For Quick Alerts
  ALLOW NOTIFICATIONS  
  For Daily Alerts

  ಮತ್ತೆ ದಕ್ಷಿಣದತ್ತ ಸಂಜಯ್ ದತ್: ಸ್ಟಾರ್ ನಟನಿಗೆ ವಿಲನ್ ಆಗಲು ಪಡೆದರು ದುಬಾರಿ ಸಂಭಾವನೆ!

  |

  ನಟ ಸಂಜಯ್ ದತ್, ಬಾಲಿವುಡ್‌ನ ಖ್ಯಾತ ನಟ. ನಾಯಕ ನಟನಾಗಿ ಮಾತ್ರವೇ ಅಲ್ಲದೆ ಖಳನಟನಾಗಿಯೂ ಸಂಜಯ್ ಜನಪ್ರಿಯರು. ಆದರೆ ಬಾಲಿವುಡ್‌ಗೆ ಸೀಮಿತವಾಗಿದ್ದ ಇವರ ಜನಪ್ರಿಯತೆಯನ್ನು ದಕ್ಷಿಣಕ್ಕೆ ಪಸರಿಸಿದ್ದು 'ಕೆಜಿಎಫ್ 2'.

  'ಕೆಜಿಎಫ್ 2' ಸಿನಿಮಾದಲ್ಲಿ ರಾಕಿಭಾಯ್‌ ನಷ್ಟೆ ಅಧೀರ ಮಾತ್ರವೂ ಜನಪ್ರಿಯವಾಗಿತ್ತು. ರಾಕಿಭಾಯ್ v/s ಅಧೀರ ಎಪಿಸೋಡ್‌ಗಳು ಮಾಸ್ ಪ್ರೇಕ್ಷಕರನ್ನು ಬಹುವಾಗಿ ರಂಜಿಸಿದ್ದವು. ಅದರಲ್ಲಿಯೂ ಅಧೀರನ ಗೆಟಪ್ ಬಹಳ ಜನಪ್ರಿಯವಾಗಿತ್ತು.

  'ಕೆಜಿಎಫ್ 2' ಬಳಿಕ ದಕ್ಷಿಣ ಭಾರತದ ಇನ್ನಾವ ಸಿನಿಮಾಗಳಲ್ಲಿಯೂ ಸಂಜಯ್ ದತ್ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ದಕ್ಷಿಣದ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿ ನಟಿಸಲು ಸೈ ಎಂದಿದ್ದಾರೆ ಸಂಜು ಬಾಬ.

  ತಮಿಳಿನ ಸ್ಟಾರ್ ನಟ ವಿಜಯ್‌ ಸಿನಿಮಾದಲ್ಲಿ ನಟಿಸಲು ಸಂಜಯ್ ದತ್ ಒಪ್ಪಿಕೊಂಡಿದ್ದು, ಸಿನಿಮಾದಲ್ಲಿ ಪವರ್‌ಫುಲ್ ವಿಲನ್ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ರ ನಲವತ್ತನೆ ಸಿನಿಮಾವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ.

  ಸಿನಿಮಾದ ಕತೆಯ ಅನುಸಾರ ಪವರ್‌ಫುಲ್ ವಿಲನ್‌ಗಾಗಿ ಬೇಕಾಗಿದ್ದರಿಂದ ಸಂಜಯ್ ದತ್ ಅನ್ನು ಲೋಕೇಶ್ ಕನಕರಾಜನ್ ಸಂಪರ್ಕಿಸಿದ್ದರಂತೆ. ಕತೆ ಕೇಳಿ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರೆ ಸಂಜಯ್, ಮಾತ್ರವಲ್ಲದೆ ಭಾರಿ ದೊಡ್ಡ ಸಂಭಾವನೆಯನ್ನೂ ಸಹ ಸಂಜಯ್ ಈ ಸಿನಿಮಾಕ್ಕಾಗಿ ಪಡೆಯುತ್ತಿದ್ದಾರೆ.

  ಸಿನಿಮಾದಲ್ಲಿ ಸಂಜಯ್ ದತ್‌ರದ್ದು ಪ್ರಮುಖ ವಿಲನ್ ಪಾತ್ರವಾದರೂ ಹೆಚ್ಚು ಸ್ಕ್ರೀನ್ ಟೈಮ್ ಇಲ್ಲವಂತೆ ಸಂಜಯ್ ದತ್ ಪಾತ್ರದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಮುಗಿಯಲಿದೆ. ಹಾಗಿದ್ದಾಗಿಯೂ ಬರೋಬ್ಬರಿ ಹತ್ತು ಕೋಟಿ ಸಂಭಾವನೆಯನ್ನು ಸಂಜಯ್ ದತ್ ಪಡೆಯುತ್ತಿದ್ದಾರೆ.

  ಕಮಲ್ ಹಾಸನ್ ನಟನೆಯ 'ವಿಕ್ರಂ' ಸಿನಿಮಾ ಹಿಟ್ ಆದ ಖುಷಿಯಲ್ಲಿರುವ ಲೋಕೇಶ್ ಕನಕರಾಜ್ ಇದೀಗ ವಿಜಯ್ ಜೊತೆ ಮತ್ತೊಂದು ಭರ್ಜರಿ ಆಕ್ಷನ್ ಸಿನಿಮಾ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಲೋಕೇಶ್ ಕನಕರಾಜ್ ಸಿನಿಮಾಗಳಲ್ಲಿ ವಿಲನ್‌ಗಳು ಬಹಳ ಪವರ್‌ಫುಲ್ ಆಗಿರುತ್ತಾರೆ. ಅಂತೆಯೇ ಇದೀಗ ವಿಜಯ್‌ ಜೊತೆಗಿನ ಸಿನಿಮಾದಲ್ಲಿ ದುಪ್ಪಟ್ಟು ಪವರ್‌ಫುಲ್ ವಿಲನ್ ಅನ್ನು ಪರಿಚಯಿಸುತ್ತಿದ್ದಾರೆ.

  ನಟ ವಿಜಯ್ ಪ್ರಸ್ತುತ ದಿಲ್ ರಾಜು ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ನಿರ್ದೇಶಕರೊಬ್ಬರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಳಿಕ ಲೋಕೇಶ್ ಕನಕರಾಜ್ ಜೊತೆಗಿನ ಸಿನಿಮಾ ಪ್ರಾರಂಭವಾಗಲಿದೆ.

  English summary
  Bollywood star Sanjay Dutt acting in Tamil star Vijay's next movie. This movie is directing by Lokesh Kanakaraj.
  Monday, September 12, 2022, 17:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X