For Quick Alerts
  ALLOW NOTIFICATIONS  
  For Daily Alerts

  ಸಂಕಷ್ಟದಲ್ಲಿ 'ತಲೈವಿ': ಚಿತ್ರದ ವಿರುದ್ಧ ದೂರು ದಾಖಲಿಸಲು ಕೋರ್ಟ್ ಅನುಮತಿ

  |

  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಖ್ಯಾತ ನಟಿ ಜಯಲಲಿತಾ ಬಯೋಪಿಕ್ ಈಗ ಭಾರಿ ಚರ್ಚೆಯಲ್ಲಿ ಇದೆ. ಬಾಲಿವುಡ್ ನಟಿ ಕಂಗನಾ ರಣಾವತ್ ತಲೈವಿಯಾಗಿ ಕಾಣಿಸಿಕೊಂಡಿದ್ದು ಬಹುನಿರೀಕ್ಷೆಯ ಚಿತ್ರದ ಟೀಸರ್ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಟೀಸರ್ ನಲ್ಲಿ ಜಯಲಲಿತಾ ಚಿತ್ರರಂಗದ ಬದುಕು ಮತ್ತು ರಾಜಕೀಯ ಎರಡನ್ನು ತೋರಿಸಲಾಗಿದೆ.

  'ತಲೈವಿ' ಜಯಲಲಿತಾ ಆಗಲು ಕಂಗನಾ ಮಾಡಿರೋದು ಇದೊಂದೇ ಸಾಧನೆ.!'ತಲೈವಿ' ಜಯಲಲಿತಾ ಆಗಲು ಕಂಗನಾ ಮಾಡಿರೋದು ಇದೊಂದೇ ಸಾಧನೆ.!

  ಸದ್ಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ತಲೈವಿ ಚಿತ್ರಕ್ಕೆ ಕಂಟಕ ಎದುರಾಗುವ ಸಾಧ್ಯತೆ ಇದೆ. ಜಯಲಲಿತಾ ಜೀವನವನ್ನು ತೆರೆ ಮೇಲೆ ತರ ಬಾರದು ಎಂದು ಜಯಲಲಿತಾ ಸಂಬಂಧಿ ದೀಪಾ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ವಿರುದ್ಧ ದೂರು ದಾಖಲಿಸಲು ಮದ್ರಾಸ್ ಹೈ ಕೋರ್ಟ್ ಅನುಮತಿ ನೀಡಿದೆ.

  ದೂರು ನೀಡಲು ಕೋರ್ಟ್ ಅನುಮತಿ

  ದೂರು ನೀಡಲು ಕೋರ್ಟ್ ಅನುಮತಿ

  ಜಯಲಲಿತಾ ಸಂಬಂಧಿ ಎಂದು ಹೇಳಲಾಗುವ ದೀಪಾ ಎನ್ನುವವರು ಜಯಲಲಿತಾ ಬಗ್ಗೆ ತಯಾರಾಗುತ್ತಿರುವ ಸಿನಿಮಾಗೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಮದ್ರಾಸ್ ಹೈ ಕೋರ್ಟ್ ಈಗ ದೀಪಾ ಅವರಿಗೆ ಸಿನಿಮಾ ತಂಡದ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಿದೆ. ಹಾಗಾಗಿ ತಲೈವಿ ಅಥವಾ ಜಯಲಲಿತಾ ಅವರ ಹೆಸರಿನಲ್ಲಿ ತಯಾರಾಗುತ್ತಿರುವ ಯಾವುದೆ ಚಿತ್ರಗಳ ವಿರುದ್ಧ ದೂರ ದಾಖಲಿಸಬಹುದು.

  ಕಂಗನಾ ರಣಾವತ್ ನಿರ್ಮಾಣದಲ್ಲಿ 'ಅಯೋಧ್ಯೆ' ವಿವಾದ ಕುರಿತ ಸಿನಿಮಾಕಂಗನಾ ರಣಾವತ್ ನಿರ್ಮಾಣದಲ್ಲಿ 'ಅಯೋಧ್ಯೆ' ವಿವಾದ ಕುರಿತ ಸಿನಿಮಾ

  ಕೋರ್ಟ್ ಮೆಟ್ಟಿಲೇರಿದ ದೀಪಾ

  ಕೋರ್ಟ್ ಮೆಟ್ಟಿಲೇರಿದ ದೀಪಾ

  ಜಯಲಲಿತಾ ಅವರ ಸಿನಿ ಮತ್ತು ರಾಜಕೀಯ ಜೀವನ ಕುರಿತಾದ ಚಿತ್ರಗಳು ಸಾಕಷ್ಟು ಬರುತ್ತಿವೆ. ಈಗಾಗಲೆ ತಲೈವಿ, ದಿ ಐರನ್ ಲೇಡಿ ಮತ್ತು ವೆಬ್ ಸಿರೀಸ್ ತಯಾರಾಗುತ್ತಿವೆ. ಹಾಗಾಗಿ ತಿಂಗಳ ಮುಂಚೆಯೆ ಜಯಲಲಿತಾ ಅವರ ವಯಕ್ತಿಕ ಮತ್ತು ರಾಜಕೀಯ ಜೀವನದ ಬಗ್ಗೆ ಮಾಡಲಾಗುತ್ತಿರುವ ಚಿತ್ರಗಳಿಗೆ ತಡೆಯಾಜ್ಞೆ ಕೋರಿ ದೀಪಾ ಹೈ ಕೋರ್ಟ್ ಮೆಟ್ಟಿಲೇರಿದ್ದರು.

  ದೀಪಾ ಅವರನ್ನು ಸಂಪರ್ಕಿಸದ ಚಿತ್ರತಂಡ

  ದೀಪಾ ಅವರನ್ನು ಸಂಪರ್ಕಿಸದ ಚಿತ್ರತಂಡ

  ಚಿತ್ರ ಸೆಟ್ಟೇರುವ ಮೊದಲು ಚಿತ್ರದ ಕಥೆಯನ್ನು ಸಂಬಂಧಿಯಾದ ದೀಪಾ ಅವರಿಗೆ ತೋರಿಸಬೇಕಿತ್ತು. ಆದರೆ ಚಿತ್ರತಂಡ ದೀಪಾ ಅವರನ್ನು ಸಂಪರ್ಕಿಸದೆ ಅವರ ಅನುಮತಿಯನ್ನು ಪಡೆಯದೆ ಚಿತ್ರೀಕರಣ ಮಾಡುತ್ತಿರುವುದನ್ನು ವಿರೋಧಿಸಿದ್ದಾರೆ ದೀಪಾ. ಸದ್ಯ ದೀಪಾ ಅವರ ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ.

  ಅಮಿತಾಬ್ ಬಚ್ಚನ್ ಪ್ರಕಾರ ಬಾಲಿವುಡ್ 'ನಂ. 1' ನಟಿಯಾರು ಗೊತ್ತಾ?ಅಮಿತಾಬ್ ಬಚ್ಚನ್ ಪ್ರಕಾರ ಬಾಲಿವುಡ್ 'ನಂ. 1' ನಟಿಯಾರು ಗೊತ್ತಾ?

  ತಲೈವಿ ಟೀಸರ್ ಗೆ ಮಿಶ್ರ ಪ್ರತಿಕ್ರಿಯೆ

  ತಲೈವಿ ಟೀಸರ್ ಗೆ ಮಿಶ್ರ ಪ್ರತಿಕ್ರಿಯೆ

  ತಲೈವಿ ಟೀಸರ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಂಗನಾ ಅವರ ಮೇಕಪ್ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ. ಟೀಸರ್ ನ ಮೊದಲ ಭಾಗ ಚಿತ್ರಾಭಿಮಾನಿಗಳ ಮನ ಗೆಲ್ಲಲು ಯಶಸ್ವಿಯಾಗಿದೆ. ಆದರೆ ಜಯಲಲಿತಾ ಅವರ ರಾಜಕೀಯ ಭಾಗದಲ್ಲಿ ಕಂಗನಾ ಬದಲಾವಣೆ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಇನ್ನು ಜಯಲಲಿತಾ ಜೀವನಾಧಾರಿತ ದಿ ಐರನ್ ಲೇಡಿ ಚಿತ್ರ ಕೂಡ ತಯಾರಾಗುತ್ತಿದೆ.

  English summary
  Kangana Ranaut starrer Jayalalitha biopic Thalaivi in trouble. Madras High Court has given permission to sue the makers of ‘Thalaivi’ and any other projects on the late CM’s life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X