Jailer: ಬೆಂಗಳೂರಿನಲ್ಲಿ ಅಬ್ಬರಕ್ಕಿಲ್ಲ ತಡೆ; 12ನೇ ದಿನವೂ 500+ ಶೋ ಪಡೆದುಕೊಂಡ ಜೈಲರ್!
ಸದ್ಯ ಈಗ ಎಲ್ಲಿ ನೋಡಿದರೂ ರಜನಿಕಾಂತ್ ನಟನೆಯ ನೂತನ ಚಿತ್ರ ಜೈಲರ್‌ನದ್ದೇ ಅಬ್ಬರ. ಹೌದು, ಆಗಸ್ಟ್ 10ರಂದು ಬಿಡುಗಡೆಗೊಂಡ ಜೈಲರ್ ಸಿನಿಮಾ ಸೌತ್ ಇಂಡಿಯಾ ಪೂರ್ತಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ಹಿಂದೆ ಅಣ್ಣಾತ್ತೆ ಸಿನಿಮಾ ಮಾಡುವ ಮೂಲಕ ಸೋತಿದ್ದ ರಜನಿಕಾಂತ್ ಹಾಗೂ ಕಳೆದ ವರ್ಷ ವಿಜಯ್‌ಗೆ ಬೀಸ್ಟ್ ಚಿತ್ರವನ್ನು ನಿರ್ದೇಶಿಸಿ ಕೈ ಸುಟ್ಟುಕೊಂಡಿದ್ದ ನಿರ್ದೇಶಕ ನೆಲ್ಸನ್ ಕುಮಾರ್ ಜೈಲರ್ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.
ಇನ್ನು ಜೈಲರ್ ಚಿತ್ರ ಮೊದಲ 11 ದಿನಗಳಲ್ಲಿ 500+ ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ ಜೈಲರ್ ಚಿತ್ರ ಎರಡನೇ ವಾರವೂ ಸಹ ದಾಖಲೆಯ ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಿದೆ. ಇನ್ನು ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಿದೆ.

ಸದ್ಯ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ಕ್ಲಬ್ ಸೇರಿರುವ ಜೈಲರ್ ಇಂದು ( ಆಗಸ್ಟ್ 21 ) ತನ್ನ 12ನೇ ದಿನದ ಪ್ರದರ್ಶನವನ್ನ ಕಾಣುತ್ತಿದ್ದು ಇಂದಿಗೂ ಸಹ ದಾಖಲೆಯ ಬುಕಿಂಗ್ ಪಡೆದುಕೊಳ್ಳುತ್ತಿದೆ. ಇನ್ನು ಬೆಂಗಳೂರಿನಲ್ಲಿ ಬೇಡಿಕೆಗೆ ತಕ್ಕಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿರುವ ಜೈಲರ್ ಇಂದೂ ಸಹ 500ಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡಿದೆ. ಈ ಮೂಲಕ ಜೈಲರ್ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಯಾವ ದಿನವೂ 500ಕ್ಕಿಂತ ಕಡಿಮೆ ಪ್ರದರ್ಶನ ಪಡೆದ ಉದಾಹರಣೆಯೇ ಇಲ್ಲ ಎನಿಸಿಕೊಂಡಿದೆ.
ಜೈಲರ್ ಬೆಂಗಳೂರಿನಲ್ಲಿ ಯಾವ ದಿನ ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿತು ಎಂಬ ಮಾಹಿತಿ ಈ ಕೆಳಕಂಡಂತಿದೆ.
ಆಗಸ್ಟ್ 10:
ಜೈಲರ್ : 1092 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 99 ಪ್ರದರ್ಶನಗಳು
ಆಪನ್‌ಹೈಮರ್ : 75 ಪ್ರದರ್ಶನಗಳು
ಕೌಸಲ್ಯ ಸುಪ್ರಜ ರಾಮ : 73 ಪ್ರದರ್ಶನಗಳು
ಮೆಗ್ 2 : 64 ಪ್ರದರ್ಶನಗಳು
ಆಗಸ್ಟ್ 11:
ಜೈಲರ್ : 551 ಪ್ರದರ್ಶನಗಳು
ಭೋಳ ಶಂಕರ್ : 321 ಪ್ರದರ್ಶನಗಳು
ಗದರ್ 2 : 191 ಪ್ರದರ್ಶನಗಳು
ಓ ಮೈ ಗಾಡ್ 2 : 177 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 12:
ಜೈಲರ್ : 551 ಪ್ರದರ್ಶನಗಳು
ಭೋಳ ಶಂಕರ್ : 321 ಪ್ರದರ್ಶನಗಳು
ಗದರ್ 2 : 191 ಪ್ರದರ್ಶನಗಳು
ಓ ಮೈ ಗಾಡ್ 2 : 177 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 13:
ಜೈಲರ್ : 603 ಪ್ರದರ್ಶನಗಳು
ಭೋಳ ಶಂಕರ್ : 222 ಪ್ರದರ್ಶನಗಳು
ಗದರ್ 2 : 197 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು
ಆಗಸ್ಟ್ 13:
ಜೈಲರ್ : 620 ಪ್ರದರ್ಶನಗಳು
ಭೋಳ ಶಂಕರ್ : 207 ಪ್ರದರ್ಶನಗಳು
ಗದರ್ 2 : 198 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 14:
ಜೈಲರ್ : 626 ಪ್ರದರ್ಶನಗಳು
ಭೋಳ ಶಂಕರ್ : 201 ಪ್ರದರ್ಶನಗಳು
ಗದರ್ 2 : 199 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 15:
ಜೈಲರ್ : 659 ಪ್ರದರ್ಶನಗಳು
ಗದರ್ 2 : 213 ಪ್ರದರ್ಶನಗಳು
ಭೋಳ ಶಂಕರ್ : 191 ಪ್ರದರ್ಶನಗಳು
ಓ ಮೈ ಗಾಡ್ 2 : 184 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು
ಆಗಸ್ಟ್ 16:
ಜೈಲರ್ : 617 ಪ್ರದರ್ಶನಗಳು
ಗದರ್ 2 : 193 ಪ್ರದರ್ಶನಗಳು
ಭೋಳ ಶಂಕರ್ : 176 ಪ್ರದರ್ಶನಗಳು
ಓ ಮೈ ಗಾಡ್ 2 : 169 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು
ಆಗಸ್ಟ್ 17:
ಜೈಲರ್ : 618 ಪ್ರದರ್ಶನಗಳು
ಗದರ್ 2 : 195 ಪ್ರದರ್ಶನಗಳು
ಭೋಳ ಶಂಕರ್ : 177 ಪ್ರದರ್ಶನಗಳು
ಓ ಮೈ ಗಾಡ್ 2 : 169 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು
ಆಗಸ್ಟ್ 18:
ಜೈಲರ್ : 593 ಪ್ರದರ್ಶನಗಳು
ಗದರ್ 2 : 217 ಪ್ರದರ್ಶನಗಳು
ಓ ಮೈ ಗಾಡ್ 2 : 172 ಪ್ರದರ್ಶನಗಳು
ಬ್ಲೂ ಬೀಟಲ್ : 132 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು
ಆಗಸ್ಟ್ 19:
ಜೈಲರ್ : 604 ಪ್ರದರ್ಶನಗಳು
ಗದರ್ 2 : 218 ಪ್ರದರ್ಶನಗಳು
ಓ ಮೈ ಗಾಡ್ 2 : 175 ಪ್ರದರ್ಶನಗಳು
ಬ್ಲೂ ಬೀಟಲ್ : 133 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 73 ಪ್ರದರ್ಶನಗಳು
ಆಗಸ್ಟ್ 20
ಜೈಲರ್ : 609 ಪ್ರದರ್ಶನಗಳು
ಗದರ್ 2 : 220 ಪ್ರದರ್ಶನಗಳು
ಓ ಮೈ ಗಾಡ್ 2 : 172 ಪ್ರದರ್ಶನಗಳು
ಬ್ಲೂ ಬೀಟಲ್ : 127 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು
ಆಗಸ್ಟ್ 21
ಜೈಲರ್ : 573 ಪ್ರದರ್ಶನಗಳು
ಗದರ್ 2 : 202 ಪ್ರದರ್ಶನಗಳು
ಓ ಮೈ ಗಾಡ್ 2 : 164 ಪ್ರದರ್ಶನಗಳು
ಬ್ಲೂ ಬೀಟಲ್ : 120 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 75 ಪ್ರದರ್ಶನಗಳು


Click it and Unblock the Notifications











