"ನಾನು ವಿಜಯ್ ರೀತಿ ನಟಿಯರ ಸೊಂಟ ಗಿಲ್ಲುತ್ತಾ ಪಾಲಿಟಿಕ್ಸ್ ನಾಟಕ ಮಾಡ್ತಿಲ್ಲ"; ಅಣ್ಣಾಮಲೈ
ಚೆನ್ನೈ ಟಿಎಎಸ್ಎಂಎಸಿ ಪ್ರಧಾನ ಕಚೇರಿಯ ಮುಷ್ಕರ ಪ್ರತಿಭಟನೆಗೆ ಮುಂದಾಗಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಪೊಲೀಸರು ನಿನ್ನೆ(ಮಾರ್ಚ್ 17) ವಶಕ್ಕೆ ಪಡೆದಿದ್ದರು. ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದಲ್ಲಿ (Tasmac) ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಮುಂದಾಗಿತ್ತು.
ಕಪ್ಪು ಶರ್ಟ್ ಧರಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು. ತಮಿಳು ನಟ ದಳಪತಿ ವಿಜಯ್ TVK ಪಕ್ಷ ಸ್ಥಾಪಿಸಿ ರಾಜಕೀಯರಂಗಕ್ಕೆ ಧುಮುಕಿರುವುದು ಗೊತ್ತೇಯಿದೆ. ಅವರ ವಿರುದ್ಧ ಕೂಡ ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ಪಕ್ಷದ ಬಿ-ಟೀಮ್ ವಿಜಯ್ ನೇತೃತ್ವದ TVK ಎಂದು ಅಣ್ಣಾಮಲೈ ಹೇಳಿದ್ದಾರೆ.

ನಟ ವಿಜಯ್ ಸ್ಥಾಪಿಸಿರುವ TVK ಪಕ್ಷ ಅಧಿಕಾರ ಉಳಿಸಿಕೊಳ್ಳಲು ಡಿಎಂಕೆ ಆರಂಭಿಸಿರುವ ಸೀಕ್ರೆಟ್ ಪ್ರಾಜೆಕ್ಟ್ ಎಂದು ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ. ನಟ ವಿಜಯ್ 'ವರ್ಕ್ ಫ್ರಂ ಹೋಮ್' ರಾಜಕಾರಣಿಯಾಗಿರದೇ ಜನರ ಬಳಿಗೆ ಬರಬೇಕು ಎಂದು ಅವರು ಚಾಲೆಂಜ್ ಮಾಡಿದ್ದಾರೆ. ಇವತ್ತು ನಮ್ಮ ಪ್ರತಿಭಟನೆ ತಡೆದಿದ್ದಾರೆ. ಮುಂದೆ ಸರ್ಕಾರದ ವಿರುದ್ಧ ಮತ್ತೆ ಹೋರಾಟ ನಡೆಸಲಿದ್ದೇವೆ. ನಾವು ದಿನಾಂಕ ಹೇಳುವುದಿಲ್ಲ. ಆದರೆ ಖಂಡಿತ ಪ್ರತಿಭಟನೆ ನಡೆಸುತ್ತೇವೆ ಎಂದು ಅಣ್ಣಾಮಲೈ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
"TVK ಪಕ್ಷದವರನ್ನು ಬರೋಕೆ ಹೇಳಿ. ಸ್ಕೂಲ್ ಮಕ್ಕಳ ರೀತಿ ಪಾಲಿಟಿಕ್ಸ್ ಮಾಡ್ತಿದ್ದಾರೆ. ಸಿನಿಮಾ ಚಿತ್ರೀಕರಣದಂತೆ ರಾಜಕೀಯ ಮಾಡ್ತಾರಾ? ವಿಜಯ್ ಸಿನಿಮಾ ಚಿತ್ರೀಕರಣದಲ್ಲಿ ಹಾಡು ಹಾಡುತ್ತಾ ರಾಜಕೀಯ ಮಾಡ್ತಿದ್ದಾರೆ. ಮತ್ತೆ ನಮ್ಮ ಬಗ್ಗೆ ಮಾತನಾಡುತ್ತಾರೆ. ಅವರು ತಮ್ಮ ಬೌಂಡರಿ ದಾಟಬಾರದು. ನಾನೇನು ವಿಜಯ್ ರೀತಿ ಡ್ಯಾನ್ಸ್ ಮಾಡಿಕೊಂಡು ಸವಾಲ್ ಹಾಕುತ್ತಿದ್ದೀನಾ? ನಾನು ಅಖಾಡಕ್ಕೆ ಇಳಿದು ಹೋರಾಟ ಮಾಡ್ತಿದ್ದೀನಿ, ಮಾತನಾಡ್ತಿದ್ದೀನಿ. ಇದೇನು ವಿಜಯ್ ವರ್ಕ್‌ಫ್ರಂ ಹೋಮ್ ಪಾಲಿಟಿಕ್ಸಾ? ಎಂದು ಅಣ್ಣಾಮಲೈ ಪ್ರಶ್ನಿಸಿದ್ದಾರೆ.

ಮಾತು ಮುಂದುವರೆಸಿರುವ ಅಣ್ಣಾಮಲೈ "ಹೇಳಿಕೆ ಬಿಡುಗಡೆ ಮಾಡುವಾಗ ಅದಕ್ಕೆ ಕಾರಣ ಇರಬೇಕು. ವಿಜಯ್ ರೀತಿ ನಾನು ನಟಿಯರ ಸೊಂಟ ಗಿಲ್ಲುತ್ತಾ, ಡ್ಯಾನ್ಸ್ ಮಾಡುತ್ತಾ ಸವಾಲು ಹಾಕುತ್ತಿದ್ದೀನಾ? ನಾನು ಅಖಾಡಕ್ಕೆ ಇಳಿದು ಮಾತನಾಡುತ್ತಿದ್ದೇನೆ, ವಿಜಯ್‌ಗೆ 50 ವರ್ಷಕ್ಕೆ ರಾಜಕೀಯಕ್ಕೆ ಬರಬೇಕು ಅನ್ನಿಸಿತ್ತಾ? 30 ವರ್ಷದಲ್ಲಿದಾಗ ಏನ್ ಮಾಡ್ತಿದ್ರು, 50 ವರ್ಷ ಆದಮೇಲೆ ಬುದ್ಧ ಎಬ್ಬಿಸಿ ರಾಜಕೀಯಕ್ಕೆ ಬರೋಕೆ ಹೇಳಿದ್ರಾ? ವಿಜಯ್ ಯಾರ ಬಿ-ಟೀಂ, ಯಾರು ನಾಟಕ ಮಾಡ್ತಿರೋದು, ನಾಟಕ ಮಾಡ್ತಿರೋದು ವಿಜಯ್, TVK. ದ್ರಾವಿಡ ಮುನ್ನೇಟ್ರ ಕಳಗಂ ಬಿ-ಟೀಮ್ ವಿಜಯ್. ಮತ್ತೆ ಅಧಿಕಾರ ಹಿಡಿಯಲು ಡಿಎಂಕೆ ಸೀಕ್ರೆಟ್ ಪ್ರಾಜೆಕ್ಟ್ ವಿಜಯ್ TVK ಪಕ್ಷ" ಎಂದು ವಾಗ್ದಾಳಿ ನಡೆಸಿದ್ದಾರೆ.
"ವಿಜಯ್ ಶೂಟಿಂಗ್ ಮಾಡುವ ಜಾಗದಿಂದಲೇ ಪತ್ರಿಕಾ ಪ್ರಕಟನೆ ಟೈಪ್ ಮಾಡಿ ರಿಲೀಸ್ ಮಾಡುವುದಲ್ಲ. ಸಿನಿಮಾಗಳಲ್ಲಿ ಧೂಮಪಾ, ಮದ್ಯಪಾನ ಮಾಡ್ತೀರಾ. ಇದೆಲ್ಲಾ ಮಾಡಿ Tasmac ಬಗ್ಗೆ ಮಾತನಾಡಲು ವಿಜಯ್‌ಗೆ ಯಾವ ಅರ್ಹತೆ ಇದೆ. 'ಮಾಸ್ಟರ್' ಚಿತ್ರದಲ್ಲಿ ಏನು ತೋರಿಸಿದ್ದಾರೆ. ಇಫ್ತಾರ್ ಕೂಟದಲ್ಲಿ ಬಂದು ಕೂತುಬಿಟ್ಟರೆ ಆಗುವುದಿಲ್ಲ.
ಕಳೆದ ವರ್ಷ ನಟ ವಿಜಯ್ 'ತಮಿಳಗ ವೆಟ್ರಿ ಕಳಗಂ' ಎಂಬ ಪಕ್ಷ ಸ್ಥಾಪಿಸಿದ್ದರು. ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮಾವೇಶಗಳನ್ನು ನಡೆಸಿ ಪಕ್ಷ ಸಂಘಟನೆ ನಡೆಸುತ್ತಿದ್ದಾರೆ. ಸದ್ಯ 'ಜನ ನಾಯಕನ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಅವರ ಕೊನೆಯ ಸಿನಿಮಾ ಎನ್ನಲಾಗ್ತಿದೆ. ಚಿತ್ರವನ್ನು ತಮ್ಮ ಪೊಲಿಟಿಕಲ್ ಎಂಟ್ರಿಗೆ ವೇದಿಕೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.


Click it and Unblock the Notifications











