KGF 2 v/s Beast: ತಮಿಳುನಾಡಿನಲ್ಲಿ 'ಕೆಜಿಎಫ್ 2' ಹವಾ, 'ಬೀಸ್ಟ್' ಊಸ್ಟ್ ಗ್ಯಾರೆಂಟಿ!

ಸದ್ಯ ಚಿತ್ರರಂಗದ ವಿಚಾರಕ್ಕೆ ಬಂದರೆ 'ಕೆಜಿಎಫ್' ಬಿಟ್ಟು ಮಾತನಾಡುವ ಹಾಗಿಲ್ಲ. ಹಾಗೇ ಬೀಸ್ಟ್ ಬಿಟ್ಟು ಕೆಜಿಎಫ್ 2 ಬಗ್ಗೆ ಮಾತನಾಡುವ ಹಾಗಿಲ್ಲ. ಯಾಕೆಂದರೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳ ಎರಡು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮುಖಾ-ಮುಖಿ ಆಗುತ್ತಿವೆ. ಆದರೆ ಚಿತ್ರತಂಡಗಳು ಪರಸ್ಪರ ಸ್ಪರ್ಧೆಗೆ ಇಳಿದಿಲ್ಲ ಎಂದು ಘೋಷಿಸಿದರು. ಹೊರಗಡೆ ಲೆಕ್ಕಾಚಾರ ಮಾತ್ರ ಗೆಲ್ಲೋದು ಯಾರು ಎನ್ನುವ ಬಗ್ಗೆ ನಡೆಯುತ್ತಿದೆ.

ನಟ ವಿಜಯ್ ಅಭಿನಯದ ಬೀಸ್ಟ್ ಮತ್ತು ಯಶ್ ಅಭಿನಯದ ಕೆಜಿಎಫ್ 2, ಈ ಚಿತ್ರಗಳಿಗೂ ತನ್ನದೇ ಪ್ರಾಮುಖ್ಯತೆ ಇದೆ. ಆದರೆ ಸ್ಪಷ್ಟವಾಗಿ ತೂಕ ಹಾಕಿ ನೋಡುವುದೇ ಆದರೆ. 'ಕೆಜಿಎಫ್' ಹವಾ ಕೊಂಚ ಹೆಚ್ಚಾಗಿದೆ ಎಂದೇ ಹೇಳಬಹುದು. ನಾರ್ತ್ ಮತ್ತು ಸೌತ್‌ನಲ್ಲಿ 'ಕೆಜಿಎಫ್ 2' ಹವಾ ಜೋರಾಗಿದೆ. 'ಬೀಸ್ಟ್' ಬಗ್ಗೆ ನಿರೀಕ್ಷೆ ಇದೆ. ಆದರೆ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಕೊಂಡಿಲ್ಲ.

'ಬೀಸ್ಟ್', 'ಕೆಜಿಎಫ್ 2' ಚಿತ್ರಕ್ಕೂ ಒಂದು ದಿನ ಮೊದಲು ರಿಲೀಸ್ ಆಗುತ್ತಾ ಇದೆ. ಹಾಗಾಗಿ ಈ ಚಿತ್ರಕ್ಕೆ ಒಂದು ದಿನ ಮಾತ್ರ ಸಮಯ ಇದೆ. ಒಂದು ದಿನದಲ್ಲಿ ಆದಷ್ಟು ದುಡ್ಡು ಬಾಚುವ ಸವಾಲು ಈಗ 'ಬೀಸ್ಟ್' ಚಿತ್ರದ ಮುಂದೆ ಇದೆ. ವಿಜಯ್‌ಗೆ ಬಹು ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ವಿಜಯ್‌ಗೆ ಕೆಜಿಎಫ್‌ನಿಂದ ಅಲ್ಲೂ ಸಂಕಷ್ಟ ಎದುರಾಗುವ ಸಂಭವ ಇದೆ.

Recommended Video

KGF 2 V/S BEAST | ದೊಡ್ಡ ಸಿನಿಮಾ ಪಟ್ಟಿಯಲ್ಲಿ ಎಲ್ಲರನ್ನು ಹಿಂದಿಕ್ಕಿದ KGF 2 | Yash | Vijay
ತಮಿಳುನಾಡಿನಲ್ಲಿ ಕೆಜಿಎಫ್ 2 ಹವಾ!

ತಮಿಳುನಾಡಿನಲ್ಲಿ ಕೆಜಿಎಫ್ 2 ಹವಾ!

'ಕೆಜಿಎಫ್ 2' ಚಿತ್ರ ಪ್ಯಾನ್ ಇಂಡಿಯಾ ಚಿತ್ರ. ತಮಿಳಿನಲ್ಲೂ ಚಿತ್ರ ರಿಲೀಸ್ ಆಗುತ್ತಾ ಇದೆ. ತಮಿಳಿನಲ್ಲಿ ಕೆಜಿಎಫ್ 2 ಚಿತ್ರದ ಹವಾ ಜೋರಾಗಿಯೇ ಇದೆ. ತಮಿಳುನಾಡಿನಲ್ಲೂ 'ಕೆಜಿಎಫ್ 2' ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಇದೆ. ವಿಜಯ್ ಅಭಿನಯ 'ಬೀಸ್ಟ್‌' ಒಂದು ದಿನ ಮೊದಲು ಏಪ್ರಿಲ್ 13ಕ್ಕೆ ರಿಲೀಸ್ ಆಗುತ್ತಿದೆ. ಆದರೆ ಏಪ್ರಿಲ್ 14ರ ಬೆಳಗಿನ ಜಾವದಿಂದಲೆ 'ಕೆಜಿಎಫ್ 2' ಹವಾ ಆರಂಭ ಆಗಲಿದೆ. ಈಗಾಗಲೇ ಚಿತ್ರದ ಶೋಗಳು ಕೂಡ ನಿಗದಿ ಆಗಿವೆ.

ತಮಿಳುನಾಡಿನಲ್ಲಿ ಮುಂಜಾನೆ 4 ಗಂಟೆಗೆ ಕೆಜಿಎಫ್ ಅಬ್ಬರ!

ತಮಿಳುನಾಡಿನಲ್ಲಿ ಮುಂಜಾನೆ 4 ಗಂಟೆಗೆ ಕೆಜಿಎಫ್ ಅಬ್ಬರ!

ತಮಿಳುನಾಡಿನಲ್ಲಿ ಈಗಾಗಲೇ ಕೆಜಿಎಫ್ 2 ಚಿತ್ರದ ಹವ ಶುರುವಾಗಿದೆ. ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಮುಂಜಾನೆ ನಾಲ್ಕು ಗಂಟೆಯಿಂದಲೇ ಚಿತ್ರದ ಪ್ರದರ್ಶನ ಶುರುವಾಗಲಿದೆ. ಈ ಬಗ್ಗೆ ಕೆಆರ್‌ಜಿ ಸ್ಟೂಡಿಯೋಸ್ ಅಧಿಕೃತವಾಗಿ ಟ್ವೀಟ್ ಮಾಡಿದೆ. 'ತಮಿಳುನಾಡಿನಲ್ಲಿ ಕೆಜಿಎಫ್ 2 ಚಿತ್ರದ ಪ್ರದರ್ಶನ ಬೆಳಗ್ಗೆ 4 ಗಂಟೆಗೆ ಆರಂಭ. ಇದು ಬೇರೆ ಲೆವೆಲ್' ಎಂದು ಟ್ವಿಟ್‌ನಲ್ಲಿ ಬರೆಯಲಾಗಿದೆ. ಇದಕ್ಕೆ ತಮಿಳು ಪ್ರೇಕ್ಷಕರು ಜೈ ಎಂದಿದ್ದಾರೆ.

'ಬೀಸ್ಟ್' ಚಿತ್ರದ ಹವಾ ಒಂದು ಮಾತ್ರ!

'ಬೀಸ್ಟ್' ಚಿತ್ರದ ಹವಾ ಒಂದು ಮಾತ್ರ!

'ಬೀಸ್ಟ್' ಚಿತ್ರಕ್ಕೆ ಒಂದು ದಿನ ಮಾತ್ರ ಸಮಯ ಇದೆ. ಈ ಚಿತ್ರದ ರಿಲೀಸ್ ಆದ ಮರುದಿನವೇ 'ಕೆಜಿಎಫ್ 2' ಎಂಟ್ರಿ ಕೊಡಲಿದೆ. ಚಿತ್ರರಂಗದ ಕೆಲವು ಪಂಡಿತರ ಪ್ರಕಾರ 'ಕೆಜಿಎಫ್ 2' ರಿಲೀಸ್ ಆದರೆ 'ಬೀಸ್ಟ್' ಹವಾ ಸೊನ್ನೆ ಆಗುತ್ತೆ ಎನ್ನಲಾಗಿದೆ. ಹಾಗಾಗಿ ಒಂದು ದಿನ ಮಾತ್ರ ಬೀಸ್ಟ್‌ಗೆ ಟೈಮ್ ಇದೆ. ಮೊದಲ ದಿನ ಹೆಚ್ಚಿನ ಚಿತ್ರಮಂದಿರಗಳಲ್ಲಿ ರಿಲೀಸ್ ಆದರೆ, ಚಿತ್ರತಂಡದ ಲೆಕ್ಕಾಚಾರ ಸರಿ ಹೊಂದುತ್ತದೆ.

ಕೊಚ್ಚಿಯಲ್ಲೂ ಬೀಸ್ಟ್ ಬೀಟ್ ಮಾಡಿದ ಕೆಜಿಎಫ್!

ಕೊಚ್ಚಿಯಲ್ಲೂ ಬೀಸ್ಟ್ ಬೀಟ್ ಮಾಡಿದ ಕೆಜಿಎಫ್!

ಇನ್ನು ಕೊಚ್ಚಿಯಲ್ಲಿ 'ಕೆಜಿಎಫ್ 2' ಮುಂದೆ ಮಂಕಾಗಿದೆ 'ಬೀಸ್ಟ್'. ಕೇರಳ ರಾಜ್ಯದ ಕೊಚ್ಚಿಯ ಉದಾಹರಣೆ ನೋಡುವುದಾದರೆ, ಏಪ್ರಿಲ್ 08 ರವರೆಗಿನ ಮಾಹಿತಿಯಂತೆ ಕೊಚ್ಚಿಯಲ್ಲಿ ತಮಿಳಿನ 'ಬೀಸ್ಟ್' ಸಿನಿಮಾಕ್ಕೆ 842 ಶೋಗಳನ್ನು ನೀಡಲಾಗಿದೆ. ಆದರೆ 'ಕೆಜಿಎಫ್ 2' ಸಿನಿಮಾದ ಮಲಯಾಳಂ ಆವೃತ್ತಿಗೆ ಇಲ್ಲಿ ಸಿಕ್ಕಿರುವುದು ಕೇವಲ 490 ಶೋಗಳು. ಆದರೆ ಕೊಚ್ಚಿಯ ಜನ 'ಬೀಸ್ಟ್‌'ಗಿಂತಲೂ 'ಕೆಜಿಎಫ್ 2' ಸಿನಿಮಾ ವೀಕ್ಷಿಸಲು ಹೆಚ್ಚು ಕಾತರರಾಗಿದ್ದಾರೆ. ಅಂಕಿ-ಸಂಖ್ಯೆಗಳು ಇದನ್ನೇ ಹೇಳುತ್ತಿವೆ. ಇನ್ನು ಕೆಲವೇ ದಿನದಲ್ಲಿ ಕೆಜಿಎಫ್ 2 ಚಿತ್ರದ ಶೋಗಳ ಸಂಖ್ಯೆ ಹೆಚ್ಚಾಗಲಿವೆ.

More from Filmibeat

English summary
Vijay's Tamil movie Beast Will face more difficulties because Of KGF 2 huge craze in Tamil Naadu, Kgf 2 Show strats from 4am in Chennai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X