಹೈದರಾಬಾದ್‌ನಲ್ಲಿರುವ ಪೊಲೀಸ್ ಅಕಾಡೆಮಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಮಸ್ಯೆಯಲ್ಲಿ ಅವಘಡ ಸಂಭವಿಸಿದೆ. ನಾಸರ್ ಎಡಗಣ್ಣಿನ ಕೆಳ ಭಾಗದಲ್ಲಿ ಪೆಟ್ಟಾಗಿ ರಕ್ತಸ್ರಾವವಾಗಿದೆ ಎನ್ನಲಾಗುತ್ತಿದ್ದು, ಸದ್ಯ ಆತಂಕಪಡುವ ಅಗತ್ಯವಿಲ್ಲ ಎಂದು ವೈದರು ತಿಳಿಸಿದ್ದಾರೆ.

  64 ವರ್ಷ ವಯಸ್ಸಿನ ನಾಸರ್ ಬಾಹುಬಲಿ ಚಿತ್ರದ ಬಿಜ್ಜಳದೇವ ಪಾತ್ರದಿಂದ ಬಹಳ ಖ್ಯಾತಿ ಗಳಿಸಿದ್ದರು. ನಾಯಕ ನಾಯಕಿಯರ ತಂದೆಯಾಗಿ, ಪೊಲೀಸ್ ಆಫೀಸರ್, ವಿಲನ್, ಕಾಮಿಡಿ ನಟ ಹೀಗೆ ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಾಸರ್ ನಟಿಸಿ ಗೆದ್ದಿದ್ದಾರೆ. ಇತ್ತೀಚೆಗೆ ಚಿತ್ರರಂಗದಿಂದ ದೂರಾಗುವ ಮನಸ್ಸು ಮಾಡಿದ್ದ ನಟ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ನಾಸರ್ ಜೊತೆಗೆ ಚಿತ್ರೀಕರಣದಲ್ಲಿ ಸುಹಾಸಿನಿ, ಮೆಹ್ರಿನ್, ಷಿಯ್ಯಾಜಿ ಶಿಂಧೆ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎಂದು ಗೊತ್ತಾಗಿದೆ. ನಟನಾಗಿ ಮಾತ್ರವಲ್ಲದೇ ನಾಸರ್ ಡಬ್ಬಿಂಗ್ ಆರ್ಟಿಸ್ಟ್ ಆಗಿ, ಗಾಯಕರಾಗಿಯೂ ಗುರ್ತಿಸಿಕೊಂಡಿದ್ದಾರೆ.

  ಯುವ ಸಿನಿಮಾ ವಿಮರ್ಶಕ ಸಾವು: ರಶ್ಮಿಕಾ, ರಿಷಬ್, ದುಲ್ಕರ್ ಸೇರಿ ಹಲವರ ಸಂತಾಪಯುವ ಸಿನಿಮಾ ವಿಮರ್ಶಕ ಸಾವು: ರಶ್ಮಿಕಾ, ರಿಷಬ್, ದುಲ್ಕರ್ ಸೇರಿ ಹಲವರ ಸಂತಾಪ

  ದೃಶ್ಯವೊಂದರಲ್ಲಿ ಮೆಟ್ಟಿಲು ಇಳಿಯುವ ವೇಳೆ ಕಾಲು ಜಾರಿ ನಾಸರ್ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಅವರು ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದು ಶೀಘ್ರದಲ್ಲೇ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ತಮಿಳಿನ 'ರೋಜಾ', 'ತೇವರ್ ಮಗನ್', 'ಬಾಂಬೆ', 'ಇರುವರ್', 'ಜೀನ್ಸ್' ತೆಲುಗಿನ 'ಪೋಕಿರಿ', 'ದೂಕುಡು', 'ಅತಡು', 'ಬ್ಯುಸಿನೆಸ್‌ಮನ್' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ತಮ್ಮ ವಿಭಿನ್ ಅಭಿನಯದಿಂದ ನಾಸರ್ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ತಮಿಳು ನಟ ವಿಶಾಲ್ ಕೂಡ ಚಿತ್ರೀಕರಣ ವೇಳೆ ಗಂಭೀರವಾಗಿ ಗಾಯಗೊಂಡಿದ್ರು. ಎಷ್ಟೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡರು ಶೂಟಿಂಗ್ ವೇಳೆ ಇಂತಹ ಅವಘಡಗಳು ಸಂಭವಿಸುತ್ತಿರುತ್ತದೆ.

  English summary
  Tamil Senior Actor Nassar gets injured while shooting In Hyderabad. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X