Jailer: ವಾರ ಕಳೆದ್ರೂ ತಗ್ಗದ ಜೈಲರ್ ಹವಾ; ಬೆಂಗಳೂರಿನಲ್ಲಿ 9ನೇ ದಿನವೂ ಅಬ್ಬರದ ಬುಕಿಂಗ್!
ಜೈಲರ್ ಚಿತ್ರ ಮೊದಲ ವಾರವನ್ನು ಯಶಸ್ವಿಯಾಗಿ ಪೂರೈಸಿ ಸದ್ಯ ಎರಡನೇ ವಾರಕ್ಕೆ ಕಾಲಿಟ್ಟಿದೆ. ಆಗಸ್ಟ್ 10ರಂದು ಬಿಡುಗಡೆಗೊಂಡ ಈ ಚಿತ್ರ ಮೊದಲ ದಿನ ದಾಖಲೆಯ ಆರಂಭವನ್ನು ಪಡೆದುಕೊಂಡು ಈಗಾಗಲೇ 400 ಕೋಟಿ ಕ್ಲಬ್ ಅನ್ನೂ ಸಹ ಸೇರಿದೆ. ಈ ಹಿಂದಿನ ರಜನಿ ಚಿತ್ರಗಳಿಗೆ ಇದ್ದಷ್ಟೇ ಕ್ರೇಜ್ ಹಾಗೂ ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡ ಜೈಲರ್ ಮೊದಲ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಿಟ್ ಟಾಕ್ ಪಡೆದುಕೊಂಡು ಚಿತ್ರ ಗೆದ್ದಿದೆ ಎಂಬ ಸ್ಪಷ್ಟ ಫಲಿತಾಂಶವನ್ನು ಗಳಿಸಿತು.
ಹೀಗೆ ಫಸ್ಟ್ ಶೋ ಮುಗಿಯುತ್ತಿದ್ದಂತೆಯೇ ಹಿಟ್ ಎನಿಸಿಕೊಂಡ ಜೈಲರ್ ಸದ್ಯ ತನ್ನ 7 ದಿನಗಳ ಓಟವನ್ನು ಯಶಸ್ವಿಯಾಗಿ ಪೂರೈಸಿ ವಿಶ್ವದಾದ್ಯಂತ ಒಟ್ಟು 425 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ.

ಇನ್ನು ಕರ್ನಾಟಕದಲ್ಲಿ ಮೊದಲ 7 ದಿನಗಳಲ್ಲಿ 47.5 ಕೋಟಿ ಗಳಿಕೆ ಮಾಡಿರುವ ಜೈಲರ್ ಎಂಟನೇ ದಿನವೂ ಸಹ ಉತ್ತಮ ಕಲೆಕ್ಷನ್ ಮಾಡಿದ್ದು, ಇಂದು ( ಆಗಸ್ಟ್ 18 ) ಸಹ ರಾಜ್ಯದಲ್ಲಿ ಜೈಲರ್ ಅಬ್ಬರ ಜೋರಾಗಿದೆ. ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಸತತವಾಗಿ ಒಳ್ಳೆಯ ಬುಕಿಂಗ್ ಪಡೆದುಕೊಂಡು ಬಂದಿರುವ ಜೈಲರ್ 500 ಕ್ಕಿಂತ ಪ್ರದರ್ಶನಗಳನ್ನು ಪಡೆದುಕೊಂಡ ದಿನವೇ ಇಲ್ಲ. ಅದೇ ರೀತಿ ಇಂದು 9ನೇ ದಿನವೂ ಸಹ ಜೈಲರ್ ಭರ್ಜರಿ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿದೆ. ಹಾಗಿದ್ದರೆ ಜೈಲರ್ ಬಿಡುಗಡೆಯ ದಿನದಿಂದ ಇಲ್ಲಿಯವರೆಗೂ ಯಾವ ದಿನ ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಆಗಸ್ಟ್ 10:
ಜೈಲರ್ : 1092 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 99 ಪ್ರದರ್ಶನಗಳು
ಆಪನ್‌ಹೈಮರ್ : 75 ಪ್ರದರ್ಶನಗಳು
ಕೌಸಲ್ಯ ಸುಪ್ರಜ ರಾಮ : 73 ಪ್ರದರ್ಶನಗಳು
ಮೆಗ್ 2 : 64 ಪ್ರದರ್ಶನಗಳು
ಆಗಸ್ಟ್ 11:
ಜೈಲರ್ : 551 ಪ್ರದರ್ಶನಗಳು
ಭೋಳ ಶಂಕರ್ : 321 ಪ್ರದರ್ಶನಗಳು
ಗದರ್ 2 : 191 ಪ್ರದರ್ಶನಗಳು
ಓ ಮೈ ಗಾಡ್ 2 : 177 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 12:
ಜೈಲರ್ : 551 ಪ್ರದರ್ಶನಗಳು
ಭೋಳ ಶಂಕರ್ : 321 ಪ್ರದರ್ಶನಗಳು
ಗದರ್ 2 : 191 ಪ್ರದರ್ಶನಗಳು
ಓ ಮೈ ಗಾಡ್ 2 : 177 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 13:
ಜೈಲರ್ : 603 ಪ್ರದರ್ಶನಗಳು
ಭೋಳ ಶಂಕರ್ : 222 ಪ್ರದರ್ಶನಗಳು
ಗದರ್ 2 : 197 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು
ಆಗಸ್ಟ್ 13:
ಜೈಲರ್ : 620 ಪ್ರದರ್ಶನಗಳು
ಭೋಳ ಶಂಕರ್ : 207 ಪ್ರದರ್ಶನಗಳು
ಗದರ್ 2 : 198 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 14:
ಜೈಲರ್ : 626 ಪ್ರದರ್ಶನಗಳು
ಭೋಳ ಶಂಕರ್ : 201 ಪ್ರದರ್ಶನಗಳು
ಗದರ್ 2 : 199 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 15:
ಜೈಲರ್ : 659 ಪ್ರದರ್ಶನಗಳು
ಗದರ್ 2 : 213 ಪ್ರದರ್ಶನಗಳು
ಭೋಳ ಶಂಕರ್ : 191 ಪ್ರದರ್ಶನಗಳು
ಓ ಮೈ ಗಾಡ್ 2 : 184 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು
ಆಗಸ್ಟ್ 16:
ಜೈಲರ್ : 617 ಪ್ರದರ್ಶನಗಳು
ಗದರ್ 2 : 193 ಪ್ರದರ್ಶನಗಳು
ಭೋಳ ಶಂಕರ್ : 176 ಪ್ರದರ್ಶನಗಳು
ಓ ಮೈ ಗಾಡ್ 2 : 169 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು
ಆಗಸ್ಟ್ 17:
ಜೈಲರ್ : 618 ಪ್ರದರ್ಶನಗಳು
ಗದರ್ 2 : 195 ಪ್ರದರ್ಶನಗಳು
ಭೋಳ ಶಂಕರ್ : 177 ಪ್ರದರ್ಶನಗಳು
ಓ ಮೈ ಗಾಡ್ 2 : 169 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು
ಆಗಸ್ಟ್ 18:
ಜೈಲರ್ : 593 ಪ್ರದರ್ಶನಗಳು
ಗದರ್ 2 : 217 ಪ್ರದರ್ಶನಗಳು
ಓ ಮೈ ಗಾಡ್ 2 : 172 ಪ್ರದರ್ಶನಗಳು
ಬ್ಲೂ ಬೀಟಲ್ : 132 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು


Click it and Unblock the Notifications











