Beast Twitter Review : ಟ್ವಿಟರ್‌ನಲ್ಲೂ 'ಬೀಸ್ಟ್'ಗೆ ಟಕ್ಕರ್, ಸಿನಿಮಾ ನೋಡಿ ಏನಂದ್ರು?

ತಮಿಳಿನ ಬಹು ನಿರೀಕ್ಷಿತ ಚಿತ್ರ ನಟ ವಿಜಯ್ ಅಭಿನಯದ 'ಬೀಸ್ಟ್' ಇಂದು ಏಪ್ರಿಲ್ 13ಕ್ಕೆ ರಿಲೀಸ್ ಆಗಿದೆ. ರಿಲೀಗೂ ಮುನ್ನ ಚಿತ್ರದ ಬಗ್ಗೆ ಒಂದಷ್ಟು ಕುತೂಹಲಗಳು ಮನೆ ಮಾಡಿದ್ದವು. ಈಗ ಚಿತ್ರ ರಿಲೀಸ್ ಆಗಿದ್ದು, 'ಬೀಸ್ಟ್' ಹೇಗಿದೆ ಎನ್ನುವ ಬಗ್ಗೆ ಸಿನಿಮಾ ನೋಡಿದ ಮಂದಿ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Recommended Video

Beast Public Opinion, ಸಿನಿಮಾ ಹೇಗಿದೆ ? | Bengaluru | BEAST REVIEW | Vijay | Yash | KGF2

'ಬೀಸ್ಟ್' ಚಿತ್ರಕ್ಕೆ ಅಂತಹ ಅದ್ಧೂರಿ ಪ್ರಚಾರವನ್ನು ಮಾಡಿಲ್ಲ ಚಿತ್ರತಂಡ. ಚಿತ್ರದ ಟ್ರೈಲರ್ ಮತ್ತು ಟೀಸರ್, ಹಾಡುಗಳು ಹಿಟ್ ಲಿಸ್ಟ್ ಸೇರಿದ್ದವು. ಆದರೆ ಈಗ ಚಿತ್ರದ ವಿಮರ್ಶೆಗಳು ಹೊರ ಬಂದಿವೆ. 'ಬೀಸ್ಟ್' ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಹೊರ ಬಂದಿವೆ.

'ಬೀಸ್ಟ್' ವಿಜಯ್ ಅಭಿಮಾನಿಗಳಿಗೆ ಖುಷಿ ಕೊಡುವ ಕಥೆ, ಇದು ನಟ ವಿಜಯ್ ಅವರ ಒನ್ ಮ್ಯಾನ್ ಶೋ, ಒಂದು ರೆಗ್ಯೂಲರ್ ಕಮರ್ಷಿಯಲ್ ಸಿನಿಮಾ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಾಗಿದ್ದರೆ ಟ್ವಿಟ್ಟರ್‌ನಲ್ಲಿ ಜನ 'ಬೀಸ್ಟ್' ಚಿತ್ರದ ಬಗ್ಗೆ ಏನು ಹೇಳುತ್ತಿದ್ದಾರೆ ಎನ್ನುವುದನ್ನು ಮುಂದೆ ಓದಿ...

'ಬೀಸ್ಟ್' ಚಿತ್ರಕ್ಕೆ 5ಕ್ಕೆ 3 ಅಂಕ!

'ಬೀಸ್ಟ್' ಚಿತ್ರ ವಿಜಯ್ ಅಭಿಮಾನಿಗಳಿಗೆ ಖುಷಿ ಕೊಡುತ್ತೆ ಎಂದು ಹೆಚ್ಚು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶ್ಲೇಷಕ ರಮೇಶ್ ಬಾಲ ಟ್ವೀಟ್ ಮಾಡಿ "ಒಂದು ಮಾಲ್ ಆಕ್ರಮಣದ ಕುರಿತಾತ ಥ್ರಿಲ್ಲರ್ ಕಥೆ ಬೀಸ್ಟ್, ಇದರಲ್ಲಿ ವಿಜಯ್‌ರದ್ದು ಒನ್ ಮ್ಯಾನ್ ಶೋ. ವಿಜಯ್ ಆ್ಯಕ್ಷನ್ ಮತ್ತು ಡಾನ್ಸ್ ಉತ್ತಮವಾಗಿದೆ. 'ಬೀಸ್ಟ್' ಚಿತ್ರ ವಿಜಯ್ ಅಭಿಮಾನಿಗಳು ಸಂತಸ ಕೊಟ್ಟಿದೆ." ಎಂದು ಬರೆದುಕೊಂಡಿದ್ದಾರೆ.

'ಬೀಸ್ಟ್' ಸೆಕೆಂಡ್ ಆಫ್ ಸೂಪರ್!

'ಬೀಸ್ಟ್' ಚಿತ್ರದಲ್ಲಿ ನಟ ವಿಜಯ್ ಅಬ್ಬರವೇ ಹೆಚ್ಚಾಗಿ ಇದೆಯಂತೆ. ಚಿತ್ರದ ಮೊದಲಾರ್ಧ ಅಷ್ಟಕಷ್ಟೇ, ಚಿತ್ರದ ಸೆಕೆಂಡ್ ಆಫ್ ಅಂದರೆ ಇಂಟರ್ವಲ್ ಬಳಿಕ ಚಿತ್ರ ಚೆನ್ನಾಗಿ ಇದೆ. ಮೊದಲ ಭಾಗಕ್ಕಿಂತಲೂ ಎರಡನೇ ಭಾಗದಲ್ಲಿ ಹೆಚ್ಚಿನ ಫನ್ ಮತ್ತು ಎಂಟರ್ಟೈನ್‌ಮೆಂಟ್ ಇದೆ. ಸೆಕೆಂಡ್‌ ಆಫ್‌ನಲ್ಲಿ ವಿಜಯ್ ಆ್ಯಕ್ಷನ್ ರೊಮಾಂಚನಗೊಳಿಸುತ್ತದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

ಮಾಮೂಲಿ ಕಮರ್ಷಿಯಲ್ ಚಿತ್ರ 'ಬೀಸ್ಟ್'!

'ಬೀಸ್ಟ್' ಚಿತ್ರದ ಹೈಲೈಟ್‌ ನಟ ವಿಜಯ್ ಬಿಟ್ಟರೆ ಮತ್ತೇನೂ ಇಲ್ಲ. ಚಿತ್ರದಲ್ಲಿರುವ ಥ್ರಿಲ್ಲರ್ ಅಂಶ ನೋಡುಗರಿಗೆ ಇಷ್ಟವಾಗುತ್ತದೆ. ಬೆರಗುಗೊಳಿಸುವಂತಹ ಆ್ಯಕ್ಷನ್ ಚಿತ್ರದಲ್ಲಿದೆ. ಇದು ಒಂದು ಮಾಮೂಲಿ ಕಮರ್ಷಿಯಲ್ ಆ್ಯಕ್ಷನ್ ಚಿತ್ರ ಎನ್ನಲಾಗುತ್ತಿದೆ. ಇದರಲ್ಲಿ ವಿಜಯ್ ವಿಭಿನ್ನ ಮ್ಯಾನರಿಸಂನಲ್ಲಿ ಕಾಣಿಸಿಕೊಂಡಿದ್ದು, ಅದ್ಧೂರಿ ಆ್ಯಕ್ಷನ್ ಮೂಲಕ ಗಮನ ಸೆಳೆದಿದ್ದಾರೆ.

ಪೂಜಾ ಹೆಗ್ಡೆಯ ಪಾತ್ರ ಚಿಕ್ಕದು!

ಪೂಜಾ ಹೆಗ್ಡೆಯ ಪಾತ್ರ ಚಿಕ್ಕದು!

ಇನ್ನು 'ಬೀಸ್ಟ್' ನಟ ವಿಜಯ್ ಒನ್ ಮ್ಯಾನ್ ಶೋ ಎಂದಮೇಲೆ, ಬೇರೆ ಪಾತ್ರಗಳು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ ಈ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಪಾತ್ರ ಕೆಲವು ದೃಶ್ಯಗಳಿಗೆ ಮಾತ್ರ ಸೀಮಿತವಾಗಿದೆ. ಇನ್ನು ಹಾಡುಗಳಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ 'ಬೀಸ್ಟ್' ಒಂದು ಒಳ್ಳೆಯ ಚಿತ್ರ ಎನ್ನುವ ಅಭಿಪ್ರಾಯಗಳು ಮಾತ್ರ ಹೊಸ ಬಂದಿವೆ. ಚಿತ್ರ ಅತ್ಯುತ್ತಮವಾಗಿದೆ. ಎಕ್ಸಲೆಂಟ್ ಎನ್ನುವ ಮಾತುಗಳು ಕೇಳಿ ಬಂದಿಲ್ಲ.

More from Filmibeat

English summary
Beast Movie Twitter review: Here's What Netizens Have To Say About Thalapathy Vijay and Pooja Hegde movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X