ಪತ್ನಿ ಜೊತೆ ಮುಂಬೈಗೆ ಶಿಫ್ಟ್ ಆಗಿದ್ದೇಕೆ? ಮಹಿಳೆಯರ ಮನಗೆದ್ದ ಸೂರ್ಯ ಮಾತು

ತೆಲುಗು, ತಮಿಳಿನ ಕೆಲ ಕಲಾವಿದರು ಮುಂಬೈಗೆ ತಮ್ಮ ವಾಸ್ತವ್ಯ ಬದಲಿಸುತ್ತಿದ್ದಾರೆ. ತಮಳು ನಟ ಸೂರ್ಯ ಹಾಗೂ ಪತ್ನಿ ಜ್ಯೋತಿಕಾ ಮಕ್ಕಳ ಸಮೇತ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿ ಬಂಗಲೆ ಖರೀದಿಸಿ ವಾಸಿಸಲು ಆರಂಭಿಸಿದ್ದಾರೆ. ಇದಕ್ಕೆ ಕಾರಣ ಏನು? ಎನ್ನುವ ಬಗ್ಗೆ ಹಿಂದೆ ಭಾರೀ ಚರ್ಚೆ ಆಗಿತ್ತು.

ನಟ ಸೂರ್ಯ ಹಾಗೂ ಪೋಷಕರ ನಡುವೆ ಭಿನ್ನಾಭಿಪ್ರಾಯ ಮೂಡಿದ್ಯಾ? ಪತ್ನಿ ಮಾತು ಕೇಳಿ ಸೂರ್ಯ ಈ ನಿರ್ಧಾರಕ್ಕೆ ಬಂದ್ರಾ? ಚೆನ್ನೈನಲ್ಲಿ ಏನು ಕಮ್ಮಿ ಆಗಿತ್ತು? ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿತ್ತು. ಈಗಾಗಲೇ ನಟಿ ಜ್ಯೋತಿಕಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಕ್ಕಳ ಶಿಕ್ಷಣ ಹಾಗೂ ವಯಸ್ಸಾದ ತಮ್ಮ ಪೋಷಕರಿಗೆ ಹತ್ತಿರವಾಗಿ ಇರಬೇಕು ಎನ್ನುವ ಕಾರಣಕ್ಕೆ ಈ ನಿರ್ಣಯ ಎಂದಿದ್ದರು.

Because of wife jyothika Kanguva actor Suriya reveled why shifted to Mumbai

ಮುಂಬೈಗೆ ಶಿಫ್ಟ್ ಆಗಿದ್ದರ ಬಗ್ಗೆ ನಟ ಸೂರ್ಯ ಇದೀಗ ಮಾತನಾಡಿದ್ದಾರೆ. ದಿ ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಅನುಪಮಾ ಚೋಪ್ರಾ ಸಂದರ್ಶನ ನಡೆಸಿದ್ದಾರೆ. ಸೂರ್ಯ ನಟನೆಯ 'ಕಂಗುವ' ಸಿನಿಮಾ ನವೆಂನರ್ 15ಕ್ಕೆ ತೆರೆಗೆ ಬರಲಿದೆ. ಚಿತ್ರದ ಪ್ರಚಾರದ ಭಾಗವಾಗಿ ಸೂರ್ಯ ಮಾತನಾಡಿದ್ದಾರೆ. ಈ ವೇಳೆ ವೈಯಕ್ತಿಕ ವಿಚಾರಗಳು ಚರ್ಚೆ ಬಂದಿದೆ.

ತಾವು ಮುಂಬೈಗೆ ಯಾಕೆ ಮನೆ ಬದಲಿಸಿದ್ದು ಎಂದು ನಟ ಸೂರ್ಯ ಮಾತನಾಡಿದ್ದಾರೆ. "ಜ್ಯೋತಿಕಾ ತನ್ನ 18-19 ನೇ ವಯಸ್ಸಿನಲ್ಲಿ ಮುಂಬೈನಿಂದ ಚೆನ್ನೈಗೆ ಶಿಫ್ಟ್ ಆಗಿದ್ದರು. ಅವರು ಸುಮಾರು 27 ವರ್ಷಗಳಿಂದ ಚೆನ್ನೈನಲ್ಲಿದ್ದಾರೆ. ಜ್ಯೋತಿಕಾ ಮುಂಬೈನಲ್ಲಿ 18 ಮತ್ತು ಚೆನ್ನೈನಲ್ಲಿ 27 ವರ್ಷ ಇದ್ದರು. ಆಕೆ ನನ್ನೊಂದಿಗೆ, ನನ್ನ ಕುಟುಂಬ ಮತ್ತು ಮಕ್ಕಳೊಂದಿಗೆ ಚೆನ್ನೈನಲ್ಲಿ ಇದ್ದಳು. ತನ್ನ ವೃತ್ತಿ ಮತ್ತು ಸ್ನೇಹಿತರು, ಸಂಬಂಧಿಕರನ್ನು ತೊರೆದು ಮುಂಬೈ ಜೀವನಶೈಲಿಯನ್ನು ತೊರೆದು ಬದುಕಿದಳು" ಎಂದು ಸೂರ್ಯ ಮಾತು ಆರಂಭಿಸಿದ್ದಾರೆ.

"27 ವರ್ಷಗಳ ನಂತರ ಅವಳಿಗೆ ಈಗ ತನ್ನ ಹೆತ್ತವರೊಂದಿಗೆ ಸಮಯ ಕಳೆಯುವ ಅವಕಾಶ ಸಿಕ್ಕಿತು. ಅವಳಿಗೆ ತನ್ನ ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಸಿಕ್ಕಿದೆ. ಪುರುಷನು ಹೇಗೆ ತನ್ನ ಹೆತ್ತವರು ಮತ್ತು ಸಂಬಂಧಿಕರೊಂದಿಗೆ ಇರಲು ಬಯಸುವಂತೆಯೇ, ಮಹಿಳೆಯರೂ ಸಹ. ನನಗೆ ನಂತರ ಅದು ಗೊತ್ತಾಯಿತು. ಹಾಗಾಗಿ ಆಕೆಯ ಜೊತೆ ಮುಂಬೈಗೆ ಹೋಗಿ ನೆಲೆಸಲು ಒಪ್ಪಿಕೊಂಡೆ" ಎಂದು ಸೂರ್ಯ ಹೇಳಿದ್ದಾರೆ.

Because of wife jyothika Kanguva actor Suriya reveled why shifted to Mumbai

ಒಬ್ಬ ಪುರುಷನಿಗೆ ಏನು ಬೇಕೋ ಅದು ಮಹಿಳೆಯರಿಗೂ ಬೇಕು ಎನ್ನುವ ಸೂರ್ಯ ಹೇಳಿಕೆಗೆ ನಿರೂಪಕಿ ಅನುಪಮಾ ಚೋಪ್ರಾ ಸಹ ಧನ್ಯವಾದ ತಿಳಿಸಿದ್ದಾರೆ. ಬಳಿಕ ಸೂರ್ಯ ಮಾತು ಮುಂದುವರೆಸಿ "ಆಕೆಗೂ ಬಿಡುವು ಬೇಕು, ಅವಳು ಬಯಸಿದ ಜೀವನವನ್ನು ನಡೆಸುತ್ತಿದ್ದಾಳೆ. ಅಲ್ಲದೆ ಮಕ್ಕಳು ಮುಂಬೈನ ಉನ್ನತ ಶಾಲೆಯಲ್ಲಿ ಓದುತ್ತಿದ್ದಾರೆ. ನಾನು ಚೆನ್ನೈ ಮತ್ತು ಮುಂಬೈ ಬ್ಯಾಲೆನ್ಸ್ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ" ಎಂದಿದ್ದಾರೆ.

"ತಿಂಗಳಿಗೆ ಕನಿಷ್ಠ ಹತ್ತು ದಿನ ಮುಂಬೈನಲ್ಲಿ ಕಳೆಯುವ ಯೋಜನೆ ಇದೆ ಎಂದರು. ಇನ್ನು 20 ದಿನಗಳಲ್ಲಿ ಹಲವು ಗಂಟೆಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸುವುದಾಗಿ ಹೇಳಿರುವ ಸೂರ್ಯ, ಆ ಹತ್ತು ದಿನ ಮುಂಬೈನಲ್ಲಿ ಕುಟುಂಬ ಸಮೇತ ಕಾಲ ಕಳೆಯುವುದಾಗಿ ತಿಳಿಸಿದ್ದಾರೆ. ಮುಂಬೈನಲ್ಲಿ ನಾನು ಆರಾಮಾಗಿ ಸುತ್ತಾಡಬಹುದು. ಫ್ಯಾಮಿಲಿ ಜೊತೆ ಆಚೆ ಹೋಗಿ ಬೇಕಾಗಿದ್ದು ತಿನ್ನಬಹುದು. ಅಲ್ಲಿ ಅಭಿಮಾನಿಗಳು ಮುತ್ತಿಕೊಳ್ಳಲ್ಲ ಎಂದು ಸೂರ್ಯ ವಿವರಿಸಿದ್ದಾರೆ.

ತಮ್ಮ ಪತ್ನಿ ಜ್ಯೋತಿಕಾ ಮೇಲಿನ ಪ್ರೀತಿಯಿಂದ ಆಕೆಯ ಸ್ವಾತಂತ್ರ್ಯಕ್ಕೆ ಭಂಗ ತರಬಾರದು, ಜೊತೆಗೆ ಆಕೆ ತನ್ನ ಊರಿನಲ್ಲಿ ಇರಬೇಕು ಎಂದು ಮುಂಬೈಗೆ ಶಿಫ್ಟ್ ಆಗುವ ನಿರ್ಧಾರ ಕೈಗೊಂಡಿದ್ದಾಗಿ ಸೂರ್ಯ ಹೇಳಿದ್ದಾರೆ. ಪತ್ನಿಯ ಬಗ್ಗೆ ಸೂರ್ಯ ಆಲೋಚನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

More from Filmibeat

English summary
Actor Suriya says reason why he shifted to Mumbai with family;
Read more about: surya jyothika kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X