For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಮನೆಗೆ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಪೊಲೀಸರು

  |

  ಸೂಪರ್ ಸ್ಟಾರ್ ರಜನಿಕಾಂತ್ ನಿವಾಸಕ್ಕೆ ಬಾಂಬ್ ಹಾಕುವುದಾಗಿ ಅಪರಿಚಿತ ವ್ಯಕ್ತಿ ಕರೆ ಮಾಡಿ ಬೆದರಿಕೆ ಹಾಕಿದ್ದರು. ಬೆದರಿಕೆ ಕರೆ ಬಂದು ಒಂದು ದಿನದೊಳಗೆ ಚೆನ್ನೈ ಪೊಲೀಸರು ಬೆದರಿಕೆ ಹಾಕಿದ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ಚೆನ್ನೈನ ಪೋಯಸ್ ಗಾರ್ಡನ್ ರಜನಿಕಾಂತ್ ನಿವಾಸಕ್ಕೆ ಗುರುವಾರ ಅಪರಿಚ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿರುವ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಆತಂಕ ಗೊಂಡಿದ್ದರು.

  ರವಿಚಂದ್ರನ್ ಈ ಚಿತ್ರದಲ್ಲಿ ನಟಿಸದೇ ಇದ್ದಿದ್ರೆ ಅವರ ತಮ್ಮ ಇವತ್ತು ಸ್ಟಾರ್ ಆಗ್ತಿದ್ರಾ?? | Ravi Chandran | Eshwar

  ಅಂದ್ಹಾಗೆ ಬೆದರಿಕೆ ಹಾಕಿದ ವ್ಯಕ್ತಿಯ ಬಗ್ಗೆ ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಹೌದು, 8 ತರಗತಿ ಓದುತ್ತಿರುವ ವಿದ್ಯಾರ್ಥಿ ರಜನಿಕಾಂತ್ ಮನೆಗೆ ಬಾಂಬ್ ಹಾಕುವುದಾಗಿ ಬೆದರಿಕೆ ಒಡ್ಡಿರುವ ಬಗ್ಗೆ ಪೊಲೀಸರು ದೃಢಪಡಿಸಿದ್ದಾರೆ.

  ಸೂಪರ್ ಸ್ಟಾರ್ ರಜನಿಕಾಂತ್ ಗೆ ಬಾಂಬ್ ಬೆದರಿಕೆ ಕರೆ: ಚೆನ್ನೈ ಪೊಲೀಸರಿಂದ ಶೋಧಸೂಪರ್ ಸ್ಟಾರ್ ರಜನಿಕಾಂತ್ ಗೆ ಬಾಂಬ್ ಬೆದರಿಕೆ ಕರೆ: ಚೆನ್ನೈ ಪೊಲೀಸರಿಂದ ಶೋಧ

  ಬಾಂಬ್ ಬೆದರಿಕೆ ಕರೆ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ, ಸ್ನಿಫರ್ ನಾಯಿಗಳು ಮತ್ತು ಬಾಂಬ್ ಡಿಟೆಕ್ಟರ್ ಗಳ ಸಹಾಯದಿಂದ ಸೂಪರ್ ನಿವಾಸದ ಸುತ್ತ ಶೋಧ ಕಾರ್ಯ ನಡೆಸಿದ್ದರು. ಕೊರೊನಾ ವೈರಸ್ ಹಾವಳಿಯ ಪರಿಣಾಮ ರಜನಿಕಾಂತ್ ಮನೆಯೊಳಗೆ ಪೊಲೀಸರ ಪ್ರವೇಶಕ್ಕೆ ಅನುಮತಿ ನೀಡಿಲ್ಲ ಎನ್ನುವ ಬಗ್ಗೆ ತಿಳಿದುಬಂದಿದೆ.

  ನಂತರ ಪೊಲೀಸರು ದೂರವಾಣಿ ಕರೆ ಮಾಡಿದ ವ್ಯಕ್ತಿಯ ಹಿಂದೆ ಬಿದ್ದು ತನಿಖೆ ನಡೆದದ್ದಾರೆ. 8 ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಕರೆ ಮಾಡಿ ಬೆದರಿಕೆ ಹಾಕಿರುವುದು ಎಂದು ಗೊತ್ತಾಗಿದೆ. ವಿದ್ಯಾರ್ಥಿಯನ್ನು ವಿಚಾರಣೆ ಮಾಡಿದಾಗ ಕಲಿಕೆಯಲ್ಲಿ ಅಸಮರ್ಥತೆ ಇರುವ ಬಾಲಕ ಎನ್ನುವುದು ಗೊತ್ತಾಗಿದೆ. ಆತನ ವೈದ್ಯಕೀಯ ದಾಖಲೆಯಗಳನ್ನು ಪರಿಶೀಲಿಸಿದ ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

  ಸೂಪರ್ ಸ್ಟಾರ್ ರಜಿನಿಕಾಂತ್ ಕೊನೆಯದಾಗಿ ದರ್ಬಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮುರುಗದಾಸ್ ನಿರ್ದೇಶನ ಮಾಡಿದ್ದರು. ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸದ್ಯ ಸೂಪರ್ ಸ್ಟಾರ್ ಅಣ್ಣಾತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ರಜನಿಕಾಂತ್ ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿಯೂ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Bomb threat to Super star Rajinikanth's residence. Chennai police trace caller.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X