ತಮಿಳು ನಟ ಶಿವ ಕಾರ್ತಿಕೇಯನ್ ಹುಟ್ಟುಹಬ್ಬ; ಬೆಂಗಳೂರಿನ ರೈಲ್ವೇ ಸ್ಟೇಷನ್‌ನಲ್ಲಿ ಸೀರೆ ವಿತರಿಸಿದ ಫ್ಯಾನ್ಸ್
ಫೆಬ್ರವರಿ 17ರಂದು ತಮಿಳಿನ ನಟ ಶಿವ ಕಾರ್ತಿಕೇಯನ್ 38ನೇ ವಸಂತಕ್ಕೆ ಕಾಲಿಟ್ಟರು. ಕಾಲೇಜು ದಿನಗಳಲ್ಲಿ ಸ್ಟಾಂಡ್ ಅಪ್ ಕಾಮಿಡಿ ಹಾಗೂ ಮಿಮಿಕ್ರಿಗಳಲ್ಲಿ ಆಸಕ್ತಿ ಹೊಂದಿದ್ದ ಶಿವ ಕಾರ್ತಿಕೇಯನ್ ನಂತರ ವಿಡಿಯೊ ಜಾಕಿಯಾಗಿ, ನಿರೂಪಕನಾಗಿ ಕೆಲಸ ನಿರ್ವಹಿಸಿದರು.
ಇನ್ನು ಕಾಲೇಜು ದಿನಗಳಲ್ಲಿ ಕೆಲವೊಂದಷ್ಟು ಕಿರುಚಿತ್ರಗಳಲ್ಲೂ ಸಹ ನಟಿಸಿದ್ದ ಶಿವ ಕಾರ್ತಿಕೇಯನ್ ಅಜಿತ್ ಕುಮಾರ್ ನಟನೆಯ ಏಗನ್ ಚಿತ್ರದಲ್ಲಿ ಪೋಷಕ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಚಿತ್ರದ ನಿರ್ಮಾಪಕರು ಶಿವ ಕಾರ್ತಿಕೇಯನ್ ನಟನೆ ಕಂಡು ಅವಕಾಶ ನೀಡಿದ್ರು. ಆದರೆ ಎಡಿಟಿಂಗ್ ಸಮಯದಲ್ಲಿ ಶಿವ ಕಾರ್ತಿಕೇಯನ್ ಪಾತ್ರಕ್ಕೆ ಕತ್ತರಿ ಬಿದ್ದಿತ್ತು.
ಹೀಗೆ ಸಿಕ್ಕ ಮೊದಲ ಅವಕಾಶದಲ್ಲಿಯೇ ಹಿನ್ನಡೆ ಅನುಭವಿಸಿದ ಶಿವ ಕಾರ್ತಿಕೇಯನ್‌ಗೆ ನಿರ್ದೇಶಕ ಪಾಂಡಿರಾಜ್ ಮೆರಿನಾ ಚಿತ್ರದಲ್ಲಿ ನಾಯಕನಾಗಿ ನಟಿಸಲು ಅವಕಾಶ ನೀಡಿದರು. ಈ ಚಿತ್ರದ ನಟನೆಯಿಂದ ಶಿವ ಕಾರ್ತಿಕೇಯನ್ ಸಿನಿ ರಸಿಕರ ಗಮನ ಸೆಳೆದರು. ಬಳಿಕ ಧನುಷ್ ನಟನೆಯ 3 ಚಿತ್ರದಲ್ಲೂ ಸಹ ಶಿವ ಕಾರ್ತಿಕೇಯನ್ ನಟಿಸಿದರು.

ಹೀಗೆ ಸಣ್ಣಪುಟ್ಟ ಪಾತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಬಳಿಕ ಸ್ಟಾರ್ ಎಂಬ ಪಟ್ಟವನ್ನು ಪಡೆದುಕೊಂಡ ಶಿವ ಕಾರ್ತಿಕೇಯನ್ ಸಿನಿಮಾವೆಂದರೆ ಸಹಸ್ರಾರು ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಚಿತ್ರಮಂದಿರಕ್ಕೆ ಆಗಮಿಸಿಬಿಡ್ತಾರೆ. ಈ ಮಟ್ಟಕ್ಕೆ ಅಭಿಮಾನಿಗಳನ್ನು ಸಂಪಾದಿಸಿರುವ ಶಿವ ಕಾರ್ತಿಕೇಯನ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ದೂರಿಯಾಗಿಯೇ ಆಚರಿಸಿದ್ದಾರೆ. ಇನ್ನು ತಮಿಳು ನಾಡಿನಲ್ಲಿ ಮಾತ್ರವಲ್ಲದೇ ನಮ್ಮ ಬೆಂಗಳೂರಿನಲ್ಲಿಯೂ ಸಹ ಶಿವ ಕಾರ್ತಿಕೇಯನ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಆಚರಿಸಿದ್ದು, ನಗರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅಗತ್ಯ ಇದ್ದವರಿಗೆ ಉಚಿತ ಲಡ್ಡು, ಬಿಸ್ಕೆಟ್ ಹಾಗೂ ಸೀರೆಗಳನ್ನು ವಿತರಿಸಿದ್ದಾರೆ. ಈ ಫೋಟೊಗಳನ್ನು ಬೆಂಗಳೂರು ಶಿವ ಕಾರ್ತಿಕೇಯನ್ ಅಭಿಮಾನಿಗಳು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಕೇಕು, ಹಾಲು ಎಂದು ದುಂದು ವೆಚ್ಚ ಮಾಡುವ ಬದಲು ಈ ರೀತಿ ನಾಲ್ಕು ಜನಕ್ಕೆ ಸಹಾಯವಾಗುವಂತಹ ಕೆಲಸ ಮಾಡಿದ ಶಿವ ಕಾರ್ತಿಕೇಯನ್ ಅಭಿಮಾನಿಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.


Click it and Unblock the Notifications











