Silk Smitha: ಮಾದಕ ನಟಿ ಸಿಲ್ಕ್ ಸ್ಮಿತಾ ಶವದೊಂದಿಗೆ ಸಂಭೋಗ!: ತಮಿಳು ನಟನ ಹೇಳಿಕೆ ವೈರಲ್

ಒಂದ್ಕಾಲದಲ್ಲಿ ಪಡ್ಡೆ ಹುಡುಗರ ಪಾಲಿನ ಸೌಂದರ್ಯ ದೇವತೆಯಾಗಿದ್ದ ಸಿಲ್ಕ್ ಸ್ಮಿತಾಗಿದ್ದ ಕ್ರೇಜ್ ಅಷ್ಟಿಷ್ಟಲ್ಲ. ಆಕೆಯನ್ನು ನೋಡಲೆಂದೇ ಥಿಯೇಟರ್‌ಗೆ ಹೋಗುತ್ತಿದ್ದ ಅಭಿಮಾನಿಗಳಿದ್ದರು. ತನ್ನ ಮೈಮಾಟದಿಂದ ಸಿಲ್ಕ್ ಸಿಲ್ವರ್ ಸ್ಕ್ರೀನ್‌ ಮೇಲೆ ಮಾಡಿ ಚಮತ್ಕಾರ ಅಂತಿಂಥದ್ದಲ್ಲ. ಸರಿಯಾಗಿ 27 ವರ್ಷಗಳ ಹಿಂದೆ ಆಕೆಯ ನಿಗೂಢ ಸಾವು ಚಿತ್ರರಂಗಕ್ಕೆ ಹಾಗೂ ಅಭಿಮಾನಿಗಳಿಗೆ ಶಾಕ್ ತಂದಿತ್ತು.

ಸಿಲ್ಕ್ ಸ್ಮಿತಾ ಸಾವಿಗೆ ನಿಜವಾದ ಕಾರಣ ಏನು ಅನ್ನುವುದು ಇನ್ನು ನಿಗೂಢವಾಗಿಯೇ ಇದೆ. ಕೆಲವರು ಕೊಲೆ ಎಂದರೆ ಮತ್ತೆ ಕೆಲವರು ಆತ್ಮಹತ್ಯೆ ಎನ್ನುತ್ತಾರೆ. ಆಕೆಯ ಕೋಣೆಯಲ್ಲಿ ಡೆತ್‌ ನೋಟ್ ಕೂಡ ಸಿಕ್ಕಿತ್ತು ಎನ್ನಲಾಗುತ್ತಿದೆ. ನಾಯಕಿಯಾಗಿ ಸಿಲ್ಕ್ ಸ್ಮಿತಾ ನಟಿಸಿದ್ದು ಕಮ್ಮಿ. ಆದರೆ ಸ್ಟಾರ್ ನಟಿಯರನ್ನು ಸೂಪರ್‌ ಸ್ಟಾರ್‌ ನಟರನ್ನು ಮೀರಿಸುವಂತೆ ಕ್ರೇಜ್ ಆ ದಿನಗಳಲ್ಲಿ ಸಂಪಾದಿಸಿದ್ದರು. ಬಹುತೇಕ ಸಿನಿಮಾಗಳಲ್ಲಿ ಐಟಂ ಡ್ಯಾನ್ಸರ್ ಆಗಿಯೇ ಸಿಲ್ಕ್ ಸ್ಮಿತಾ ಕುಣಿದಿದ್ದರು.

Bayilvan-ranganathan-on-Silk-smitha-dead-body

ಅಂದಿನ ಕಾಲಕ್ಕೆ ಆಕೆಯ ಮಾದಕ ನಗುವಿಗೆ ಫಿದಾ ಆಗದ ಪಡ್ಡೆ ಹುಡುಗರು ಇರಲಿಲ್ಲ ಎನ್ನುವ ಮಾತುಗಳನ್ನು ಕೆಲವರು ಹೇಳುತ್ತಿರುತ್ತಾರೆ. ಅಷ್ಟರಮಟ್ಟಿಗೆ ಆಕೆ ಹವಾ ಇತ್ತು. 400ಕ್ಕೂ ಅಧಿಕ ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ಬಣ್ಣ ಹಚ್ಚಿದ್ದರು. ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಸಿನಿಮಾ ಹಾಡುಗಳನ್ನು ಹೆಜ್ಜೆ ಹಾಕಿ ರಂಗೇರಿಸಿದ್ದರು. 'ಪ್ರಚಂಡ ಕುಳ್ಳ', 'ಟೈಗರ್', 'ಹಳ್ಳಿಮೇಷ್ಟ್ರು' ಕನ್ನಡ ಸಿನಿಮಾಗಳಲ್ಲೂ ಸಿಲ್ಕ್ ಮಿಂಚಿದ್ದರು.

ಬಡ ಕುಟುಂಬದಿಂದ ಬಂದ ಸಿಲ್ಕ್‌ ಸ್ಮಿತಾ ಹೊಟ್ಟೆಪಾಡಿಗಾಗಿ ಸಿನಿಮಾಗಳಲ್ಲಿ ಕುಣಿಯುವಂತಾಯಿತು. ಮುಂದೆ ಸಿನಿಮಾ ನಿರ್ಮಾಪಕಿಯಾಗಿಯೂ ಆಕೆ ಗುರ್ತಿಸಿಕೊಂಡರು. ಒಂದ್ಕಡೆ ಅಪಾರ ಅಭಿಮಾನಿ ಬಳಗ ಸೃಷ್ಟಿಸಿಕೊಂಡು ಮೋಡಿ ಮಾಡಿ ಚೆಲುವೆ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳು ಅನುಭವಿಸುವಂತಾಯಿತು. ಅದು ಕೊನೆಗೆ ಸಾವಿನ ಕದ ತಟ್ಟುವರೆಗೂ ಕರೆದುಕೊಂಡು ಹೋಗಿತ್ತು.

ಸಿಲ್ಕ್‌ ಸ್ಮಿತಾನ ನೋಡಬೇಕು, ಮಾತನಾಡಬೇಕು ಎಂದು ಚಡಪಡಿಸುತ್ತಿದ್ದ ಸಾಕಷ್ಟು ಅಭಿಮಾನಿಗಳಿದ್ದರು. ಆಕೆ ಕಚ್ಚಿದ ಸೇಬನ್ನು ಹರಾಜಿನಲ್ಲಿ ಕೊಂಡುಕೊಂಡ ಅಭಿಮಾನಿಯೂ ಇದ್ದ ಎಂದರೆ ಅಚ್ಚರಿ ಎನಿಸುತ್ತದೆ. ತಮಿಳು​ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್‌ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿ ಇರುತ್ತಾರೆ.

ತಮ್ಮದೇ ಯೂಟ್ಯೂಬ್‌ ಚಾನಲ್‌ನಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಗಾಸಿಪ್‌ ವಿಚಾರಗಳನ್ನು ಬಹಳ ಓಪನ್ ಆಗಿ ರಸವತ್ತಾಗಿ ಹೇಳುತ್ತಿರುತ್ತಾರೆ. ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಕೆಲ ನಟನಟಿಯರು ಕೆಂಡಮಂಡಲವಾಗಿರುವುದು ಇದೆ. ಈ ಹಿಂದೆ ದಿವಂಗತ ನಟಿ ಸಿಲ್ಕ್ ಸ್ಮಿತಾ ಬಗ್ಗೆ ಆತನ ಹೇಳಿಕೆ ಭಾರೀ ಸದ್ದು ಮಾಡಿತ್ತು.

"ಸಿಲ್ಕ್​ ಸ್ಮಿತಾ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ" ನಡೆಸಲಾಗಿತ್ತು ಎಂದು ಕಳೆದ ವರ್ಷ ಬೈಲ್ವಾನ್ ರಂಗನಾಥನ್‌ ತನ್ನ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿದ್ದರು. ಅದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಸುಖಾಸುಮ್ಮನೆ ಹೀಗೆಲ್ಲಾ ಸುದ್ದಿ ಹಬ್ಬಿಸಬಾರದು, ಯಾರು ಕೇಳುವವರು ಇಲ್ಲ ಎಂದು ಬಾಯಿ ಬಂದಂತೆ ಮಾತನಾಡಬೇಡಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಅಷ್ಟಕ್ಕೂ ಬೈಲ್ವಾನ್ ರಂಗನಾಥನ್‌ ಹೇಳಿದ್ದು ಏನು ಅಂದ್ರೆ, "ಸಿಲ್ಮ್ ಸ್ಮಿತಾ ನಿಗೂಢ ಸಾವಿನ ರಹಸ್ಯ ಬಯಲಾಗಲಿಲ್ಲ. ಪೋಸ್ಟ್‌ಮಾರ್ಟಂ ನಡೆಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಪೋಸ್ಟ್‌ ಮಾರ್ಟಂ ವೇಳೆ ವೈದ್ಯರು ದೇಹ ಕತ್ತರಿಸುವುದಿಲ್ಲ. ಯಾರು ಕೂಡ ಶವಾಗಾರದಲ್ಲಿ ಇರೋಕೆ ಸಾಧ್ಯವಿಲ್ಲ. ಅಷ್ಟು ದುರ್ವಾಸನೆ ಇರುತ್ತದೆ. ಅಲ್ಲಿನ ಸಿಬ್ಬಂದಿ ಮದ್ಯ ಸೇವಿಸಿಯೇ ಕೆಲಸ ಮಾಡುತ್ತಾರೆ. ಅವರಿಗೆ ತಮ್ಮ ಮೈಮೇಲೆ ಪ್ರಜ್ಞೆ ಇರುವುದಿಲ್ಲ. ಸದಾ ಮದ್ಯದ ಅಮಲಿನಲ್ಲಿ ತೇಳುತ್ತಿರುತ್ತಾರೆ"

Bayilvan-ranganathan-on-Silk-smitha-dead-body

"ಸಿಲ್ಕ್ ಸ್ಮಿತಾ ಸೌಂದರ್ಯ ಎಂಥದ್ದು ಅಂತ ಗೊತ್ತೇಯಿದೆ. ಕಣ್ಣಕುಕ್ಕುವ ಆಕೆಯ ಸೌಂದರ್ಯ ನೋಡಿ ಅಲ್ಲಿ ಸಿಬ್ಬಂದಿ ಹೇಗೆ ಸುಮ್ಮನಿರಲು ಸಾಧ್ಯ? ಮೈಮರೆತು ಆಕೆಯ ಶವದೊಂದಿಗೆ ಸಂಭೋಗ ನಡೆಸಿರಬಹುದು, ಅಂತಹ ಅವಕಾಶ ಹೆಚ್ಚಿದೆ" ಎಂದು ಹೇಳಿದ್ದರು. ನಾನು ಕೂಡ ಪರ್ತಕರ್ತನಾಗಿದ್ದಾಗ ಶವಾಗಾರಗಳಿಗೆ ಹೋಗಿದ್ದೇನೆ. ಆ ವಾಸನೆಗೆ ಯಾರೂ ಐದಾರು ನಿಮಿಷ ಇರೋಕೆ ಸಾಧ್ಯವಿಲ್ಲ" ಎಂದು ಬೈಲ್ವಾನ್ ರಂಗನಾಥನ್‌ ಹೇಳಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆ ವಿಡಿಯೋ ಈಗ ಮತ್ತೆ ವೈರಲ್ ಆಗ್ತಿದೆ.

ಸಿಲ್ಕ್ ಸ್ಮಿತಾ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಆಕೆಯನ್ನು ಸ್ಮರಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ತಮಿಳಿನ 'ಮಾರ್ಕ್ ಆಂಟೋನಿ' ಚಿತ್ರದ ಸಣ್ಣ ಝಲಕ್‌ನಲ್ಲಿ ಸಿಲ್ಕ್ ಸ್ಮಿತಾ ಪಾತ್ರವನ್ನು ತೋರಿಸಲಾಗಿತ್ತು. ಚಿತ್ರದಲ್ಲಿ ಸಿಲ್ಕ್ ಸ್ಮಿತಾ ಆಗಿ ವಿಷ್ಣುಪ್ರಿಯಾ ಎಂಬುವವರು ಕಾಣಿಸಿಕೊಂಡಿದ್ದಾರೆ. ನೋಡಲು ಸಿಲ್ಕ್ ಸ್ಮಿತಾರನ್ನು ಹೋಲುವ ಆಕೆ ತೆರೆಮೇಲೆ ಸಿಲ್ಕ್ ಸ್ಮಿತಾ ಆಗಿ ಗಮನ ಸೆಳೆದಿದ್ದರು. ಅದನ್ನು ನೋಡಿ ಅಭಿಮಾನಿಗಳು ಸಿಲ್ಕ್ ಸ್ಮಿತಾರನ್ನೇ ನೆನಪಿಸಿಕೊಂಡಿದ್ದರು.

More from Filmibeat

English summary
Bayilvan ranganathan shocking comments about silk smitha goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X