'ಬಿಲ್ಲಾ-2' ಖ್ಯಾತಿಯ ನಟ ಥೀಪೆಟ್ಟೆ ಗಣೇಶನ್ ನಿಧನ
ಬಿಲ್ಲಾ-2 ಖ್ಯಾತಿಯ ಖ್ಯಾತ ತಮಿಳು ನಟ ಥೀಪೆಟ್ಟಿ ಗಣೇಶನ್ ಇಂದು (ಮಾರ್ಚ್ 22) ನಿಧರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟ ಥೀಪೆಟ್ಟಿಟೆ ಗಣೇಶ್ ಅವರನ್ನು ಮಧುರೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ನಟ ಗಣೇಶನ್ ರೆನಿಗುಂಡಾ, ಕೊಲಮಾವು ಕೋಕಿಲಾ, ಉಸ್ತಾದ್ ಹೋಟೆಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಗಣೇಶನ್ ನಿಧನಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಶಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.
ಕಾರ್ತಿ ಎಂದು ಕರೆಯಲ್ಪಡುತ್ತಿದ್ದ ನಟ ಗಣೇಶನ್ ಕಳೆದ ವರ್ಷ ಸಹಾಯಕೋರಿ ವಿಡಿಯೋ ಹಂಚಿಕೊಂಡಿದ್ದರು. ತಲಾ ಅಜಿತ್ ಅವರಲ್ಲಿ ಸಹಾಯ ಕೋರಿದ್ದ ವಿಡಿಯೋ ವೈರಲ್ ಆಗಿತ್ತು. ಬಳಿಕ ರಾಘವ್ ಲಾರೆನ್ಸ್ ಅವರು ಈ ವಿಡಿಯೋ ಹಂಚಿಕೊಂಡಿದ್ದರು. ಅಲ್ಲದೆ ಅಜಿತ್ ಅವರ ಜೊತೆ ಮಾತನಾಡಿದ ಬಳಿಕ ಸಹಾಯ ಮಾಡಲಾಗಿತ್ತು.

ಗಣೇಶನ್ ಅವರ ಆಪ್ತ ನಿರ್ದೇಶಕ ಸೀನು ರಾಮಸ್ವಾಮಿ ಟ್ವೀಟ್ ಮಾಡಿ ಈ ಸುದ್ದಿ ಕೇಳಿ ಆಘಾತಗೊಂಡಿದ್ದೀನೆ ಎಂದು ಹೇಳಿ ಸಂತಾಪ ಸೂಚಿಸಿದ್ದಾರೆ. ತಮಿಳು ಜೊತೆಗೆ ಮಲಯಾಳಂನಲ್ಲೂ ಗಣೇಶ್ ನಟಿಸಿ ಸೈ ಎನಿಸಿಕೊಂಡಿದ್ದರು. ಕೊನೆಯದಾಗಿ ಗಣೇಶನ್ 2019ರಲ್ಲಿ ರಿಲೀಸ್ ಆದ ಕಣ್ಣೆ ಕಲೈಮಾನೆ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಮತ್ತೆ ತೆರೆಮೇಲೆ ಕಾಣಿಸಿಕೊಂಡಿಲ್ಲ.


Click it and Unblock the Notifications











