Just In
Don't Miss!
- Automobiles
ಕೋವಿಡ್ ಲಸಿಕೆ ಸಾಗಾಣಿಕೆಗಾಗಿ ವಿಶೇಷ ಟ್ರಕ್ ಅಭಿವೃದ್ದಿಪಡಿಸಿದ ಟಾಟಾ ಮೋಟಾರ್ಸ್
- News
ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತಾಗಿದೆ "ಜೈಶ್ರೀರಾಮ್" ಘೋಷಣೆ; ಹರಿಯಾಣ ಸಚಿವ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿವಾರ್ ಚಂಡಮಾರುತ; 'ಬಿಗ್ ಬಾಸ್' ಮನೆಯೊಳಗೆ ನುಗ್ಗಿದ ನೀರು, ಸ್ಪರ್ಧಿಗಳ ಸ್ಥಳಾಂತರ?
ಭಾರಿ ಮಳೆ ಮತ್ತು ಗಾಳಿಯೊಂದಿಗೆ ನಿವಾರ್ ಚಂಡಮಾರುತ ದಕ್ಷಿಣ ಭಾರತಕ್ಕೆ ಅಪ್ಪಳಿಸಿದೆ. ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಚೆನ್ನೈನಲ್ಲಿ 5 ಜನ ಮೃತಪಟ್ಟಿದ್ದಾರೆ. ಅನೇಕ ಮರಗಳು ಧರೆಗುರುಳಿದ್ದು, ಅಪಾರ ಹಾನಿ ಸಂಭವಿಸಿದೆ.
ತಮಿಳುನಾಡಿನ ಅನೇಕ ಪ್ರದೇಶದಲ್ಲಿ ಪ್ರವಾಸ ಪರಿಸ್ಥಿತಿ ಉಂಟಾಗಿದ್ದು, ಅಗತ್ಯ ಸೇವೆಗಳು ಕಡಿತಗೊಂಡಿವೆ. ಮೂಲಗಳ ಪ್ರಕಾರ ನಿವಾರ್ ಚಂಡಮಾರುತದ ಎಫೆಕ್ಟ್ ಬಿಗ್ ಬಾಸ್-4ಗೂ ತಟ್ಟಿದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ತಮಿಳು ಸೀಸನ್ 4 ಪ್ರಸಾರವಾಗುತ್ತಿದೆ. ಭಾರಿ ಮಳೆಯಿಂದ ಬಿಗ್ ಬಾಸ್ ಮನೆಯೊಳಗೆ ನೀರು ನುಗ್ಗಿದ್ದು ಸ್ಪರ್ಧಿಗಳನ್ನು ಸ್ಥಳಾಂತರ ಮಾಡಲಾಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಚೆಂಬರಂಬಕ್ಕಂ ಡ್ಯಾಮ್ ನಿಂದ ನೀರು ಬಿಟ್ಟಿದ್ದು, ಹತ್ತಿರ ಪ್ರದೇಶಗಳು ಜಲಾವೃತವಾಗಿವೆ. ಡ್ಯಾಮ್ ಸಮೀಪದಲ್ಲೇ ಬಿಗ್ ಬಾಸ್-4 ಮನೆ ಕೂಡ ಇರುವುದರಿಂದ ಮನೆಯೊಳಗೂ ನೀರು ನುಗ್ಗಿದೆ ಎಂದು ಹೇಳಲಾಗುತ್ತಿದೆ. ಪ್ರವಾಹದಿಂದ ಬಿಗ್ ಮನೆಯಲ್ಲಿದ್ದ ಸ್ಪರ್ಧಿಗಳು ಭಯಭೀತರಾಗಿದ್ದು ಮನೆಯಿಂದ ಕರೆದುಕೊಂಡು ಹೋಗುವಂತೆ ಮನವಿ ಮಾಡುತ್ತಿದ್ದರು ಎನ್ನಲಾಗುತ್ತಿದೆ.
ಬಳಿಕ ಸ್ಪರ್ಧಿಗಳನ್ನು ಫೈವ್ ಸ್ಟಾರ್ ಹೋಟೆಲ್ ಗೆ ಸ್ಥಳಾಂತರ ಮಾಡಲಾಗಿದೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಬಿಗ್ ಬಾಸ್ ಮನೆಯೊಳಗೆ ತುಂಬಿರುವ ನೀರನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದ್ದು, ನೀರು ಸಂಪೂರ್ಣವಾಗಿ ಖಾಲಿಯಾದ ಬಳಿಕ ಸ್ಪರ್ಧಿಗಳನ್ನು ಮತ್ತೆ ಮನೆಯೊಳಗೆ ಕಳುಹಿಸಲಿದ್ದಾರೆ.
ಆದರೆ ಈ ಸುದ್ದಿಯನ್ನ ಬಿಗ್ ಬಾಸ್ ಮೂಲಗಳು ತಳ್ಳಿ ಹಾಕಿವೆ. ಇದು ವದಂತಿಯಷ್ಟೆ ಬಿಗ್ ಬಾಸ್ ಮನೆ ಸುರಕ್ಷಿತವಾಗಿದೆ, ಯಾವುದೇ ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ. ನಿನ್ನೆಯ ಸಂಚಿಕೆ ಯತಾಪ್ರಕಾರ ಮುಂದುವರೆದಿದೆ. ಇವತ್ತಿನ ಸಂಚಿಕೆಯಲ್ಲಿ ಏನಾದರೂ ಬದಲಾವಣೆಯಾಗಿದೆಯಾ ಅಥವಾ ಯಥಾಪ್ರಕಾರ ಮುಂದುವರೆದಿದೆಯಾ ಎಂದು ಕಾದು ನೋಡಬೇಕು.
ಬಿಗ್ ಬಾಸ್ ತಮಿಳು-4 ಅನ್ನು ನಟ ಕಮಲ್ ಹಾಸನ್ ನಡೆಸಿಕೊಡುತ್ತಿದ್ದಾರೆ. ಲಾಕ್ ಡೌನ್ ಬಳಿಕ ಬಿಗ್ ಬಾಸ್ ಪ್ರಾರಂಭವಾಗಿದ್ದು, ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲಾಗುತ್ತಿದೆ.