Jailer: ಸೋಮವಾರವೂ ಮುಂದುವರೆದ ಜೈಲರ್ ಪರಾಕ್ರಮ; ಬೆಂಗಳೂರಿನಲ್ಲೇ 600ಕ್ಕೂ ಹೆಚ್ಚು ಶೋಸ್!

ಸದ್ಯ ಎಲ್ಲಿ ಕೇಳಿದರೂ ಜೈಲರ್ ಚಿತ್ರದ್ದೇ ಜಪ. ಸಾಮಾಜಿಕ ಜಾಲತಾಣ ತೆರೆದರೆ ಸಾಕು ಜೈಲರ್ ಚಿತ್ರದ ವಿಮರ್ಶೆ, ಕಲೆಕ್ಷನ್ ವರದಿ ಹಾಗೂ ಚಿತ್ರದ ಅಂಶಗಳ ಕುರಿತ ಪೋಸ್ಟ್‌ಗಳೇ ತುಂಬಿ ತುಳುಕುತ್ತಿವೆ. ಕಳೆದ ಗುರುವಾರ ( ಆಗಸ್ಟ್ 10 ) ವಿಶ್ವದಾದ್ಯಂತ ಬಿಡುಗಡೆಯಾದ ಜೈಲರ್ ಸಿನಿಮಾ ಸದ್ಯ ನಾಲ್ಕು ದಿನಗಳು ಕಳೆದಿದ್ದರೂ ಸಹ ತನ್ನ ಸದ್ದನ್ನು ಸ್ವಲ್ಪವೂ ತಗ್ಗಿಸುವ ಹಾಗೆ ಕಾಣುತ್ತಿಲ್ಲ.

ಹೌದು, ಜೈಲರ್ ಸಿನಿಮಾ ಮೊದಲ ವಾರಾಂತ್ಯವನ್ನು ಮುಕ್ತಾಯಗೊಳಿಸಿದ್ದು, ಮೊದಲ 4 ದಿನಗಳಲ್ಲಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ. ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ. ಮೊದಲ ದಿನ ಅಬ್ಬರಿಸಿದ್ದ ಜೈಲರ್ ಎರಡನೇ ದಿನ ಹಾಗೂ ಮೂರನೇ ದಿನವೂ ಸಹ ಭರ್ಜರಿ ಕಲೆಕ್ಷನ್ ಮಾಡಿದೆ.

Bangalore bookings: Jailer got more than 600 shows on day 4

ಮೊದಲ ದಿನ 91.10 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮಾಡಿದ್ದ ಜೈಲರ್ ಎರಡನೇ ದಿನ 52.80 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು ಮತ್ತು ಮೂರನೇ ದಿನ 80.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿತ್ತು. ಹೀಗೆ ಮೊದಲ 3 ದಿನಗಳಲ್ಲಿ 224.15 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದ ಜೈಲರ್ ನಾಲ್ಕನೇ ದಿನ ಭಾನುವಾರ ತನ್ನ ಕಲೆಕ್ಷನ್ ನಾಗಾಲೋಟವನ್ನು ಮುಂದುವರೆಸಿದೆ.

ಹೌದು, ನಾಲ್ಕನೇ ದಿನ ಆಗಸ್ಟ್ 13ರ ಭಾನುವಾರ ಜೈಲರ್ ಚಿತ್ರ ವಿಶ್ವದಾದ್ಯಂತ 89 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಈ ಮೂಲಕ ಜೈಲರ್ ಮೊದಲ 4 ದಿನಗಳಲ್ಲಿಯೇ 313 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಅಬ್ಬರಿಸಿದೆ. ಇನ್ನು ರಾಜ್ಯದಲ್ಲಿಯೂ ಸಹ ಜೈಲರ್ ಚಿತ್ರದ ಅಬ್ಬರ ಜೋರಾಗಿದ್ದು, ಅದರಲ್ಲಿಯೂ ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರಿಂದ ಕೂಡಿರುವ ಬೆಂಗಳೂರಿನಲ್ಲಿ ಜೈಲರ್ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ.

ಇನ್ನು ಜೈಲರ್ ಅಬ್ಬರದ ಕಲೆಕ್ಷನ್ ಮಾಡುತ್ತಿರುವ ಕಾರಣ ಉಳಿದ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ಬೆಂಗಳೂರು ನಗರದಲ್ಲಿ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೂ ಉಳಿದ ಚಿತ್ರಗಳಿಗಿಂತ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡು ಅಬ್ಬರಿಸಿದೆ. ಹಾಗಿದ್ದರೆ ಜೈಲರ್ ಬಿಡುಗಡೆಯ ದಿನದಿಂದ ಐದನೇ ದಿನದವರೆಗೆ ಎಷ್ಟು ಶೋಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಆಗಸ್ಟ್ 10:

ಜೈಲರ್ : 1092 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 99 ಪ್ರದರ್ಶನಗಳು

ಆಪನ್‌ಹೈಮರ್ : 75 ಪ್ರದರ್ಶನಗಳು

ಕೌಸಲ್ಯ ಸುಪ್ರಜ ರಾಮ : 73 ಪ್ರದರ್ಶನಗಳು

ಮೆಗ್ 2 : 64 ಪ್ರದರ್ಶನಗಳು

ಆಗಸ್ಟ್ 11:

ಜೈಲರ್ : 551 ಪ್ರದರ್ಶನಗಳು

ಭೋಳ ಶಂಕರ್ : 321 ಪ್ರದರ್ಶನಗಳು

ಗದರ್ 2 : 191 ಪ್ರದರ್ಶನಗಳು

ಓ ಮೈ ಗಾಡ್ 2 : 177 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು

ಆಗಸ್ಟ್ 12:

ಜೈಲರ್ : 551 ಪ್ರದರ್ಶನಗಳು

ಭೋಳ ಶಂಕರ್ : 321 ಪ್ರದರ್ಶನಗಳು

ಗದರ್ 2 : 191 ಪ್ರದರ್ಶನಗಳು

ಓ ಮೈ ಗಾಡ್ 2 : 177 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು

ಆಗಸ್ಟ್ 13:

ಜೈಲರ್ : 603 ಪ್ರದರ್ಶನಗಳು

ಭೋಳ ಶಂಕರ್ : 222 ಪ್ರದರ್ಶನಗಳು

ಗದರ್ 2 : 197 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು

ಆಗಸ್ಟ್ 13:

ಜೈಲರ್ : 620 ಪ್ರದರ್ಶನಗಳು

ಭೋಳ ಶಂಕರ್ : 207 ಪ್ರದರ್ಶನಗಳು

ಗದರ್ 2 : 198 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು

More from Filmibeat

English summary
Bangalore bookings: Jailer got more than 600 shows on day 4
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X