Jailer: ಜೈಲರ್‌ಗೆ ಬೆಂಗಳೂರು ಬಾಕ್ಸ್ ಆಫೀಸ್ ಜೈಕಾರ; ಎಲ್ಲಾ ಚಿತ್ರಗಳ ದಾಖಲೆ ಉಡೀಸ್!

ಇಂದು ( ಆಗಸ್ಟ್ 10 ) ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹು ನಿರೀಕ್ಷಿತ ಚಿತ್ರ ಜೈಲರ್ ತೆರೆಗೆ ಅಪ್ಪಳಿಸಿದೆ.‌ ಹಾಡುಗಳು ಹಾಗೂ ಟ್ರೈಲರ್ ಮೂಲಕ‌ ಬೃಹತ್ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಜೈಲರ್ ಚಿತ್ರ ಮುಂಜಾನೆಯಿಂದಲೇ ವಿವಿಧೆಡೆ ಪ್ರದರ್ಶನವನ್ನು ಕಾಣ ತೊಡಗಿದೆ.

ಈ ಹಿಂದೆ ಅಣ್ಣಾತ್ತೆ ಎಂಬ ಚಿತ್ರದಲ್ಲಿ ನಟಿಸಿ ಸೋಲಿನ ರುಚಿಯನ್ನು ಕಂಡಿದ್ದ ರಜನಿಕಾಂತ್ ಈ ಬಾರಿ ಜೈಲರ್ ಅವತಾರವನ್ನೆತ್ತಿ‌ ಸಿನಿ ರಸಿಕರ ಮುಂದೆ ಬಂದಿದ್ದು, ಬಹು ದಿನಗಳ ಬಳಿಕ ಬೆಳ್ಳಿ ತೆರೆ ಮೇಲೆ ತಲೈವಾ ದರ್ಶನ ಪಡೆಯಲು ಸಿನಿ ರಸಿಕರು ಹಾಗೂ ರಜನಿ ಫ್ಯಾನ್ಸ್ ಸೂರ್ಯ ಉದಯಿಸುವ ಮುನ್ನವೇ ಚಿತ್ರಮಂದಿರಗಳನ್ನು ಪ್ರವೇಶಿಸಿದ್ದಾರೆ‌.

bengaluru-highest-day-1-shows-jailer

ಹೀಗೆ ಬೃಹತ್ ಕ್ರೇಜ್ ಹುಟ್ಟುಹಾಕಿದ್ದ ಜೈಲರ್ ಚಿತ್ರದ ಬಿಡುಗಡೆಗೆ ಸಿನಿ ರಸಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಲೈವಾ ನಟನೆಯ ಪ್ರತಿ ಸಿನಿಮಾದ ಹಾಗೆ ಜೈಲರ್ ಚಿತ್ರಕ್ಕೂ ಸಹ ಭರ್ಜರಿ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಜರುಗಿದೆ. ರಜನಿಕಾಂತ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಮುಗಿಬಿದ್ದು ಟಿಕೆಟ್ ಖರೀದಿಸಿದ್ದು, ಪರಿಣಾಮ ಚಿತ್ರಕ್ಕೆ ದಾಖಲೆಯ ಸಂಖ್ಯೆಯ ಪ್ರದರ್ಶನಗಳು ಲಭಿಸಿದ್ದು, ಈ ವಿಷಯದಲ್ಲಿ ಜೈಲರ್ ಹಲವಾರು ನೂತನ ದಾಖಲೆಗಳನ್ನು ಬರೆದಿದೆ.

ತಮಿಳುನಾಡಿನಲ್ಲಿ ಮಾತ್ರವಲ್ಲದೇ ಇತರೆ ರಾಜ್ಯಗಳಲ್ಲೂ ಸಹ ಜೈಲರ್ ಅಬ್ಬರ ಜೋರಾಗಿದ್ದು, ವಿಶೇಷವಾಗಿ ಬೆಂಗಳೂರಿನಲ್ಲಿ ಚಿತ್ರ ಅಬ್ಬರದ ಪ್ರದರ್ಶನಗಳನ್ನು ಪಡೆದುಕೊಂಡು ಇಲ್ಲಿಯವರೆಗೂ ಯಾವ ಚಿತ್ರವೂ ಮಾಡದ ದಾಖಲೆಯನ್ನು ಬರೆದಿದೆ‌. ಹೌದು, ಜೈಲರ್ ಚಿತ್ರ ಬೆಂಗಳೂರಿನಲ್ಲಿ ವಿನೂತನ ದಾಖಲೆ ಬರೆದಿದೆ. ಸಿನಿಮಾ ಇತಿಹಾಸದಲ್ಲಿ ಇಲ್ಲಿಯವರೆಗೂ ಯಾವ ಚಿತ್ರವೂ ಮಾಡಿರದ ಸಾಧನೆಯನ್ನು ಜೈಲರ್ ಚಿತ್ರ ಮಾಡಿದೆ.

ಹೌದು, ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ‌ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹಿಂದಿಕ್ಕಿರುವ ರಜನಿಕಾಂತ್ ನಟನೆಯ ಜೈಲರ್ ವಿನೂತನ ದಾಖಲೆಯನ್ನು ಬರೆದಿದೆ. ಬೆಂಗಳೂರಿನಲ್ಲಿ ಮೊದಲ ದಿನ ಜೈಲರ್ ಚಿತ್ರಕ್ಕೆ ತಮಿಳು, ಕನ್ನಡ ಹಾಗೂ ತೆಲುಗು ಈ ಮೂರೂ ಅವತರಣಿಕೆಗಳು ಸೇರಿದಂತೆ ಬರೋಬ್ಬರಿ 1092 ಪ್ರದರ್ಶನಗಳು ಲಭಿಸಿದ್ದು, ಇದು ನಗರದಲ್ಲಿ ಚಿತ್ರವೊಂದಕ್ಕೆ ಬಿಡುಗಡೆ ದಿನ ಲಭಿಸಿದ ಅತಿಹೆಚ್ಚು ಪ್ರದರ್ಶನಗಳ ಸಂಖ್ಯೆಯಾಗಿದೆ.

ಬೆಂಗಳೂರಿನಲ್ಲಿ ಬಿಡುಗಡೆ ದಿನ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಟಾಪ್ 3 ಚಿತ್ರಗಳು ಈ ಕೆಳಕಂಡಂತಿವೆ.

ಜೈಲರ್ - 1092 ಪ್ರದರ್ಶನಗಳು
ಕೆಜಿಎಫ್ ಚಾಪ್ಟರ್ 2 - 1037 ಪ್ರದರ್ಶನಗಳು
ಅವತಾರ್ ದ ವೇ ಆಫ್ ವಾಟರ್ - 1014 ಪ್ರದರ್ಶನಗಳು

ಕನ್ನಡಕ್ಕಿಂತ ತೆಲುಗಿಗೆ ಹೆಚ್ಚು ಶೋಸ್: ಇನ್ನು ಬೆಂಗಳೂರಿನಲ್ಲಿ ಜೈಲರ್ ತಮಿಳು, ತೆಲುಗು ಹಾಗೂ ಕನ್ನಡ ಈ ಮೂರೂ ಭಾಷೆಗಳಲ್ಲಿಯೂ ಸಹ ಬಿಡುಗಡೆಯಾಗಿದ್ದು, ಮೊದಲ ದಿನ ತಮಿಳು ವರ್ಷನ್ 1021 ಶೋಗಳನ್ನು ಪಡೆದುಕೊಂಡಿದ್ದರೆ, ತೆಲುಗು ವರ್ಷನ್ 41 ಶೋಗಳನ್ನು ಪಡೆದುಕೊಂಡಿದೆ ಹಾಗೂ ಕನ್ನಡ ವರ್ಷನ್ ಕೇವಲ‌ 30 ಪ್ರದರ್ಶನಗಳನ್ನು ಪಡೆದುಕೊಂಡಿದೆ.

More from Filmibeat

English summary
Bengaluru highest day 1 shows: Jailer becomes the movie with highest day 1 shows
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X