For Quick Alerts
  ALLOW NOTIFICATIONS  
  For Daily Alerts

  ಪಾರ್ನ್ ವೆಬ್‌ಸೈಟ್ ನಲ್ಲಿ ಬಿಗ್‌ ಬಾಸ್ ಸ್ಪರ್ಧಿಯ ಚಿತ್ರ, ಫೋನ್‌ ನಂಬರ್

  |

  ತಂತ್ರಜ್ಞಾನ ಬೆಳೆದಂತೆ ವ್ಯಕ್ತಿಯೊಬ್ಬರ ಚರೀತ್ರ್ಯ ಹರಣವೂ ಸುಲಭವಾಗುತ್ತಾ ಹೋಗುತ್ತಿದೆ. ಯಾವುದೇ ವ್ಯಕ್ತಿಯ ಚಿತ್ರಗಳನ್ನು ತೆಗೆದುಕೊಂಡು ಅದನ್ನು ಅಶ್ಲೀಲ ಚಿತ್ರವನ್ನಾಗಿ ಬದಲಾಯಿಸುವ ಕೆಟ್ಟ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ.

  ಬಿಗ್ ಬಾಸ್ ಮನೆಯ ಗೆಳೆಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ದೀಪಿಕಾ ದಾಸ್ | Deepika Das

  ಪಾರ್ನ್ ವೆಬ್‌ಸೈಟ್‌ನಲ್ಲಿ ಬಿಗ್‌ ಬಾಸ್ ಸ್ಪರ್ಧಿಯೊಬ್ಬರ ಚಿತ್ರಗಳು ಹರಿದಾಡುತ್ತಿವೆ. ಈ ಚಿತ್ರಗಳು ಆಕೆಯ ಸ್ವಂತದ್ದೋ ಅಥವಾ ಬೇರೆಯವರ ಚಿತ್ರಕ್ಕೆ ಆಕೆಯ ಮುಖ ಹಾಕಿ ಪಾರ್ನ್‌ ವೆಬ್‌ಸೈಟ್‌ ಗೆ ಹರಿಬಿಡಲಾಗಿದೆಯೋ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿವೆ.

  ಕಮಲ್ ಹಾಸನ್ ನಡೆಸಿಕೊಟ್ಟ ಬಿಗ್‌ ಬಾಸ್ ಸೀಸನ್ 3 ನ್ಲಲಿ ಸ್ಪರ್ಧಾರ್ಥಿಯಾಗಿ ಭಾಗವಹಿಸಿದ್ದ ಮಾಡೆಲ್ ಕಮ್ ನಟಿ ಮೀರಾ ಮಿಥುನ್ ಚಿತ್ರಗಳು ಅಶ್ಲೀಲ ವೆಬ್‌ಸೈಟ್ ಹರಿದಾಡುತ್ತಿವೆ. ಜೊತೆಗೆ ಆಕೆಯ ಮೊಬೈಲ್ ನಂಬರ್ ಅನ್ನೂ ಸಹ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

  ಪಾರ್ನ್ ನಲ್ಲಿ ತಮ್ಮ ಚಿತ್ರದ ಬಗ್ಗೆ ನಟಿ ಹೇಳಿದ್ದೇನು

  ಪಾರ್ನ್ ನಲ್ಲಿ ತಮ್ಮ ಚಿತ್ರದ ಬಗ್ಗೆ ನಟಿ ಹೇಳಿದ್ದೇನು

  ನನ್ನ ಚಿತ್ರಗಳನ್ನು ಕೆಟ್ಟ ರೀತಿಯಾಗಿ ತಿದ್ದಿ ಪಾರ್ನ್ ವೆಬ್‌ಸೈಟ್‌ಗಳಲ್ಲಿ ಹರಿಬಿಡಲಾಗಿದೆ. ನನ್ನ ಮೊಬೈಲ್ ಸಂಖ್ಯೆಯನ್ನೂ ವೆಬ್‌ ಸೈಟ್‌ ನಲ್ಲಿ ಹಾಕಲಾಗಿದೆ. ನನ್ನ ಸಾಮಾಜಿಕ ಜಾಲತಾಣದ ಕಮೆಂಟ್‌ ಬಾಕ್ಸ್ ಬೈಗುಳಗಳಿಂದ ತುಂಬಿ ಹೋಗಿದೆ'' ಎಂದು ಮೀರಾ ಮಿಥುನ್ ಹೇಳಿದ್ದಾರೆ.

  ಕಷ್ಟಪಟ್ಟು ಸಂಪಾದಿಸಿದ್ದ ಹೆಸರು ಕೆಡಿಸಿದರು: ಮೀರಾ

  ಕಷ್ಟಪಟ್ಟು ಸಂಪಾದಿಸಿದ್ದ ಹೆಸರು ಕೆಡಿಸಿದರು: ಮೀರಾ

  ''ಜೀವನದುದ್ದಕ್ಕೂ ಕಷ್ಟಪಟ್ಟು ಸಂಪಾದಿಸಿದ್ದ ಹೆಸರನ್ನು ಕೆಲವು ಕೆಟ್ಟ ಜನರು ಹೀಗೆ ಕ್ಷಣ ಮಾತ್ರದಲ್ಲಿ ಹಾಳುಗೆಡವುತ್ತಾರೆಂಬುದು ನಂಬಲಿಕ್ಕೂ ಸಾಧ್ಯವಿಲ್ಲ'' ಎಂದು ಮೀರಾ ಮಿಥುನ್ ಹೇಳಿದ್ದಾರೆ.

  ನನಗೇ ಹೀಗಾದರೆ ಸಾಮಾನ್ಯರ ಗತಿಯೇನು: ಮೀರಾ

  ನನಗೇ ಹೀಗಾದರೆ ಸಾಮಾನ್ಯರ ಗತಿಯೇನು: ಮೀರಾ

  'ನನ್ನ ಸಾಮಾಜಿಕ ಜಾಲತಾಣ ಖಾತೆಗಳು ಹ್ಯಾಕ್ ಆಗಿವೆ ಎಂದಿರುವ ಮೀರಾ, ಒಬ್ಬ ಸೆಲೆಬ್ರಿಟಿ ಆಗಿರುವ ನನಗೆ ಹೀಗೆ ಆಗುತ್ತದೆಯೆಂದರೆ ಸಾಮಾನ್ಯ ಹುಡುಗಿಯರ ಗತಿಯೇನು'' ಎಂದು ಹೇಳಿದ್ದಾರೆ.

  ''ಚಿತ್ರಗಳನ್ನು ಅಪ್‌ಲೋಡ್ ಮಾಡಿದವರ ಸುಮ್ಮನೆ ಬಿಡಲ್ಲ''

  ''ಚಿತ್ರಗಳನ್ನು ಅಪ್‌ಲೋಡ್ ಮಾಡಿದವರ ಸುಮ್ಮನೆ ಬಿಡಲ್ಲ''

  ನನ್ನ ಚಿತ್ರಗಳನ್ನು ಪಾರ್ನ್‌ ವೆಬ್‌ಸೈಟ್ ನಲ್ಲಿ ಹಾಕಿ ತೊಂದರೆ ಕೊಟ್ಟವರನ್ನು ಸುಮ್ಮನೇ ಬಿಡುವುದಿಲ್ಲ ಎಂದಿರುವ ಮೀರಾ ಮಿಥುನ್, ''ನಾನು ಕೊನೆಯ ವರೆಗೆ ಹೋರಾಟ ಮಾಡುತ್ತೇನೆ, ಅವರಿಗೆ ಶಿಕ್ಷೆ ಆಗುವ ತನಕ ಬಿಡುವಿದಿಲ್ಲ, ಈ ಹೋರಾಟ ಎಲ್ಲ ಮಹಿಳೆಯರಿಗಾಗಿ'' ಎಂದಿದ್ದಾರೆ.

  ಬಾತ್‌ರೂಂ ವಿಡಿಯೋ ಹಾಕಿದ್ದ ಮೀರಾ

  ಬಾತ್‌ರೂಂ ವಿಡಿಯೋ ಹಾಕಿದ್ದ ಮೀರಾ

  ಮೀರಾ ಮಿಥುನ್ ತಮ್ಮ ಬೋಲ್ಡ್ ಮಾತು ಅವತಾರಕ್ಕೆ ಬಹು ಖ್ಯಾತರು. ತಮ್ಮ ಬಾತ್‌ ರೂಂ ವಿಡಿಯೋಗಳನ್ನು ಈ ಮುಂಚೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದು ಬಹಳ ವೈರಲ್ ಆಗಿತ್ತು.

  English summary
  Bigg Boss contestant and actress Meera Mithun's pictures uploaded in objectionable websites with her phone number.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X