Mark Antony: ನಿಯಂತ್ರಣ ತಪ್ಪಿದ ಟ್ರಕ್.. ಕೂದಲೆಳೆ ಅಂತರದಲ್ಲಿ ವಿಶಾಲ್ ಬಚಾವ್: ಮೈಜುಮ್ ಎನ್ನಿಸುವ ವಿಡಿಯೋ
ತಮಿಳು ನಟ ವಿಶಾಲ್ ಶೂಟಿಂಗ್ ವೇಳೆ ಬಹಳ ರಿಸ್ಕಿ ಸ್ಟಂಟ್‌ಗಳನ್ನು ಮಾಡುತ್ತಿರುತ್ತಾರೆ. ಇದೇ ಕಾರಣಕ್ಕೆ ಕೆಲವೊಮ್ಮೆ ಗಾಯಗೊಂಡಿದ್ದು ಇದೆ. ಇತ್ತೀಚೆಗೆ ಅಂತದ್ದೇ ಮತ್ತೊಂದು ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಚಿತ್ರತಂಡದ ಸಹಾಯದಿಂದ ನಟ ವಿಶಾಲ್ ಪ್ರಾಣಪಾಯದಿಂದ ಬಚಾವ್ ಆಗಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಸದ್ಯ ನಟ ವಿಶಾಲ್ 'ಮಾರ್ಕ್ ಆಂಟೋನಿ' ಸಿನಿಮಾದಲ್ಲಿ ನಟಿಸುತ್ತಿದ್ದರೆ. ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಒಂದ್ಕಡೆ ಶೂಟಿಂಗ್ ನಡೆಯುತ್ತಿದ್ದರೆ ಮತ್ತೊಂದು ಟ್ರಕ್‌ವೊಂದು ನಿಯಂತ್ರಣ ತಪ್ಪಿ ಸೆಟ್ ಒಳಕ್ಕೆ ವೇಗವಾಗಿ ಬಂದಿದೆ. ಸೆಟ್‌ನಲ್ಲಿ ವಿಶಾಲ್ ಕೆಳಗೆ ಬಿದ್ದಿದ್ದ ವೇಳೆ ಟ್ರಕ್ ವೇಗವಾಗಿ ಬಂದಿದೆ. ಟ್ರಕ್ ಬರುವುದನ್ನು ಕೂಡಲೇ ಗಮನಿಸಿದ ಚಿತ್ರತಂಡ ವಿಶಾಲ್ ಅವರನ್ನು ಪಕ್ಕಕ್ಕೆ ಎಳೆದುಕೊಂಡಿದ್ದಾರೆ.

ಅದೃಷ್ಟವಶಾತ್ ವಿಶಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲದೇ ಇದ್ದಿದರೆ ಭಾರಿ ದುರಂತ ಸಂಭವಿಸುತ್ತಿತ್ತು. ಸದ್ಯ ಈ ಘಟನೆಯಲ್ಲಿ ಯಾರಿಗೂ ತೊಂದರೆ ಆಗಿಲ್ಲ. ಎಲ್ಲರೂ ಕ್ಷೇಮವಾಗಿ ಇದ್ದೀವಿ ಎಂದು ನಟ ವಿಶಾಲ್ ವಿಡಿಯೋ ಸಮೇತ ಟ್ವೀಟ್ ಮಾಡಿ ತಿಳಿಸಿದ್ದಾರೆ.
"ಕೆಲವು ಕ್ಷಣಗಳು, ಕೆಲವೇ ಅಂಗುಲದ ಅಂತರದಲ್ಲಿ ಜೀವವೇ ಹೋಗಿಬಿಡುತ್ತಿತ್ತು. ಥ್ಯಾಂಕ್ ಗಾಡ್, ಈ ಘಟನೆಯ ನಂತರ ಮತ್ತೆ ಚಿತ್ರೀಕರಣ ನಡೆಸಲಾಯಿತು" ಎಂದು ವಿಶಾಲ್ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಈ ವಿಡಿಯೋ ನೋಡಿ ಅಬ್ಬಾ ಏನು ಆಗಲಿಲ್ಲ. ಟೇಕ್ ಕೇರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ನಟ ದೀಪಕ್ ಪರದೇಶ್ ಪ್ರತಿಕ್ರಿಯಿಸಿ ನೋಡೋಕೆ ಭಯಂಕರವಾಗಿ ಪುಣ್ಯ ಯಾರಿಗೂ ಏನು ಆಗಿಲ್ಲ ಎಂಉ ಭಾವಿಸುತ್ತೇನೆ" ಎಂದು ರಿಪ್ಲೈ ಮಾಡಿದ್ದಾರೆ.
ಹಿಂದೆ 'ಲಾಠಿ' ಸಿನಿಮಾ ಚಿತ್ರೀಕರಣದ ವೇಳೆಯೂ ನಟ ವಿಶಾಲ್‌ಗೆ ಪಟ್ಟಾಗಿತ್ತು. ಅದಕ್ಕೂ ಮುನ್ನ 'ಚಕ್ರ' ಸಿನಿಮಾ ಚಿತ್ರೀಕರಣದಲ್ಲಿ ತಲೆಗೆ ಪೆಟ್ಟು ಬಿದ್ದಿತ್ತು. ಪದೇ ಪದೇ ವಿಶಾಲ್ ಹೀಗೆ ಗಾಯಗೊಳ್ಳುತ್ತಿದ್ದಾರೆ. ಡ್ಯೂಪ್ ಇಲ್ಲದೇ ಆಕ್ಷನ್ ಸನ್ನಿವೇಶಗಳಲ್ಲಿ ಅವರು ನಟಿಸೋದೇ ಇದಕ್ಕೆ ಕಾರಣ ಎನ್ನಲಾಗುತ್ತದೆ. ನಟನಾಗಿ ಅಷ್ಟರಮಟ್ಟಿಗೆ ಕಮೀಟ್‌ಮೆಂಟ್ ಇದೆ. ಹಾಗಾಗಿ ಅವರು ಡ್ಯೂಪ್ ಹಾಕಲು ಒಪ್ಪಲ್ಲ ಎಂದು ಚಿತ್ರತಂಡವರು ಹೇಳುತ್ತಾರೆ.

'ಮಾರ್ಕ್ ಆಂಟೋನಿ' ಅದಿಕ್ ರವಿಚಂದ್ರನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ರಿತು ವರ್ಮಾ ಚಿತ್ರದಲ್ಲಿ ಹೀರೊಯಿನ್ ಆಗಿ ನಟಿಸುತ್ತಿದ್ದಾರೆ. ಎಸ್. ಜೆ ಸೂರ್ಯ, ಸುನೀಲ್ ಪ್ರಮುಖ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನ ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ತರಲಾಗುತ್ತಿದೆ. ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಆಗಿ ವಿಶಾಲ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications