For Quick Alerts
  ALLOW NOTIFICATIONS  
  For Daily Alerts

  ಪೊನ್ನಿಯಿನ್ ಸೆಲ್ವನ್ 1: ಬೆಂಗಳೂರು ಅಡ್ವಾನ್ಸ್ ಬುಕಿಂಗ್ ಓಪನ್; ಕಾಂತಾರಕ್ಕೆ ಸೆಡ್ಡು ಹೊಡೆಯುತ್ತಾರಾ ಮಣಿರತ್ನಂ?

  |

  ಈ ವಾರದ ಶುಕ್ರವಾರ ಕನ್ನಡ ಹಾಗೂ ತಮಿಳು ಚಿತ್ರ ರಸಿಕರಿಗೆ ಹಬ್ಬ ಎಂದೇ ಹೇಳಬಹುದು. ಏಕೆಂದರೆ ಇಬ್ಬರು ಕ್ರಿಯಾಶೀಲ ನಿರ್ದೇಶಕರಾದ ರಿಷಬ್ ಶೆಟ್ಟಿ ಹಾಗೂ ಮಣಿರತ್ನಂ ನಿರ್ದೇಶನದ ಚಿತ್ರಗಳು ಇದೇ ದಿನ ಬಿಡುಗಡೆಯಾಗಲಿವೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಹಾಗೂ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 1 ಸಿನಿಮಾಗಳು ಮುಖಾಮುಖಿಯಾಗಲಿವೆ.

  ಐತಿಹಾಸಿಕ ಕಥಾಹಂದರ ಹೊಂದಿರುವ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ವಿಕ್ರಮ್, ಕಾರ್ತಿ, ಜಯಮ್ ರವಿ, ತ್ರಿಶಾ, ಐಶ್ವರ್ಯ ರೈ ಹೀಗೆ ದೊಡ್ಡ ತಾರಾಗಣವಿದ್ದು ಚಿತ್ರದ ಬೆಂಗಳೂರು ಬುಕಿಂಗ್ ಈಗಾಗಲೇ ಆರಂಭಗೊಂಡಿದೆ. ಇತ್ತ ವ ರಿಷಬ್ ಶೆಟ್ಟಿ ನಿರ್ದೇಶನದ ಜತೆಗೆ ನಾಯಕನಾಗಿಯೂ ಅಭಿನಯಿಸಿದ್ದಾರೆ ಹಾಗೂ ಕಾಂತಾರ ನಿಗೂಢ ಕಾಡಿನೊಳಗಿನ ಆದಿವಾಸಿಗಳ ಹಾಗೂ ಕಂಬಳದ ಸುತ್ತ ನಡೆಯುವ ಚಿತ್ರಕತೆಯನ್ನು ಹೊಂದಿದೆ.

  ಇನ್ನು ಈ ಎರಡೂ ಚಿತ್ರಗಳ ಮುಂಗಡ ಬುಕಿಂಗ್ ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ಓಪನ್ ಆಗಿದ್ದು, ಪೊನ್ನಿಯಿನ್ ಸೆಲ್ವನ್ 1 ಚಿತ್ರದ ಬಿಡುಗಡೆ ದಿನಾಂಕದ ಬುಕಿಂಗ್ ಆರಂಭವಾಗಿದ್ದರೆ, ಕಾಂತಾರ ಚಿತ್ರದ ಪ್ರೀಮಿಯರ್ ಶೋಗಳ ಮುಂಗಡ ಬುಕಿಂಗ್ ಆರಂಭಗೊಂಡಿವೆ. ಹೀಗೆ ಎರಡೂ ಚಿತ್ರಗಳ ಬೆಂಗಳೂರು ಮುಂಗಡ ಬುಕಿಂಗ್ ಆರಂಭಗೊಂಡಿದ್ದು ಕಾಂತಾರ ಚಿತ್ರದ ಬುಕಿಂಗ್ ರೀತಿಯೇ ಪೊನ್ನಿಯಿನ್ ಸೆಲ್ವನ್ 1 ಬುಕಿಂಗ್ ಕೂಡ ಚೆನ್ನಾಗಿ ನಡೆಯುತ್ತಿದೆ.

  ಪೊನ್ನಿಯಿನ್ ಸೆಲ್ವನ್ 1 ಬಿಡುಗಡೆಗೆ ಇನ್ನೂ ಆರು ದಿನಗಳು ಇರುವಾಗಲೇ ಮಲ್ಟಿಪ್ಲೆಕ್ಸ್ ಶೋಗಳು ವೇಗವಾಗಿ ತುಂಬುತ್ತಿದ್ದು, ಬೆಂಗಳೂರಿನಲ್ಲಿ ಕಾಂತಾರ ಸಿನಿಮಾಗೆ ಒಂದೊಳ್ಳೆ ಪೈಪೋಟಿ ನೀಡುವ ಸೂಚನೆಯನ್ನು ನೀಡಿದೆ. ಈ ಮೂಲಕ ಎರಡೂ ಚಿತ್ರಗಳ ನಡುವಿನ ರೇಸ್‌ನಲ್ಲಿ ಗೆಲ್ಲುವವರಾರು ಸೋಲುವವರಾರು ಎಂಬುದು ಈಗ ಕುತೂಹಲ ಮೂಡಿಸಿದೆ.

  English summary
  Bengaluru advance booking race started between Ponniyin Selvan 1 and Kantara
  Sunday, September 25, 2022, 20:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X