ಕನ್ನಡಕ್ಕೆ ತಮಿಳು ನಟ ವಿಜಯ್ ಅಭಿನಯದ 'ಬಿಗಿಲ್'!

ತಮಿಳು ಸೂಪರ್ ಸ್ಟಾರ್ ವಿಜಯ್ ಅಭಿನಯದ 'ಬಿಗಿಲ್' ಸಿನಿಮಾ ಕಳೆದ ಅಕ್ಟೋಬರ್ ತಿಂಗಳಲ್ಲಿ ತೆರೆಕಂಡಿತ್ತು. ಅಟ್ಲಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಯನತಾರಾ ನಾಯಕಿಯಾಗಿ ನಟಿಸಿದ್ದು, ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸಿತ್ತು. ಅಂದ್ಹಾಗೆ ಈ ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿತ್ತು. ಖುಷಿಯ ವಿಚಾರ ಅಂದ್ರೆ ಈ ಸಿನಿಮಾ ಈಗ ಕನ್ನಡದಲ್ಲೂ ಬರುತ್ತಿದೆ.

ಹೌದು, ವಿಜಯ್ ಅಭಿನಯದ ಬಿಗಿಲ್ ಸಿನಿಮಾ ಕನ್ನಡದಲ್ಲಿ ಡಬ್ಬಿಂಗ್ ಆಗ್ತಿದೆ. ಅತಿ ಶೀಘ್ರದಲ್ಲಿ ಕನ್ನಡದ ಖ್ಯಾತ ಸುದ್ದಿ ವಾಹಿನಿಯಲ್ಲಿ ಕನ್ನಡ ಅವತರಣಿಕೆಯಲ್ಲಿ ಬಿಗಿಲ್ ಸಿನಿಮಾ ಪ್ರಸಾರವಾಗಲಿದೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಡಬ್ಬಿಂಗ್ ಗೆ ಹೆಚ್ಚು ಅವಕಾಶ ಮಾಡಿಕೊಡಲಾಗಿದೆ. ಪರಭಾಷೆಯ ಚಿತ್ರಗಳಲ್ಲು ಕರ್ನಾಟಕದಲ್ಲಿ ಕನ್ನಡಕ್ಕೆ ಡಬ್ಬಿಂಗ್ ಆಗಿ ಬರಲಿ ಎಂಬ ಒತ್ತಡ, ಬೇಡಿಕೆಯೂ ಹೆಚ್ಚಿದೆ.

Bigil Movie Set To Dubbed In Kannada

ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸಿದ್ದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿತ್ತು. ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ನಟಿಸಿದ್ದ ದಬಾಂಗ್ 3 ಚಿತ್ರವೂ ಕನ್ನಡದಲ್ಲಿ ಬಂದಿತ್ತು. ಆದರೆ, ಬಿಗಿಲ್ ಸಿನಿಮಾ ಕನ್ನಡದಲ್ಲಿ ಬಂದಿರಲಿಲ್ಲ.

ಈಗ ಆಲಿಯಾ ಭಟ್, ರಣ್ವೀರ್ ಸಿಂಗ್, ಅಮಿತಾಭ್ ಬಚ್ಚನ್ ಅಭಿನಯಿಸುತ್ತಿರುವ ಬ್ರಹ್ಮಾಸ್ತ್ರ ಚಿತ್ರವೂ ಕನ್ನಡದಲ್ಲಿ ಬರಲಿದೆ ಎಂದು ನಿರ್ಮಾಪಕ ಕರಣ್ ಜೋಹರ್ ಖಚಿತ ಪಡಿಸಿದ್ದಾರೆ. ಮತ್ತೊಂದೆಡೆ ತಮಿಳು ನಟ ಸೂರ್ಯ ನಟಿಸುತ್ತಿರುವ ಹೊಸ ಚಿತ್ರವೂ ಕನ್ನಡದಲ್ಲಿ ಬರಲಿ ಎಂಬ ಬೇಡಿಕೆ ಹೆಚ್ಚಾಗುತ್ತಿದೆ.

More from Filmibeat

English summary
Tamil actor Vijay starrer Bigil movie release in october 2019. now, this movie set to dubbed in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X