ಸೂಪರ್ ಸ್ಟಾರ್ ರಜನಿಕಾಂತ್ ಗೆ ಬಾಂಬ್ ಬೆದರಿಕೆ ಕರೆ: ಚೆನ್ನೈ ಪೊಲೀಸರಿಂದ ಶೋಧ
ಸೂಪರ್ ಸ್ಟಾರ್ ರಜನಿಕಾಂತ್ ಗೆ ಅಪರಿಚಿತ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಚೆನ್ನೈನ ಪೊಯಸ್ ಗಾರ್ಡನ್ ನ ರಜನಿಕಾಂತ್ ನಿವಾಸಕ್ಕೆ ಗುರುವಾರ ಅಪರಿಚ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿರುವ ಬಗ್ಗೆ ಚೆನ್ನೈನ ಕೆಲವು ಸುದ್ದಿ ವಾಹಿನಿಗಳು ವರದಿ ಮಾಡಿವೆ.
Recommended Video
ಬಾಂಬ್ ಬೆದರಿಕೆ ಕರೆ ಬಂದ ನಂತರ ಸೂಪರ್ ಸ್ಟಾರ್ ಚೆನ್ನೈ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳುದುಬಂದಿದೆ. ನಂತರ ಪೊಲೀಸರು ಸ್ನಿಫರ್ ನಾಯಿಗಳು ಮತ್ತು ಬಾಂಬ್ ಡಿಟೆಕ್ಟರ್ ಗಳ ಸಹಾಯದಿಂದ ಸೂಪರ್ ನಿವಾಸದ ಸುತ್ತ ಶೋಧ ಕಾರ್ಯ ನಡೆಸುತ್ತಿದ್ದಾರಂತೆ.
ಸುದ್ದಿ ಕೇಳಿ ಆತಂಕಗೊಂಡ ಅಭಿಮಾನಿಗಲು ರಜನಿಕಾಂತ್ ಮುಂದೆ ಬಂದು ಜಮಾಯಿಸುತ್ತಿದ್ದಾರೆ. ಕೊರೊನಾ ವೈರಸ್ ಹಾವಳಿಯ ಪರಿಣಾಮ ಪೊಲೀಸರು ಜನರನ್ನು ಚದುರಿಸುವ ಕೆಲಸ ಮಾಡುತ್ತಿದ್ದಾರೆ. ಸೂಪರ್ ಸ್ಟಾರ್ ಗೆ ಬಾಂಬ್ ಬೆದರಿಕೆ ಹಾಕಿದ್ದು ಯಾರು, ಯಾಕೆ ಎನ್ನುವ ಬಗ್ಗೆ ಪೊಲೀಸ್ ತನಿಖೆಯ ಬಳಿಕವೆ ಹೊರಬೀಳಬೇಕಿದೆ.

ಸೂಪರ್ ಸ್ಟಾರ್ ರಜಿನಿಕಾಂತ್ ಕೊನೆಯದಾಗಿ ದರ್ಬಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮುರುಗದಾಸ್ ನಿರ್ದೇಶನ ಮಾಡಿದ್ದರು. ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸದ್ಯ ಸೂಪರ್ ಸ್ಟಾರ್ ಅಣ್ಣಾತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ರಜನಿಕಾಂತ್ ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿಯೂ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











