ಶಿವಣ್ಣ, ಮೋಹನ್ ಲಾಲ್ ಬಳಿಕ ಜೈಲರ್ ತಂಡ ಸೇರಿದ ಜಾಕಿ ಶ್ರಾಫ್; ಎಲ್ಲಾ ಇಂಡಸ್ಟ್ರಿಯ ಸ್ಟಾರ್‌ಗಳು ಒಂದೇ ಚಿತ್ರದಲ್ಲಿ!

Bollywood star Jackie Shroff playing a special role in Rajnikanths Jailer movie

ಚಿತ್ರರಂಗದಲ್ಲಿ ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗಿದ್ದು, ಈ ಟ್ರೆಂಡ್ ಹುಟ್ಟಿಕೊಂಡ ಬಳಿಕ ಒಂದು ಚಿತ್ರರಂಗದ ನಟರು ಬೇರೆ ಚಿತ್ರರಂಗದ ಸಿನಿಮಾಗಳಲ್ಲಿ ನಟಿಸುವುದು ಕಾಮನ್ ಸಂಗತಿಯಾಗಿಬಿಟ್ಟಿದೆ. ಇನ್ನು ಸಣ್ಣ ನಟರು ಮಾತ್ರವಲ್ಲದೇ ದೊಡ್ಡ ದೊಡ್ಡ ಸ್ಟಾರ್ ನಟರೇ ಚಿತ್ರರಂಗದ ಬೇಲಿ ದಾಟಿ ಬೇರೆ ಚಿತ್ರರಂಗಗಳಲ್ಲಿ ನಟಿಸುತ್ತಿದ್ದಾರೆ.

ಅದೇ ರೀತಿ ಕನ್ನಡದ ಸ್ಟಾರ್ ನಟರೂ ಸಹ ಇತರೆ ಇಂಡಸ್ಟ್ರಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ತೆಲುಗಿನ ಗೌತಮಿ ಪುತ್ರ ಶಾತಕರ್ಣಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ಪರಭಾಷೆಯೊಂದಕ್ಕಾಗಿ ಬಣ್ಣ ಹಚ್ಚಿದ್ದ ಶಿವ ರಾಜ್‌ಕುಮಾರ್ ಈಗ ರಜನಿಕಾಂತ್ ನಟನೆಯ ಜೈಲರ್ ಚಿತ್ರದ ಮೂಲಕ ಕಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಡಾಕ್ಟರ್, ಬೀಸ್ಟ್ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಹೆಸರು ಮಾಡಿರುವ ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಬಾರಿ ದೊಡ್ಡ ಯೋಜನೆಯೊಂದನ್ನೇ ಹಾಕಿಕೊಂಡಿದೆ.

ಹೌದು, ಭಾರತದ ಪ್ರತಿ ಪ್ರಮುಖ ಚಿತ್ರರಂಗಗಳ ಒಬ್ಬೊಬ್ಬ ನಟರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಿಂದ ಶಿವ ರಾಜ್‌ಕುಮಾರ್, ಮಲಯಾಳಂನಿಂದ ಮೋಹನ್ ಲಾಲ್, ತೆಲುಗಿನ ಸುನಿಲ್ ಈ ಹಿಂದೆ ಜೈಲರ್ ಚಿತ್ರತಂಡ ಸೇರಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಚರ್ಚೆಗೆ ಕಾರಣವಾಗಿತ್ತು. ಸೌತ್‌ನ ಎಲ್ಲಾ ಚಿತ್ರರಂಗದವರೂ ಈ ಚಿತ್ರದಲ್ಲಿದ್ದಾರೆ, ಬಾಲಿವುಡ್‌ನ ಕಲಾವಿದರೊಬ್ಬರೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯವನ್ನು ಸಿನಿ ರಸಿಕರು ವ್ಯಕ್ತಪಡಿಸಿದ್ದರು.

ಇದೀಗ ಅಂತಹ ಸಿನಿ ರಸಿಕರ ಆಸೆ ಈಡೇರಿದೆ. ಬಾಲಿವುಡ್‌ನ ಖ್ಯಾತ ನಟ ಜಾಕಿ ಶ್ರಾಫ್ ಜೈಲರ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜೋಧ್‌ಪುರ್‌ನಲ್ಲಿ ನಡೆಯುತ್ತಿರುವ ಜೈಲರ್ ಚಿತ್ರದ ಸೆಟ್‌ನಲ್ಲಿ ಕಾಣಿಸಿಕೊಂಡ ಜಾಕಿ ಶ್ರಾಫ್ ಅವರಿಗೆ ಮಾಧ್ಯಮದವರು ಚಿತ್ರದಲ್ಲಿ ನಟಿಸುತ್ತಿದ್ದೀರ ಎಂಬ ಪ್ರಶ್ನೆಯನ್ನು ಹಾಕಿದರು. ಈ ಪ್ರಶ್ನೆಗೆ ಉತ್ತರಿಸಿದ ಜಾಕಿ ಶ್ರಾಫ್ ತಾನೂ ಸಹ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಜಾಕಿ ಶ್ರಾಫ್ ಈ ಹಿಂದೆ ಪುನೀತ್ ರಾಜ್‌ಕುಮಾರ್ ನಟನೆಯ ಅಣ್ಣಾಬಾಂಡ್ ಚಿತ್ರದಲ್ಲೂ ಸಹ ನಟಿಸಿದ್ದರು.

ಇನ್ನು ಸದ್ಯ ಜೈಲರ್ ಚಿತ್ರದಲ್ಲಿ ನಟಿಸುತ್ತಿರುವ ಶಿವ ರಾಜ್‌ಕುಮಾರ್ ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲೂ ಸಹ ನಟಿಸಲಿದ್ದು, ಇದು ಶಿವಣ್ಣನ ಎರಡನೇ ತಮಿಳು ಸಿನಿಮಾವಾಗಲಿದೆ.

More from Filmibeat

English summary
Bollywood star Jackie Shroff playing a special role in Rajnikanth's Jailer movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X