ಮತ್ತೆ ಎನ್.ಟಿ.ಆರ್ ಪಾತ್ರದಲ್ಲಿ ಲೆಜೆಂಡ್ ಬಾಲಕೃಷ್ಣ ನಟನೆ!

ತೆಲುಗು ನಟ ಬಾಲಕೃಷ್ಣ 'ಕಥಾನಾಯಕುಡು' ಹಾಗೂ 'ಮಹಾನಾಯಕುಡು' ಚಿತ್ರಗಳಲ್ಲಿ ತಮ್ಮ ತಂದೆ ಎನ್.ಟಿ.ಆರ್ ಪಾತ್ರದಲ್ಲಿ ನಟಿಸಿದ್ದರು. ತೆರೆಮೇಲೆ ಥೇಟ್ ಎನ್.ಟಿ.ಆರ್ ಅವರಂತೆ ಕಾಣಿಸಿಕೊಂಡಿದ್ದ ಬಾಲಕೃಷ್ಣ ಅವರಿಗೆ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ, ಬಾಲಕೃಷ್ಣ ಅವರಿಗೆ ಮತ್ತೆ ಎನ್.ಟಿ.ಆರ್ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಜಯಲಲಿತಾ ಬಯೋಪಿಕ್ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ವಿಚಾರ. ಈ ಚಿತ್ರದಲ್ಲಿ ಎನ್.ಟಿ.ಆರ್ ಪಾತ್ರವೂ ಇರಲಿದ್ದು, ಎನ್.ಟಿ.ಆರ್ ಪಾತ್ರಕ್ಕಾಗಿ ಬಾಲಕೃಷ್ಣ ಅವರನ್ನ ಸಂಪರ್ಕಿಸಲಾಗಿದೆಯಂತೆ.

ತಮಿಳುನಾಡಿನ ದಿಗ್ಗಜ ನಟ ಹಾಗೂ ರಾಜಕಾರಣಿಗಳ ಪಾತ್ರಗಳು ಈ ಬಯೋಪಿಕ್ನಲ್ಲಿ ಬರಲಿದ್ದು, ಎಂಜಿಆರ್, ಕರುಣನಿಧಿ ಹಾಗೂ ಎನ್.ಟಿ.ಆರ್ ಪಾತ್ರಗಳಿಗೆ ಸೂಕ್ತ ಕಲಾವಿದರನ್ನ ಆಯ್ಕೆ ಮಾಡಿಕೊಳ್ಳಲಾಗಿದೆ.

Balakrishna Playing Ntr Role In Jayalalitha Biopic

ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ಹಾಗೂ ಕರುಣನಿಧಿ ಪಾತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ನಟಿಸಲಿದ್ದಾರೆ. ಈಗ ಎನ್.ಟಿ.ಆರ್ ಪಾತ್ರಕ್ಕೆ ಬಾಲಕೃಷ್ಣ ಅವರನ್ನ ಕರೆತರುವ ಪ್ರಯತ್ನ ಸಾಗಿದೆ. ಇದಕ್ಕೆ ಬಾಲಯ್ಯ ಒಪ್ಪಿಕೊಳ್ಳುತ್ತಾರಾ ಕುತೂಹಲ ಮೂಡಿಸಿದೆ.

ವಿಷ್ಣು ಇಂದುರಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಎ.ಎಲ್ ವಿಜಯ್ ನಿರ್ದೇಶನ ಮಾಡಲಿದ್ದಾರೆ. ಕಂಗನಾ ರಣಾವತ್ ಜಯಲಲಿತಾ ಪಾತ್ರವನ್ನ ನಿರ್ವಹಿಸಲಿದ್ದಾರೆ. ಮತ್ತೊಂದಡೆ ನಿತ್ಯಾ ಮೆನನ್ ಕೂಡ ಜಯಲಲಿತಾ ಅವರ ಕುರಿತು ಬಯೋಪಿಕ್ ಸಿನಿಮಾ ಮಾಡುತ್ತಿದ್ದಾರೆ. ರಾಮ್ ಗೋಪಾಲ್ ವರ್ಮಾ ಕೂಡ ಜಯಾ ಬಯೋಪಿಕ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

More from Filmibeat

English summary
Telugu actor Balakrishna playing ntr role in Jayalalitha's biopic titled thalaivi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X