"ರಜನಿ ಕರೆಸಿ, ಕೇವಲ 2 ಗಂಟೆ ಶೋಗೆ 13 ಲಕ್ಷ ಪೀಕಿದ್ದಾರೆ": ಮೀನಾ ವಿರುದ್ಧ ರಂಗನಾಥನ್ ಹೊಸ ಆರೋಪ

By ಫಿಲ್ಮಿಬೀಟ್ ಡೆಸ್ಕ್

ಬಹುಭಾಷಾ ನಟಿ ಮೀನಾ ಯಾರಿಗೆ ಗೊತ್ತಿಲ್ಲ? ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾ ಪ್ರಿಯರಿಗೆ ಈ ನಟಿ ಚಿರಪರಿಚಿತ. ಒಂದು ಕಾಲದಲ್ಲಿ ಹೀರೊಯಿನ್ ಆಗಿ ಅಭಿಮಾನಿಗಳನ್ನು ರಂಜಿಸಿದ ಬ್ಯೂಟಿ ಈಕೆ.

ಮೀನಾ ಕಳೆದ 40 ವರ್ಷಗಳಿಂದ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಿನಿಪ್ರಿಯರ ಕನಸಿನ ಕನ್ಯೆಯಾಗಿ ಮೆರೆದಿದ್ದಾರೆ. ತಮಿಳಿನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ಕಮಲ್ ಹಾಸನ್, ಅಜಿತ್ , ವಿಜಯ್, ಶರತ್ ಕುಮಾರ್, ಸತ್ಯರಾಜ್ ಸೇರಿದಂತೆ ಹಲವು ಸೂಪರ್‌ಸ್ಟಾರ್‌ಳ ಜೊತೆ ನಟಿಸಿದ್ದಾರೆ.

ಇನ್ನು ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಕಿಚ್ಚ ಸುದೀಪ್ ಜೊತೆ ನಟಿಸಿದ ಸೈ ಎನಿಸಿಕೊಂಡಿದ್ದಾರೆ. ಇಲ್ಲಿವರೆಗೂ ಸುಮಾರು 40 ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರೋ ನಟಿಗಾಗಿ ಯೂಟ್ಯೂಬ್ ಚಾನೆಲ್ ಒಂದು ಕಾರ್ಯಕ್ರಮ ಆಯೋಜಿಸಿತ್ತು. ಇದೇ ಕಾರ್ಯಕ್ರಮದ ಬಗ್ಗೆ ತಮಿಳಿನ ವಿವಾದಾತ್ಮಕ ಯೂಟ್ಯೂಬರ್ ಬೈಲ್ವಾನ್ ರಂಗನಾಥ್ ಗಂಭೀರ ಆರೋಪ ಮಾಡಿದ್ದಾರೆ.

Bayilvan Ranganathan said actress Meena negotiated 13 lakhs for 2 hours program Meena 40

ರಜನಿ-ಮೀನಾ ಕೆಮಿಸ್ಟ್ರಿ ಅದ್ಭುತ

ಈ 40 ವರ್ಷಗಳಲ್ಲಿ ಮೀನಾ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲೂ ಗೆದ್ದಿವೆ. ಪ್ರೇಕ್ಷಕರ ಮನಸ್ಸನ್ನೂ ಮನಸೂರೆಗೊಳಿಸಿದೆ. ಆದರೂ, ಇದೂವರೆಗೂ ರಜನಿಕಾಂತ್ ಹಾಗೂ ಮೀನಾ ಕಾಂಬಿನೇಷನ್ ಅದ್ಭುತ ಅನ್ನೋ ಮಾತು ತಮಿಳು ಚಿತ್ರರಂಗದಲ್ಲೇ ಕೇಳೋಕೆ ಸಿಗುತ್ತೆ.

'ಯಜಮಾನ್', 'ಮುತ್ತು' ಮತ್ತು 'ವೀರ'ದಂತಹ ಸಿನಿಮಾಗಳು ಮೆಗಾ ಹಿಟ್ ಆಗಿದ್ದವು. ಇದರಲ್ಲಿ ರಜನಿಕಾಂತ್ ಹಾಗೂ ಮೀನಾ ಕೆಮಿಸ್ಟ್ರಿ ಟಾಪ್ ಎಂದು ನಟ ಪ್ರಸನ್ನ ಇತ್ತೀಚೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ಇತ್ತೀಚೆಗೆ ತೆರೆಕಂಡ ರಜನಿ ಸಿನಿಮಾ 'ಅಣ್ಣಾತ್ತೈ'ಯಲ್ಲೂ ಮೀನಾ ನಟಿಸಿದ್ದರು. ಈ ಸಿನಿಮಾ ನೋಡಿ ಸೂಪರ್‌ಸ್ಟಾರ್ ಅಭಿಮಾನಿಗಳು ಹಳೆಯದನ್ನು ಮೆಲುಕು ಹಾಕಿದ್ದರು.

ಮೀನಾ @40

ಮೀನಾ ಇತ್ತೀಚೆಗೆ ಸಂಕಷ್ಟಕ್ಕೆ ಸಿಲುಕಿದ್ದರು. ಪತಿ ವಿದ್ಯಾಸಾಗರ್ ಅವರ ಸಾವನ್ನು ಮರೆಯಲು ಯತ್ನಿಸುತ್ತಿರುವಾಗಲೇ ಗಾಳಿ ಸುದ್ದಿಗಳು ಆವರಿಸಿಕೊಂಡಿದ್ದವು. ಇದೇ ವಿವಾದಾತ್ಮಕ ಯೂಟ್ಯೂಬರ್ ಬೈಲ್ವಾನ್ ರಂಗನಾಥ್ ಕೆಲವು ದಿನಗಳ ಹಿಂದಷ್ಟೇ ಮೀನಾ ಹಾಗೂ ಧನುಷ್ ವಿವಾಹವಾಗುತ್ತಾರೆ ಎಂದಿದ್ದರು.

ಆ ಬಳಿಕ ಮೀನಾ ಪತ್ರಕರ್ತರಿಗೆ ಸಂದರ್ಶನ ನೀಡುವುದನ್ನು ನಿಷೇಧಿಸಿದ್ದರು. ಇದೇ ವೇಳೆ ಯೂಟ್ಯೂಬ್ ಚಾನೆಲ್‌ವೊಂದು ಮೀನಾ ಅವರ 40 ವರ್ಷದ ಜರ್ನಿಯನ್ನು ಸಂಭ್ರಮಿಸಲು ಬಯಸಿತ್ತು. ಅದಕ್ಕಾಗಿ 'ಮೀನಾ 40' ಅನ್ನೋ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ರಜನಿಕಾಂತ್, ಪ್ರಭುದೇವ, ಭಾಗ್ಯರಾಜ್ ರೋಜಾ, ರಾಧಿಕಾ, ಖುಷ್ಬೂ ಸೇರಿದಂತೆ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಬಗ್ಗೆನೇ ಬೈಲ್ವಾನ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

Bayilvan Ranganathan said actress Meena negotiated 13 lakhs for 2 hours program Meena 40

ಎರಡು ಗಂಟೆಗೆ 13 ಲಕ್ಷ ರೂ. ಆರೋಪ

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೊದಲು ಮೀನಾ ನಿರಾಕರಿಸಿದ್ದರು. ಆದರೆ, ಒಂದು ಒಡಂಬಡಿಕೆ ಮೂಲಕ ಯೂಟ್ಯೂಬ್ ಚಾನೆಲ್‌ಗೆ ಸಮ್ಮತಿ ನೀಡಿದ್ದರು. ರಾತ್ರಿ 8 ಗಂಟೆಯಿಂದ 10ವರೆಗೆ ಕಾರ್ಯಕ್ರಮ ಮಾಡುವುದಕ್ಕೆ ಯೂಟ್ಯೂಬ್ ಚಾನೆಲ್ 13 ಲಕ್ಷ ರೂ. ಕೊಡುತ್ತೇವೆ ಎಂದಾಗಲೇ ಮೀನಾ ಒಪ್ಪಿಕೊಂಡಿದ್ದಾರೆ ಎಂದು ಬೈಲ್ವಾನ್ ರಂಗನಾಥನ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಾಯಿ ಬಿಟ್ಟಿದ್ದಾರೆ.

ಅಲ್ಲದೆ ಮೀನಾ ಯೂಟ್ಯೂಬ್ ಚಾನೆಲ್‌ಗೆ ತಾನು ಕರೆದರೆ ರಜನಿ ಸರ್ ತಕ್ಷಣವೇ ಬರುತ್ತಾರೆ ಎಂದು ಹೇಳಿ ಕರೆಸಿದ್ದಾರೆ ಎಂದು ಬೈಲ್ವಾನ್ ರಂಗನಾಥನ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವರದಿ ಮಾಡಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಎರಡು ಗಂಟೆಗೆ 13 ಲಕ್ಷ ರೂಪಾಯಿನಾ ಅಂತ ಕಮೆಂಟ್ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ತಮಿಳು ಚಿತ್ರರಂಗದಲ್ಲಿ ಇದೇ ಸುದ್ದಿ.

More from Filmibeat

English summary
Bayilvan Ranganathan said actress Meena negotiated 13 lakhs for 2 hours program Meena 40, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X