Bigg Boss 8 Tamil Finale ; ತಮಿಳುನಾಡಿನ 'ಬಿಗ್ ಬಾಸ್' ಯಾರು ? ಟ್ರೋಫಿ ಜೊತೆ ಸಿಕ್ಕ ಹಣವೆಷ್ಟು ?
ಹಿಂದಿಯಲ್ಲಿ ಜನಪ್ರಿಯವಾದ ನಂತರ ಬಿಗ್ ಬಾಸ್ ದಕ್ಷಿಣದ ಭಾಷೆಗಳಲ್ಲಿ ಆರಂಭವಾಗಿತ್ತು. ಕನ್ನಡದ ಕಾರ್ಯಕ್ರಮದ ಸಾರಥ್ಯವನ್ನು ಕಳೆದ ಹನ್ನೊಂದು ವರ್ಷದಿಂದ ಸುದೀಪ್ ವಹಿಸಿಕೊಂಡಿದ್ದರೆ ತೆಲುಗಿನಲ್ಲಿ ನಾಗಾರ್ಜುನ ಉಸ್ತುವಾರಿಯಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ. ತಮಿಳಿನಲ್ಲಿ ಈ ಜವಾಬ್ದಾರಿಯನ್ನು ಕಮಲ್ ಹಾಸನ್ ಕಳೆದ ವರ್ಷದಿಂದ ವಿಜಯ್ ಸೇತುಪತಿ ಅವರಿಗೆ ವಹಿಸಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ.
ಇಂಥಾ ಬಿಗ್ ಬಾಸ್ ಕಾರ್ಯಕ್ರಮ ಕಳೆದ ವರ್ಷ ಹಿಂದಿ-ಕನ್ನಡ ಮತ್ತು ತಮಿಳಿನಲ್ಲಿ ಹೆಚ್ಚು ಕಡಿಮೆ ಏಕಕಾಲಕ್ಕೆ ಶುರುವಾಗಿತ್ತು. ಏಕಕಾಲಕ್ಕೆ ಮುಕ್ತಾಯವೂ ಆಗುತ್ತಿದೆ. ನಿನ್ನೆ ಹಿಂದಿಯಲ್ಲಿ ಬಿಗ್ ಬಾಸ್‌ನ ಗ್ರ್ಯಾಂಡ್ ಫಿನಾಲೆ ನಡೆದಿದ್ದು ಆ ಕಡೆ ಚೆನ್ನೈನಲ್ಲಿ ಕೂಡ ಕಾರ್ಯಕ್ರಮಕ್ಕೆ ವಿಜಯ್ ಸೇತುಪತಿ ಇತಿಶ್ರೀ ಹಾಡಿದ್ದಾರೆ.

ಅದ್ಧೂರಿಯಾಗಿ ನಿನ್ನೆ ಮುಕ್ತಾಯಗೊಂಡ ಈ ಕಾರ್ಯಕ್ರಮದಲ್ಲಿ ಮುತ್ತುಕುಮಾರನ್ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಸೌಂದರ್ಯ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಇವರಿಬ್ಬರ ಜೊತೆ ಅಂತಿಮ ಹಂತದವರೆಗೆ ಬಂದಿದ್ದ ವಿಶಾಲ್, ಪವಿತ್ರಾ ಮತ್ತು ರಾಯನ್ ನಿರಾಸೆ ಅನುಭವಿಸಿದ್ದಾರೆ. ಇನ್ನು ಹಿಂದಿಯಲ್ಲಿ ಟ್ರೋಫಿ ಜೊತೆ ಮೊದಲ ಸ್ಥಾನ ಅಲಂಕರಿಸಿದವರಿಗೆ ಐವತ್ತು ಲಕ್ಷ ಹಣವನ್ನು ನೀಡಲಾಗುತ್ತೆ. ಆದರೆ, ತಮಿಳಿನಲ್ಲಿ ನಲವತ್ತು ಲಕ್ಷ ಹಣವನ್ನು ಕೊಡಲಾಗುತ್ತೆ. ಮುತ್ತುಕುಮಾರನ್ 40,50,000 ರೂಪಾಯಿಯನ್ನು ನಿನ್ನೆ ತಮ್ಮದಾಗಿಸಿಕೊಂಡಿದ್ದಾರೆ.
ಅಂದ್ಹಾಗೇ ಮುತ್ತುಕುಮಾರನ್ ತಮಿಳುನಾಡಿನಲ್ಲಿ ಯೂಟ್ಯೂಬರ್ ಆಗಿ ಹೆಸರು ಮಾಡಿದವರು. 2019ರಲ್ಲಿ ನಾನ್ ಮುತ್ತುಕುಮಾರನ್ ಹೆಸರಿನ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದ ಇವರಿಗೆ ಅತ್ಯಲ್ಪ ಅವಧಿಯಲ್ಲಿಯೇ ಯಶಸ್ಸು ಸಿಕ್ಕಿತು. ತಮಿಳು ಸಂಸ್ಕ್ರತಿ ಮತ್ತು ಸಂಗೀತದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವ ಮುತ್ತುಕುಮಾರನ್ ತಮಿಳು ಚಿತ್ರಗಳ ವಿಮರ್ಷೆಯನ್ನು ಕೂಡ ಮಾಡುತ್ತಾ ಮುನ್ನುಗ್ಗಿದರು. ತಮ್ಮ ಮಾತನಾಡುವ ಶೈಲಿಯಿಂದ ಅನೇಕ ಅಭಿಮಾನಿಗಳನ್ನ ಕೂಡ ಸಂಪಾದಿಸಿದರು ಮುತ್ತುಕುಮಾರನ್.
ಇನ್ನು ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಮಣೆ ಹಾಕಲಾಗುತ್ತೆ ಎನ್ನುವ ಮಾತು ಇದೆ. ಹಾಗೇ ನೋಡಿದರೆ ಇದು ನಿಜಾ ಕೂಡ. ಜನ ಸಾಮಾನ್ಯವೊಬ್ಬ ಬಿಗ್ ಬಾಸ್ ಮನೆಗೆ ತೆರಳಿದ್ದು, ಕೊನೆಯವರೆಗೆ ಮನೆಯಲ್ಲಿಯೇ ಉಳಿದುಕೊಂಡು ಗೆದ್ದ ಉದಾಹರಣೆ ತುಂಬಾನೇ ಕಡಿಮೆ.ಹೀಗಿರುವಾಗ ಗುರುತು ಪರಿಚಯ ಇಲ್ಲದವರ 23 ಜನರ ನಡುವೆ 105 ದಿನಗಳನ್ನು ಕಳೆಯುವುದು, ನೀಡಲಾದ ಟಾಸ್ಕ್‌ಗಳನ್ನೆಲ್ಲ ಪೂರೈಸುವುದು, ವೀಕ್ಷಕರ ಹೃದಯವನ್ನು ಗೆಲ್ಲುವುದು ಸುಲಭ ಅಲ್ಲ. ಬಿಗ್ ಬಾಸ್ ಟ್ರೋಫಿಗೆ ಮುತ್ತಿಕ್ಕುವುದು ಕೂಡ ಸಾಧಾರಣ ವಿಷಯವಲ್ಲ.
ಕೇವಲ 26 ವರ್ಷ ಹರೆಯದಲ್ಲಿ ಬಿಗ್ ಬಾಸ್ ಮನೆಗೆ ತೆರಳಿ ಟ್ರೋಫಿಯನ್ನು ಗೆಲ್ಲುವುದಲ್ಲದೇ ಮುತ್ತುಕುಮಾರನ್ ನಲವತ್ತು ಲಕ್ಷ ಹಣವನ್ನು ಕೂಡ ಗಳಿಸಿದ್ದಾರೆ.ಹೆತ್ತವರಿಗೆ ಇದಕ್ಕಿಂತ ಖುಷಿ ವಿಚಾರ ಇನ್ನೆಲ್ಲಿದೆ. ಹೀಗಾಗಿಯೇ ನಿನ್ನೆ ವೇದಿಕೆಯ ಮೇಲೆ ಟ್ರೋಫಿ ಗೆಲ್ಲುತ್ತಿದ್ದಂತೆ ಭಾವುಕರಾದ ಮುತ್ತುಕುಮಾರನ್ ತಮ್ಮ ತಂದೆ ಮತ್ತು ತಾಯಿಯನ್ನು ವೇದಿಕೆಗೆ ಕರೆಸಿಕೊಂಡು ಫೋಟೊ ಕ್ಲಿಕಿಸಿಕೊಂಡಿದ್ದಾರೆ. ಸಂಭ್ರಮ ಪಟ್ಟಿದ್ದಾರೆ. ಇನ್ನು ಮುತ್ತುಕುಮಾರನ್ ಮನೆಯಲ್ಲಿ ಇದ್ದಾಗ ಟ್ರೋಫಿಯನ್ನು ಮುತ್ತುಕುಮಾರನ್ ಗೆಲ್ಲಬೇಕೆಂದು ಆಶಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಮುತ್ತುಕುಮಾರನ್ ವಿನ್ನರ್ ಎಂದು ಟ್ರೆಂಡ್ ಕೂಡ ಆಗಿತ್ತು. ಅದರಂತೆ ಈಗ ಮತ್ತುಕುಮಾರನ್ ಈಗ ಗೆದ್ದಿದ್ದಾರೆ. ಈ ಹಿನ್ನೆಲೆ ತಮಿಳು ಬಿಗ್ ಬಾಸ್‌ನಲ್ಲಿ ಪಾರದರ್ಶಕತೆ ಇದೆ ಜನರ ವೋಟ್‌ಗೆ ಬೆಲೆ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ. ಮುತ್ತುಕುಮಾರನ್‌ಗೆ ಶುಭಾಶಯಗಳ ಮಹಾಪೂರ ಕೂಡ ಹರಿದು ಬರುತ್ತಿದೆ.


Click it and Unblock the Notifications











