India
  For Quick Alerts
  ALLOW NOTIFICATIONS  
  For Daily Alerts

  KGF 2 v/s Beast: 'ಕೆಜಿಎಫ್ 2' ಹೊಡೆತಕ್ಕೆ ದಿಕ್ಕಾಪಾಲಾದ 'ಬೀಸ್ಟ್': ಕಲೆಕ್ಷನ್‌ನಲ್ಲಿ ಭಾರಿ ಇಳಿಕೆ

  |

  ಹಠಕ್ಕೊ ಅಥವಾ ಅತಿಯಾದ ಆತ್ಮವಿಶ್ವಾಸಕ್ಕೊ ತಮಿಳಿನ ಸ್ಟಾರ್ ನಟ ವಿಜಯ್‌ ತಮ್ಮ 'ಬೀಸ್ಟ್' ಸಿನಿಮಾವನ್ನು 'ಕೆಜಿಎಫ್ 2' ಜೊತೆಗೆ ಬಿಡುಗಡೆ ಮಾಡಿದರು. ಏಪ್ರಿಲ್ 14 ಕ್ಕೆ 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆದರೆ, 'ಬೀಸ್ಟ್' ಸಿನಿಮಾ ಏಪ್ರಿಲ್ 13ಕ್ಕೆ ಬಿಡುಗಡೆ ಆಗಿತ್ತು.

  KGF 2 OTT Release | ರಿಲೀಸ್ ಆದ ಕೆಲವೇ ದಿನಗಳಲ್ಲಿ OTT ಗೆ ಬರ್ತಿರೋದು ಯಾಕೆ 'KGF 2' ? | Yash

  ಮೊದಲ ದಿನ ಯಥಾಪ್ರಕಾರ 'ಬೀಸ್ಟ್' ಸಿನಿಮಾ ಒಳ್ಳೆಯ ಕಲೆಕ್ಷನ್ ಅನ್ನೇ ಮಾಡಿತು. ಅಸಲಿಗೆ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತಮಿಳಿನ ಐದನೇ ಸಿನಿಮಾ ಎಂಬ ದಾಖಲೆಯನ್ನೂ ತನ್ನದು ಮಾಡಿಕೊಂಡಿತು. ಆದರೆ ಎರಡನೇ ದಿನ ಅಂದರೆ 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆದ ದಿನ 'ಬೀಸ್ಟ್' ದಿಕ್ಕಾಪಾಲಾಗಿ ಬಿಟ್ಟಿದೆ.

  Beast In Karnataka: ಥಿಯೇಟರ್‌ಯಿಂದ 'ಬೀಸ್ಟ್' ಎತ್ತಂಗಡಿ, 'ಕೆಜಿಎಫ್ 2' ಎಂಟ್ರಿ!Beast In Karnataka: ಥಿಯೇಟರ್‌ಯಿಂದ 'ಬೀಸ್ಟ್' ಎತ್ತಂಗಡಿ, 'ಕೆಜಿಎಫ್ 2' ಎಂಟ್ರಿ!

  ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ 'ಬೀಸ್ಟ್' ಒಂದೇ ದಿನಕ್ಕೆ ಅರ್ಧಕ್ಕೂ ಹೆಚ್ಚು ಚಿತ್ರಮಂದಿರಗಳಿಂದ ಎತ್ತಂಡಗಿ ಆಗಿದೆ. ಅಷ್ಟು ಮಾತ್ರವೇ ಅಲ್ಲ ಸಿನಿಮಾದ ಕಲೆಕ್ಷನ್‌ನಲ್ಲಿಯೂ ಭಾರಿ ಪ್ರಮಾಣದ ಕುಸಿತ ಉಂಟಾಗಿದೆ.

  6000 ಸ್ಕ್ರೀನ್‌ಗಳಲ್ಲಿ ತೆರೆ ಕಂಡಿತ್ತು

  6000 ಸ್ಕ್ರೀನ್‌ಗಳಲ್ಲಿ ತೆರೆ ಕಂಡಿತ್ತು

  ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಮೊದಲ ದಿನ 6000 ಸ್ಕ್ರೀನ್‌ಗಳಲ್ಲಿ ತೆರೆ ಕಂಡಿತ್ತು. ಮೊದಲ ದಿನ ಸುಮಾರು 80 ಕೋಟಿ ರುಪಾಯಿಗಳನ್ನು ಸಿನಿಮಾ ಗಳಿಸಿತ್ತು. ಇದು ಕಡಿಮೆ ಕಲೆಕ್ಷನ್ ಏನೂ ಅಲ್ಲ. ಸಿನಿಮಾದ ಬಗ್ಗೆ ಸಾಕಷ್ಟು ಋಣಾತ್ಮಕ ಅಭಿಪ್ರಾಯಗಳೂ ಬಂದರು ಮೊದಲ ದಿನ ಒಳ್ಳೆಯ ಕಲೆಕ್ಷನ್ ಅನ್ನೇ ಸಿನಿಮಾ ಮಾಡಿತ್ತು. ಆದರೆ ಎರಡನೇ ದಿನ ಸಿನಿಮಾದ ಕಲೆಕ್ಷನ್ ಧಾರುಣವಾಗಿ ಕುಸಿದಿದೆ. ಇದಕ್ಕೆ ನೇರ ಕಾರಣ 'ಕೆಜಿಎಫ್ 2'.

  ಎರಡನೇ ದಿನ 'ಬೀಸ್ಟ್' ಗಳಿಸಿದ್ದೆಷ್ಟು?

  ಎರಡನೇ ದಿನ 'ಬೀಸ್ಟ್' ಗಳಿಸಿದ್ದೆಷ್ಟು?

  'ಬೀಸ್ಟ್' ಸಿನಿಮಾ ಮೊದಲ ದಿನ ಕಲೆಕ್ಷನ್ ಮಾಡಿದ್ದ ಹಣದ ಅರ್ಧಕ್ಕೂ ಕಡಿಮೆ ಹಣವನ್ನು ಎರಡನೇ ದಿನ ಗಳಿಸಿದೆ. ಎರಡನೇ ದಿನ 'ಬೀಸ್ಟ್' ಸಿನಿಮಾ ಕೇವಲ 30 ಕೋಟಿ ರುಪಾಯಿಗಳನ್ನಷ್ಟೆ ಗಳಿಸಿದೆ. ಈ 30 ಕೋಟಿ ಹಣ ವಿಶ್ವದಾದ್ಯಂತದ ಕಲೆಕ್ಷನ್ ಆಗಿದೆ. 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆದ ಕಾರಣ ವಿಜಯ್‌ರ 'ಬೀಸ್ಟ್' ಸಿನಿಮಾವನ್ನು ಹಲವು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗಿದೆ. ಜನ ಸಹ 'ಬೀಸ್ಟ್‌' ಹಾಗೂ 'ಕೆಜಿಎಫ್ 2' ನಡುವೆ 'ಕೆಜಿಎಫ್ 2' ಅನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

  ಬೆಂಗಳೂರಿನಲ್ಲಿ ಶೋಗಳ ಸಂಖ್ಯೆ ಕುಸಿತ

  ಬೆಂಗಳೂರಿನಲ್ಲಿ ಶೋಗಳ ಸಂಖ್ಯೆ ಕುಸಿತ

  ಬೆಂಗಳೂರಿನಲ್ಲಿ ಸಹ ಏಪ್ರಿಲ್ 13 ರಂದು 'ಬೀಸ್ಟ್' ಸಿನಿಮಾಕ್ಕೆ 504 ಶೋಗಳು ದೊರೆತಿದ್ದವು. ಆದರೆ 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆದ ಬಳಿಕ ಶೋಗಳ ಸಂಖ್ಯೆ ಅರ್ಧಕ್ಕಿಂತಲೂ ಕಡಿಮೆಗೆ ಕುಸಿದಿದೆ. ಶನಿವಾರ (ಏಪ್ರಿಲ್ 16) ರಂದು 'ಬೀಸ್ಟ್' ಸಿನಿಮಾಕ್ಕೆ ಬೆಂಗಳೂರಿನಲ್ಲಿ ದೊರಕಿರುವುದು ಕೇವಲ 240 ಶೋಗಳಷ್ಟೆ. ಸೋಮವಾರದ ವೇಳೆಗೆ ಈ ಶೋನಗಳ ಸಂಖ್ಯೆ 100 ಕ್ಕೆ ಬರುವ ಸಾಧ್ಯತೆ ಇದೆ.

  'ಬೀಸ್ಟ್‌' ಬಗ್ಗೆ ನೆಗೆಟಿವ್ ಕಮೆಂಟ್‌ಗಳು

  'ಬೀಸ್ಟ್‌' ಬಗ್ಗೆ ನೆಗೆಟಿವ್ ಕಮೆಂಟ್‌ಗಳು

  ಭಯೋತ್ಪಾದಕರು ಒತ್ತೆಯಾಳಾಗಿ ಇರಿಸಿಕೊಂಡಿರುವವರನ್ನು ಬಿಡಿಸುವ ಕುರಿತಾದ ಕತೆಯನ್ನು 'ಬೀಸ್ಟ್' ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ವಿಜಯ್ ಮಾಜಿ ಸೈನಿಕನ ಮಾತ್ರದಲ್ಲಿ ನಟಿಸಿದ್ದು, ಪೂಜಾ ಹೆಗ್ಡೆ ಸಿನಿಮಾದ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಸಾಕಷ್ಟು ನೆಗೆಟಿವ್‌ ಕಮೆಂಟ್‌ಗಳು ಬಂದಿವೆ. ಸ್ವತಃ ವಿಜಯ್ ಅಭಿಮಾನಿಗಳು ಸಿನಿಮಾದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಧುರೈನಲ್ಲಿ ಅಭಿಮಾನಿಯೊಬ್ಬ, ಸಿನಿಮಾ ಚೆನ್ನಾಗಿಲ್ಲದ ಕಾರಣ ಚಿತ್ರಮಂದಿರದ ಪರದೆಗೆ ಬೆಂಕಿ ಇಟ್ಟಿರುವ ಪ್ರಸಂಗವೂ ನಡೆದಿದೆ. ಒಟ್ಟಾರೆ, 'ಕೆಜಿಎಫ್ 2' ಸಿನಿಮಾವನ್ನು ಉದ್ದೇಶಪೂರ್ವಕವಾಗಿ ಎದುರು ಹಾಕಿಕೊಂಡ 'ಬೀಸ್ಟ್' ತಂಡ ತಕ್ಕ ಪಾಠವನ್ನೇ ಕಲಿತಿದೆ.

  English summary
  Vijay's Beast movie collections gradually down after KGF 2 movie release. Beast collected 80 crore rs on first day. On the release day of KGF 2, Beast collected only 30 crore rs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X